ETV Bharat / state

ಹೀಗಿರತೈತಿ ನೋಡ್ರಿ ಬೆಳಗಾವಿ ಮಂದಿ ದಸರಾ ಹಬ್ಬ! - Dasara in Belagavi

ನಾಡಹಬ್ಬ ದಸರಾವನ್ನು ಎಲ್ಲೆಡೆ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಪ್ರಾದೇಶಿಕ ಸಂಪ್ರದಾಯಗಳಿಗೆ ತಕ್ಕಂತೆ ಆಯಾ ಜಿಲ್ಲೆ, ಊರುಗಳಲ್ಲಿ ಜನರು ವಿಭಿನ್ನವಾಗಿ ಸಂಭ್ರಮಿಸುತ್ತಾರೆ.

ಹೀಗರತೈತಿ ನೋಡ್ರಿ ಬೆಳಗಾವಿ ಮಂದಿ ದಸರಾ ಹಬ್ಬ.!
author img

By

Published : Oct 8, 2019, 5:46 PM IST

ಬೆಳಗಾವಿ : ನಾಡಸಿರಿ ದಸರಾವನ್ನು ಎಲ್ಲೆಡೆ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಪ್ರಾದೇಶಿಕ ಸಂಪ್ರದಾಯಗಳಿಗೆ ತಕ್ಕಂತೆ ಆಯಾ ಜಿಲ್ಲೆ, ಊರುಗಳಲ್ಲಿ ವಿಭಿನ್ನವಾಗಿ ಸಂಭ್ರಮಿಸುತ್ತಾರೆ.

ಹೀಗಿರತೈತಿ ನೋಡ್ರಿ ಬೆಳಗಾವಿ ಮಂದಿ ದಸರಾ ಹಬ್ಬ.!

ಉತ್ತರಕರ್ನಾಟಕದ ಜವಾರಿ ಮಂದಿ ಇಂದು ವಿಶೇಷವಾಗಿ ಮನೆ-ಮನೆಗೆ ತೆರಳಿ ಬಂಗಾರ(ಬನ್ನಿ) ನೀಡಿ ಆಚರಿಸುತ್ತಾರೆ. ನಿನ್ನೆ ಖಂಡೆ ನವಮಿ ಅಂದರೆ ಆಯುಧ ಪೂಜೆಯ ದಿನ ಎಲ್ಲ ಶಸ್ತ್ರಾಸ್ತ್ರಗಳು, ವಾಹನಗಳು, ಕೃಷಿ ಉಪಕರಣಗಳು, ಯಂತ್ರಗಳು ಮತ್ತು ಲೋಹದ ವಸ್ತುಗಳನ್ನಿಟ್ಟು, ಬನ್ನಿ ಮರದ ಎಲೆಗಳು ಮತ್ತು ನವರಾತ್ರಿಯಲ್ಲಿ ಬೆಳೆಯುವ 'ಸಸಿ' ಯೊಂದಿಗೆ ಪೂಜಿಸುತ್ತಾರೆ.

ಹಳ್ಳಿಯಲ್ಲಿ ಬನ್ನಿ ಮರವನ್ನು ಪೂಜಿಸಿ ಬಳಿಕ ಅದರ ಎಲೆಗಳನ್ನು ಕಿತ್ತು, ಸಾಯಂಕಾಲದ ಹೊತ್ತಿನಲ್ಲಿ ಬನ್ನಿ ಎಲೆಗಳನ್ನು ಹಿರಿಯರಿಗೆ, ಕಿರಿಯರಿಗೆ, ಬಂಧು-ಬಾಂಧವರಿಗೆ ನೀಡಿ, ಬಂಗಾರ ತಗೊಂಡು ಬಂಗಾರದಂಗ ಬಾಳೋಣ ಎಂಬ ಸಂದೇಶ ರವಾನಿಸುತ್ತಾರೆ.

Intro:ಉತ್ತರ ಕರ್ನಾಟಕದ ಭಾಗದಲ್ಲಿ ಇವತ್ತು ಒಂದು ದಿನ ಮನೆ ಮನೆ ಹೋಗಿ ಬಂಗಾರ ಕೋಡುತ್ತಾರೆ ಯಷ್ಟು ಕೊಡ್ತಾರೆ ಎಂಬ ಕುತೂಹಲ ನಿಮಗೂ ಇದಿಯಾ ಈ ಸ್ಟೋರಿ ನೋಡಿBody:ANCHOR
ಉತ್ತರ ಕರ್ನಾಟಕದ ಭಾಗದಲ್ಲಿ ಇವತ್ತು ಒಂದು ದಿನ ಮನೆ ಮನೆ ಹೋಗಿ ಬಂಗಾರ ಕೋಡುತ್ತಾರೆ ಯಷ್ಟು ಕೊಡ್ತಾರೆ ಎಂಬ ಕುತೂಹಲ ನಿಮಗೂ ಇದಿಯಾ ಈ ಸ್ಟೋರಿ ನೋಡಿ....

VOICE OVER....
ಹೌದ ನೋಡ್ರಿ ಉತ್ತರ ಕರ್ನಾಟಕದಲ್ಲಿ ಭಾಗದಲ್ಲಿ ದಸರಾ ಹಬ್ಬವನ್ನು ವಿಭಿನ್ನವಾಗಿ ಆಚರಿಸುತ್ತಾರೆ ದಸರಾ ಉತ್ಸವವನ್ನು ಆಯುಧ ಪೂಜೆ ಅಥವಾ ಕಂಡಿ ಪೂಜೆ ಎಂದು ಆಚರಿಸಲಾಗುತ್ತದೆ.

ಎಲ್ಲಾ ಶಸ್ತ್ರಾಸ್ತ್ರಗಳು, ವಾಹನಗಳು, ಕೃಷಿ ಉಪಕರಣಗಳು, ಯಂತ್ರಗಳು ಮತ್ತು ಲೋಹದ ವಸ್ತುಗಳನ್ನು ಬನ್ನಿ ಮರದ ಎಲೆಗಳು  ಮತ್ತು ನವರಾತ್ರಿಯ ೯ ದಿನಗಳಲ್ಲಿ ಬೆಳೆಯುವ 'ಸಸಿ' ನೊಂದಿಗೆ ಪೂಜಿಸಲಾಗುತ್ತದೆ.

ಬನ್ನಿ ಮರದ ಎಲೆಗಳಿಂದ ದಸರ ದಿನದಂದು ವಿಶೇಷ ಮಹತ್ವವಿದೆ. ಬನ್ನಿ ಮರವನ್ನು ಪೂಜೆ ನಡೆಸಲಾಗುತ್ತದೆ ಮತ್ತು ಪುಸ್ತಕಗಳು, ಸಂಗೀತ ವಾದ್ಯಗಳು ಇತ್ಯಾದಿಗಳನ್ನು ದೇವತೆಯೊಂದಿಗೆ ಪೂಜಿಸಲಾಗುತ್ತದೆ.

ಹಳ್ಳಿಯಲ್ಲಿ ಬನ್ನಿ ಮರದ ಪೂಜಿಸಿ ಎಲೆಗಳನ್ನು ಸಂಗ್ರಹಿಸುತ್ತಾರೆ. ಎಲೆಗಳು ಚಿನ್ನವನ್ನು ಸೂಚಿಸುತ್ತವೆ. ಜನರು ಸಂಜೆ ಪರಸ್ಪರರ ಬನ್ನಿ ಎಲೆ ಕೋಟ್ಟು ನಾವು ನಿವು ಬಂಗಾರದಂಗ ಇರುನು ಅಂತ ಮನೆಗಳಿಗೆ ಭೇಟಿ ನೀಡುತ್ತಾರೆ ಮತ್ತು ಪ್ರೀತಿ ಮತ್ತು ಗೌರವದ ಸಂಕೇತವಾಗಿ ಚಿನ್ನವನ್ನು (ಎಲೆಗಳನ್ನು) ವಿತರಿಸುತ್ತಾರೆ.

Conclusion:ಶಿವರಾಜ್ ನೇಸರ್ಗಿ ಅಥಣಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.