ETV Bharat / state

102 ಬಾರಿ ಓಟಿಪಿ ಪಡೆದು ₹10 ಲಕ್ಷ ಎಗರಿಸಿದ್ದರು.. SSLC ಫೇಲಾದ್ರೂ ವಂಚಿಸೋದರಲ್ಲಿ ಫಸ್ಟ್‌ಕ್ಲಾಸ್‌..

ಬಂಧಿತ ಆರೋಪಿಗಳು ಮೊದಲಿಗೆ ಅಪರಿಚಿತ ಫೋನ್ ನಂಬರ್‌ಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತಾರೆ. ಬಳಿಕ ಒಬ್ಬೊಬ್ಬರಿಗೆ ಫೋನ್ ಕರೆ ಮಾಡುತ್ತಾ ಹೋಗುತ್ತಾರೆ. ಯಾರಾದರೂ ಇವರ ಫೋನ್ ಕರೆಗಳನ್ನು ಸ್ವೀಕರಿಸಿದ್ರೆ ಅಂತವರಿಗೆ ಬ್ಯಾಂಕ್ ಕೆವೈಸಿ ಅಪ್ಡೇಟ್ ಮಾಡುವುದಿದೆ ಎಂದು ಹೇಳಿ ಅವರ ಬಳಿ ಆಧಾರ್​​ ಕಾರ್ಡ್, ಬ್ಯಾಂಕ್ ಪಾಸ್ ಬುಕ್​​ ಸೇರಿದಂತೆ ಬ್ಯಾಂಕ್‌ಗೆ ಸಂಬಂಧಿಸಿದ ‌ಇನ್ನಿತರ ಮಾಹಿತಿಗಳನ್ನು ವ್ಯಾಟ್ಸ್‌ಆ್ಯಪ್ ಮೂಲಕ ಝೆರಾಕ್ಸ್ ಪ್ರತಿಗಳನ್ನು ಪಡೆದುಕೊಳ್ಳುತ್ತಾರೆ..

cyber crime in belagavi: 3 arrested
102 ಬಾರಿ ಓಟಿಪಿ ತೆಗೆದುಕೊಂಡು 10 ಲಕ್ಷ ರೂ. ಎಗರಿಸಿದ್ದ ಎಸ್​ಎಸ್​ಎಲ್​ಸಿ ಫೇಲಾಗಿದ್ದವರ ಬಂಧನ!
author img

By

Published : Jul 20, 2021, 9:09 PM IST

ಬೆಳಗಾವಿ : ನಗರದ ನಿವೃತ್ತ ಬಿಎಸ್‍ಎನ್‍ಎಲ್ ನೌಕರನ ಅಕೌಂಟ್​​ನಿಂದ 10 ಲಕ್ಷ ರೂಪಾಯಿಗಳನ್ನು ಎಗರಿಸಿದ್ದ ಸೈಬರ್ ಕ್ರೈಮ್ ಖದೀಮರನ್ನು ಬಂಧಿಸಿದ ಪೊಲೀಸರು ಅವರಿಂದ 12 ಲಕ್ಷ ರೂಪಾಯಿಗೂ ಹೆಚ್ಚು ನಗದನ್ನು ವಶಕ್ಕೆ ಪಡೆದಿದ್ದಾರೆ. ಬಿಎಸ್‍ಎನ್‍ಎಲ್​​ನ ನಿವೃತ್ತ ನೌಕರರಾಗಿ ಸೇವೆ ಸಲ್ಲಿಸಿದ್ದ ನಗರದ ಕಂಗ್ರಾಳಿ ಕೆಹೆಚ್‍ನ ಯಲ್ಲಪ್ಪ ನಾರಾಯಣ ಜಾಧವ್ ಎಂಬುವರು ಸೈಬರ್ ವಂಚಕರಿಗೆ 102 ಬಾರಿ ಓಟಿಪಿ ಕಳುಹಿಸಿ 10 ಲಕ್ಷ ಹಣವನ್ನು ಕಳೆದುಕೊಂಡು ಮೋಸ ಹೋಗಿದ್ದರು. ಈ ಬಗ್ಗೆ ಕಳೆದ ಜೂನ್​​ 10ರಂದು ಬೆಳಗಾವಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರಿನ ಮೇರೆಗೆ ತನಿಖೆ ಕೈಗೊಂಡ ಪೊಲೀಸರು ಜಾರ್ಖಂಡ್ ರಾಜ್ಯದ ಜಮತಾರಾ ಜಿಲ್ಲೆಯ ಓರ್ವ ವ್ಯಕ್ತಿ, ಓರ್ವ ಮಹಿಳೆ ಹಾಗೂ ಮಹಾರಾಷ್ಟ್ರದ ಓರ್ವ ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ. ಆರೋಪಿಗಳಿಂದ 5 ಮೊಬೈಲ್, 3 ಡೆಬಿಟ್ ಕಾರ್ಡ್ ಹಾಗೂ ಬೇರೆ ಬೇರೆ ಬ್ಯಾಂಕ್ ಖಾತೆಗಳ ಮೂಲಕ ಹಣವನ್ನು ವರ್ಗಾಯಿಸಿಕೊಂಡಿರುವ 50 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿ, ಒಟ್ಟು 12 ಲಕ್ಷ 56 ಸಾವಿರ ರೂ.ಗಳನ್ನು ವಶಕ್ಕೆ ಪಡೆದಿದ್ದಾರೆ.

ಸೈಬರ್​ಗಳ್ಳರ ಬಂಧನ

ಪ್ರಕರಣದಲ್ಲಿ ಸೈಬರ್ ವಂಚಕರು 48 ಮೊಬೈಲ್ ಫೋನ್‌ಗಳನ್ನು, 304 ಸಿಮ್ ಕಾರ್ಡ್​​ಗಳನ್ನು ಬಳಸಿಕೊಂಡಿದ್ದಲ್ಲದೇ 50 ಬೇರೆ ಬೇರೆ ಖಾತೆಗಳ ಮೂಲಕ‌ ವಂಚನೆ ಹಣವನ್ನು ವರ್ಗಾವಣೆ ಮಾಡಿಕೊಂಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಇದಲ್ಲದೇ ಹೈದರಾಬಾದ್ ಸೇರಿ ಇತರ ರಾಜ್ಯಗಳಲ್ಲಿ ತಮ್ಮ ಕೈಚಳಕ ತೋರಿಸಿರುವ ಆರೋಪಿಗಳು ಕರ್ನಾಟಕದ ಕಲಬುರಗಿ, ಬೆಳಗಾವಿ ಹಾಗೂ ಬೆಂಗಳೂರು ‌ಸೇರಿ ಇನ್ನೂ ಹಲವಾರು ಪ್ರಕರಣದಲ್ಲಿ ಭಾಗಿಯಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.

ಬಂಧಿತರೆಲ್ಲರೂ ಎಸ್​​ಎಸ್​​ಎಲ್​ಸಿ ಫೇಲ್!

ನಗರದಲ್ಲಿ 102 ಬಾರಿ ಓಟಿಪಿ ಪಡೆದು 10 ಲಕ್ಷ ಎಗರಿಸಿರುವ ಮೂವರು ಆರೋಪಿಗಳು ಯಾವುದೇ ರೀತಿಯ ಉನ್ನತ ಶಿಕ್ಷಣ ಪಡೆದುಕೊಂಡಿಲ್ಲ. ಕೇವಲ ಹತ್ತನೆ ತರಗತಿಯವರೆಗೆ ಶಿಕ್ಷಣ‌ ಪಡೆದಿರುವ ಆರೋಪಿಗಳು ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದಾರೆ.

ಇದನ್ನೂ ಓದಿ: ಪ್ರತಿಪಕ್ಷಗಳ ಫೋನ್ ಕದ್ದಾಲಿಕೆ ಆರೋಪ ಸತ್ಯಕ್ಕೆ ದೂರ : ಡಿಸಿಎಂ ಅಶ್ವತ್ಥ್ ನಾರಾಯಣ್

ವಂಚನೆ‌ ಕೃತ್ಯಗಳನ್ನ ಹೇಗೆ ಮಾಡ್ತಾರೆ?

ಬಂಧಿತ ಆರೋಪಿಗಳು ಮೊದಲಿಗೆ ಅಪರಿಚಿತ ಫೋನ್ ನಂಬರ್‌ಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತಾರೆ. ಬಳಿಕ ಒಬ್ಬೊಬ್ಬರಿಗೆ ಫೋನ್ ಕರೆ ಮಾಡುತ್ತಾ ಹೋಗುತ್ತಾರೆ. ಯಾರಾದರೂ ಇವರ ಫೋನ್ ಕರೆಗಳನ್ನು ಸ್ವೀಕರಿಸಿದ್ರೆ ಅಂತವರಿಗೆ ಬ್ಯಾಂಕ್ ಕೆವೈಸಿ ಅಪ್ಡೇಟ್ ಮಾಡುವುದಿದೆ ಎಂದು ಹೇಳಿ ಅವರ ಬಳಿ ಆಧಾರ್​​ ಕಾರ್ಡ್, ಬ್ಯಾಂಕ್ ಪಾಸ್ ಬುಕ್​​ ಸೇರಿದಂತೆ ಬ್ಯಾಂಕ್‌ಗೆ ಸಂಬಂಧಿಸಿದ ‌ಇನ್ನಿತರ ಮಾಹಿತಿಗಳನ್ನು ವ್ಯಾಟ್ಸ್‌ಆ್ಯಪ್ ಮೂಲಕ ಝೆರಾಕ್ಸ್ ಪ್ರತಿಗಳನ್ನು ಪಡೆದುಕೊಳ್ಳುತ್ತಾರೆ.

ಇದಾದ ಬಳಿಕ ಲಿಂಕ್​ ಅನ್ನು ವ್ಯಾಟ್ಸ್‌ಆ್ಯಪ್ ಕಳುಹಿಸಿ ಅದನ್ನು ಕ್ಲಿಕ್ ಮಾಡಲು ತಿಳಿಸುತ್ತಾರೆ. ವಂಚಕರು ಕಳುಹಿಸಿದ ಲಿಂಕ್​ ಅನ್ನು ಕ್ಲಿಕ್ ಮಾಡಿದ್ರೆ ಅವರಿಗೊಂದು ಓಟಿಪಿ ಬರುತ್ತದೆ. ಅದನ್ನು ಆರೋಪಿಗಳಿಗೆ ಸಂತ್ರಸ್ತರು ಶೇರ್ ಮಾಡಿದ್ರೆ ತಮ್ಮ ಅಕೌಂಟ್​​ನಲ್ಲಿದ್ದ ಎಲ್ಲಾ ಹಣವನ್ನು ತಮ್ಮ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು ಮೋಸ ಮಾಡುತ್ತಾರೆ.

ಹೀಗಾಗಿ, ಕೇವಲ ಒಂದು ಫೋನ್ ಕರೆ ಮತ್ತು ಇಂಟರ್ನೆಟ್ ಬ್ಯಾಂಕಿಂಗ್​ನಿಂದ ತಮ್ಮ ಖಾತೆಯಲ್ಲಿದ್ದ ಎಲ್ಲಾ ಹಣವನ್ನೇ ಕಳೆದುಕೊಳ್ಳುವ ದುಸ್ಥಿತಿ ಬರಲಿದೆ. ಯಾರಿಗಾದರೂ ಅಪರಿಚಿತ ವಂಚಕರು ಬ್ಯಾಂಕ್ ಕೆವೈಸಿ ಸೇರಿದಂತೆ ಇನ್ನಿತರ ಮಾಹಿತಿಗಳನ್ನು ನೀಡುವಂತೆ ಕೇಳಿದರೆ ಅಂಥವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕೆಂದು ಬೆಳಗಾವಿ ಡಿಸಿಪಿ ಡಾ.ವಿಕ್ರಮ ಆಮಟೆ ಮನವಿ ಮಾಡಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.