ಬೆಳಗಾವಿ: ಜಿಲ್ಲೆಯ ಬೈಲಹೊಂಗಲಪಟ್ಟಣದ ಪ್ರಭುನಗರ ನಾಲ್ಕನೇ ಅಡ್ಡ ರಸ್ತೆ ನಿವಾಸಿ, ರೈತ ಮಹಿಳೆ ಸಾಬವ್ವ ಹುಡೇದ ಕುಟುಂಬಸ್ಥರಿಗೆ ಸೇರಿದ ಜೋಡೆತ್ತುಗಳು ಉಸಿರುಗಟ್ಟಿ ಸಾವಿಗೀಡಾಗಿವೆ.
ದನದ ಕೊಟ್ಟಿಗೆಯಲ್ಲಿ ಬೆಲಗ (ಕಂಬ) ಮುರಿದ ಪರಿಣಾಮ ಜೋಡೆತ್ತುಗಳ ಹಗ್ಗ ಒಂದಕ್ಕೊಂದು ಸಿಲುಕಿಕೊಂಡಿವೆ. ಪರಿಣಾಮ ಅವು ಉಸಿರುಗಟ್ಟಿ ಕೊನೆಯುಸಿರೆಳೆದಿವೆ. ಮಾಲೀಕರಿಗೆ ವಿಷಯ ತಿಳಿಯುವಷ್ಟರಲ್ಲಿ ಜೋಡೆತ್ತುಗಳ ಪ್ರಾಣ ಪಕ್ಷಿ ಹಾರಿ ಹೋಗಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಸುಮಾರು ಆರು ಲಕ್ಷ ಮೌಲ್ಯದ ಜೋಡೆತ್ತುಗಳು ಇವಾಗಿವೆ. ರೈತರ ಜಮೀನಿನಲ್ಲಿ ಸಕಲ ವಿಧಿ, ವಿಧಾನದಿಂದ ಅಂತ್ಯಕ್ರಿಯೆ ನೆರವೇರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಘಟನಾ ಸ್ಥಳಕ್ಕೆ ಗ್ರಾಮಲೆಕ್ಕಾಧಿಕಾರಿ ಪಿ.ಎಂ.ಕಮ್ಮಾರ, ಪಶು ವೈದ್ಯ ಮಹೇಶ ಮೇಟಿ ಭೇಟಿ ನೀಡಿದ್ದಾರೆ.
ಇದನ್ನೂ ಓದಿ: ಲಿಂಗಸುಗೂರಿನಲ್ಲಿ ಸಿಡಿಲು ಬಡಿದು 2 ಎತ್ತುಗಳು ಸಾವು