ETV Bharat / state

ತಬ್ಬಲಿ ಮಕ್ಕಳ ಆರೈಕೆಗೆ ಕುಟೀರ ಸ್ಥಾಪಿಸಿ : ಸಚಿವೆ ಜೊಲ್ಲೆಗೆ ಸಚಿವ ಕಾರಜೋಳ ಸಲಹೆ - DCM Govinda karjola insist to open Orphaned child care center

ಇಂತಹ ಸ್ಥಿತಿಯಲ್ಲಿ ಮಕ್ಕಳ ಆರೈಕೆಗಾಗಿ ಮಹಿಳಾ‌ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಕೂಡಲೇ ಅನಾಥ ಮಕ್ಕಳ ಕುಟೀರಗಳನ್ನು ಸ್ಥಾಪಿಸಿ, ಅವರಿಗೆ ಮನೋಸ್ಥೈರ್ಯ ತುಂಬಿ, ಅಗತ್ಯ ಚಿಕಿತ್ಸೆ, ಆಹಾರದೊಂದಿಗೆ ಅಗತ್ಯ ಸೌಲಭ್ಯಗಳನ್ನು ದೊರಕಿಸಿಕೊಟ್ಟು ಪೋಷಿಸಲು ನೆರವಾಗಬೇಕಿದೆ..

dcm-govinda-karjola-insist-to-open-orphaned-child-care-center
ಸಚಿವೆ ಜೊಲ್ಲೆ ಹಾಗೂ ಸಚಿವ ಕಾರಜೋಳ
author img

By

Published : May 10, 2021, 8:19 PM IST

ಬೆಳಗಾವಿ : ಕೊರೊನಾ ರೋಗದಿಂದ ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡು ತಬ್ಬಲಿಯಾದ ಮಕ್ಕಳ ಆರೈಕೆ ಹಾಗೂ ಪುನರ್ವಸತಿಗಾಗಿ ಎಲ್ಲಾ ಜಿಲ್ಲೆಗಳಲ್ಲಿ ಅನಾಥ ಮಕ್ಕಳ ಕುಟೀರಗಳನ್ನು ಸ್ಥಾಪಿಸಲು ಯೋಜನೆಯನ್ನು ರೂಪಿಸುವಂತೆ ಡಿಸಿಎಂ ಗೋವಿಂದ ಕಾರಜೋಳ ಸಲಹೆ ನೀಡಿದ್ದಾರೆ.

ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಿಗೆ ಪತ್ರ ಬರೆದಿರುವ ಅವರು, ಕೆಲವು ಜಿಲ್ಲೆಗಳಲ್ಲಿ ನಾನು ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಕೋವಿಡ್‌ನಿಂದ ತಂದೆ ತಾಯಿ ಇಬ್ಬರನ್ನು ಕಳೆದುಕೊಂಡು ಮಕ್ಕಳು ರೋದಿಸುತ್ತಿದ್ದ ಮನಕಲಕುವಂತಹ ಅನೇಕ ದೃಶ್ಯ ಕಂಡಿದ್ದೇನೆ. ಇಂತಹ ದುಃಸ್ಥಿತಿಯಲ್ಲಿರುವ ಮಕ್ಕಳ ಕುರಿತು ಕೂಡಲೇ ಸಮೀಕ್ಷೆಯನ್ನು ನಡೆಸಬೇಕು ಎಂದಿದ್ದಾರೆ.

ಇಂತಹ ಸ್ಥಿತಿಯಲ್ಲಿ ಮಕ್ಕಳ ಆರೈಕೆಗಾಗಿ ಮಹಿಳಾ‌ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಕೂಡಲೇ ಅನಾಥ ಮಕ್ಕಳ ಕುಟೀರಗಳನ್ನು ಸ್ಥಾಪಿಸಿ, ಅವರಿಗೆ ಮನೋಸ್ಥೈರ್ಯ ತುಂಬಿ, ಅಗತ್ಯ ಚಿಕಿತ್ಸೆ, ಆಹಾರದೊಂದಿಗೆ ಅಗತ್ಯ ಸೌಲಭ್ಯಗಳನ್ನು ದೊರಕಿಸಿಕೊಟ್ಟು ಪೋಷಿಸಲು ನೆರವಾಗಬೇಕಿದೆ. ಅಲ್ಲದೆ, ಅಂತಹ ಮಕ್ಕಳಿಗೆ ಆರೈಕೆ ಮಾಡಿ ಪೋಷಿಸಲು ಕ್ರಮಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಕೋರಿದ್ದಾರೆ.

ಓದಿ: ಮೆಟ್ರೋ ರೈಲು ಯೋಜನೆಯ 2ಎ ಮತ್ತು 2ಬಿ ಹಂತದ ಯೋಜನೆಗಳಿಗೆ ಅನುಮೋದನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.