ETV Bharat / state

ಡಿಸಿಸಿ ಬ್ಯಾಂಕ್​ ಅನ್ನು ಸುರಕ್ಷತೆ ದೃಷ್ಟಿಯಿಂದ ಹೈಟೆಕ್ ಮಾಡಲಾಗುತ್ತದೆ : ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ

ಮುರಗೋಡ ಗ್ರಾಮದ ದೈವ ಮಹಾಂತ ಅಜ್ಜನವರ ಆಶೀರ್ವಾದದಿಂದ ಹಣ ಮರಳಿ ಬಂದಿದೆ. ಮಹಾಂತ ಅಜ್ಜ ಎಲ್ಲಿಯೂ ಹೋಗಿಲ್ಲ. ನಮ್ಮ ಜೊತೆಗೆ ಇದ್ದಾರೆ. ಕಳ್ಳತನ ಆಗುತ್ತಿದ್ದಂತೆ ಮಹಾಂತ ಅಜ್ಜನವರ ಕಡೆ ಹಣ ಮರಳಿ ಬರಲಿ ಎಂದು ಹರಕೆ ಹೊತ್ತಿದ್ದೆ. ಆದಷ್ಟು ಬೇಗ ಹೋಗಿ ಮಹಾಂತ ಅಜ್ಜನ ಹರಕೆ ತೀರಿಸುತ್ತೇನೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.

author img

By

Published : Mar 14, 2022, 11:04 PM IST

dcc-bank-president-react-about-theft-case
ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ

ಚಿಕ್ಕೋಡಿ: ಕೇವಲ ಒಂದೇ ವಾರದಲ್ಲಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡ ಗ್ರಾಮದಲ್ಲಿನ ಡಿಸಿಸಿ ಬ್ಯಾಂಕ್​ನ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರಿಗೆ ಬಹುಮಾನ ಘೋಷಣೆ ಮಾಡಲಾಗುತ್ತದೆ ಎಂದು‌ ಡಿಸಿಸಿ ಬ್ಯಾಂಕ್ ಅಧ್ಯಕ್ಷ ‌ರಮೇಶ ಕತ್ತಿ ಹೇಳಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ

ಹುಕ್ಕೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ‌ ಮಾ. 6ರಂದು ಮುರಗೋಡ ಡಿಸಿಸಿ ಬ್ಯಾಂಕ್ ನಲ್ಲಿ 4.37ಕೋಟಿ ನಗದು ಹಣ, 1.63 ಕೋಟಿ ಮೌಲ್ಯದ ಬಂಗಾರದ ಕಳ್ಳತನ ಪ್ರಕರಣವನ್ನು ಭೇದಿಸಿದ ಬೆಳಗಾವಿ ಜಿಲ್ಲಾ ಪೊಲೀಸರಿಗೆ ಡಿಸಿಸಿ ಬ್ಯಾಂಕ್ ವತಿಯಿಂದ ಬಹುಮಾನ ಘೋಷಣೆ ಮಾಡಲಾಗುತ್ತದೆ.

ಕೇವಲ ಒಂದೇ ವಾರದಲ್ಲಿ ಪೊಲೀಸರು ಹಗಲಿರುಳು ಕಾರ್ಯನಿರ್ವಹಿಸಿ ಕಳ್ಳತನ ಪ್ರಕರಣವನ್ನ ಭೇದಿಸಿದ್ದಾರೆ.‌ ಈ ಬಗ್ಗೆ ಆಡಳಿತ ಮಂಡಳಿ ಸಭೆ ನಡೆಸಿ ಬಹುಮಾನ ಘೋಷಣೆ ಮಾಡುತ್ತೇನೆ ಎಂದರು.

ಇದರಿಂದ ಬ್ಯಾಂಕ್ ಹಾಗೂ ಗ್ರಾಹಕರಿಗೆ ಆಗಬೇಕಿದ್ದ ನಷ್ಟ ತಪ್ಪಿದೆ. ಕಳ್ಳತನ ಪ್ರಕರಣದಲ್ಲಿ ಡಿಸಿಸಿ ಬ್ಯಾಂಕ್ ಸಿಬ್ಬಂದಿ ಭಾಗಿ ಆಗಿದ್ದು, ನಿಜಕ್ಕೂ ದುರ್ದೈವ. ಬೇಲಿಯೇ ಎದ್ದು ಹೊಲ ಮೇದರೆ ಹೇಗೆ? ಇಂಥ ಪ್ರಕರಣದಲ್ಲಿ ಭಾಗಿಯಾದ ನೌಕರನಿಗೆ ಶಿಕ್ಷೆ ಆಗಬೇಕು ಎಂದು ತಿಳಿಸಿದರು.

ಮುರಗೋಡ ಗ್ರಾಮದ ದೈವ ಮಹಾಂತ ಅಜ್ಜನವರ ಆಶೀರ್ವಾದದಿಂದ ಹಣ ಮರಳಿ ಬಂದಿದೆ. ಮಹಾಂತ ಅಜ್ಜ ಎಲ್ಲಿಯೂ ಹೋಗಿಲ್ಲ. ನಮ್ಮ ಜೊತೆಗೆ ಇದ್ದಾರೆ. ಕಳ್ಳತನ ಆಗುತ್ತಿದ್ದಂತೆ ಮಹಾಂತ ಅಜ್ಜನವರ ಕಡೆ ಹಣ ಮರಳಿ ಬರಲಿ ಎಂದು ಹರಕೆ ಹೊತ್ತಿದ್ದೆ. ಆದಷ್ಟು ಬೇಗ ಹೋಗಿ ಮಹಾಂತ ಅಜ್ಜನ ಹರಕೆ ತೀರಿಸುತ್ತೇನೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.

ಇದಲ್ಲದೇ ಡಿಸಿಸಿ ಬ್ಯಾಂಕ್​​ನಲ್ಲಿ ಮುಂದೆ ಈ ರೀತಿಯ ಪ್ರಕರಣಗಳು ಆಗದಂತೆ ಬ್ಯಾಂಕ್​ನ ಸುರಕ್ಷಾ ದೃಷ್ಟಿಯಿಂದ ಹೈಟೆಕ್ ಬ್ಯಾಂಕ್ ಮಾಡುವ ಮೂಲಕ ಗ್ರಾಹಕರ ಹಣಕ್ಕೆ ಸಂಪೂರ್ಣವಾಗಿ ನಮ್ಮ ಬ್ಯಾಂಕ್ ಸುರಕ್ಷತೆ ಒದಗಿಸುತ್ತದೆ ಎಂದರು.

ಓದಿ: ವಿಜಯಪುರ : ದೇವರಾಜ ಅರಸು ಅಭಿವೃದ್ಧಿ ನಿಗಮದ ಸಹಾಯಕ ಅಧಿಕಾರಿ ಎಸಿಬಿ ಬಲೆಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.