ಚಿಕ್ಕೋಡಿ: ನೆರೆ ಸಂತ್ರಸ್ತರ ನೋವಿಗೆ ಸ್ಪಂದಿಸುವಂತೆ, ಸೂರ್ಯ ಪಥ ಬದಲಿಸಿದರೂ, ಬದಲಾಗಿಲ್ಲ ನೆರೆ ಸಂತ್ರಸ್ತ ಸ್ಥಿತಿ ಎಂದು ಈಟಿವಿ ಭಾರತ ಬಿತ್ತರಿಸಿದ್ದ ವಿಸ್ತೃತ ವರದಿಗೆ ಡಿಸಿಎಂ ಗೋವಿಂದ ಕಾರಜೋಳ ಸ್ಪಂದಿಸಿದ್ದಾರೆ.
ಈ ವರದಿಗೆ ಸ್ಪಂದಿಸಿರುವ ಡಿಸಿಎಂ ಅವರು ಜಿಲ್ಲಾದಿಕಾರಿಗೆ ಫೋನ್ ಮಾಡಿ ನೆರೆ ಸಂತ್ರಸ್ತರ ಸಮಸ್ಯೆಗೆ ಸ್ಪಂದಿಸುವಂತೆ ಸೂಚಿಸಿದ್ದಾರೆ.
ಸೂರ್ಯ ಪಥ ಬದಲಿಸಿದರೂ, ಬದಲಾಗ್ಲಿಲ್ಲ ನೆರೆ ಸಂತ್ರಸ್ಥರ ಸ್ಥಿತಿ... ಈ ಭಾಗದ ಜನಕ್ಕೆ ಇದು ಕರಾಳ ಸಂಕ್ರಾಂತಿ
ಕಾಗವಾಡ ತಾಲೂಕಿನ ಜೂಗುಳ, ಮಂಗಾವತಿ ಗ್ರಾಮಗಳಲ್ಲಿ ನೆರೆ ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸುವಂತೆ ಹೇಳಿದ್ದಾರೆ. ಹತ್ತಕ್ಕೂ ಹೆಚ್ಚು ಕುಟುಂಬಗಳಿಗೆ ಶೀಘ್ರದಲ್ಲೇ ಪರಿಹಾರ ಕಲ್ಪಿಸುವಂತೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ.