ಬೆಳಗಾವಿ: ರೈತನೊಬ್ಬ ಕಷ್ಟಪಟ್ಟು ಬೆಳೆದ ಮೆಣಸಿನಕಾಯಿ ಬೆಳೆಗೆ ಸೂಕ್ತ ಬೆಲೆ ಇಲ್ಲದ ಪರಿಣಾಮ ಮೆಣಸಿನಕಾಯಿ ಬೆಳೆಯನ್ನೇ ತಮ್ಮ ಕಬ್ಬಿನ ಹೊಲದಲ್ಲಿ ಎಲ್ಲೆಂದರಲ್ಲಿ ಚೆಲ್ಲುತ್ತಿದ್ದಾರೆ.
ಜಿಲ್ಲೆಯ ಕಿತ್ತೂರ ತಾಲೂಕಿನ ತುರಮರಿ ಗ್ರಾಮದ ಅದೃಶ್ಯಪ್ಪ ಹಾರೋಗೊಪ್ಪ ಎಂಬವರು ಮೆಣಸಿನಕಾಯಿ ಬೆಳೆಯನ್ನು ತಮ್ಮ ಕಬ್ಬಿನ ಹೊಲದಲ್ಲಿ ಚೆಲ್ಲುವ ಮೂಲಕ ಅಸಹಾಯಕತೆ ಜೊತೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೆಣಸಿನಕಾಯಿ ಬೆಳೆ ಈ ಬಾರಿ ಉತ್ತಮ ಫಸಲು ಬಂದಿದೆ. ಆದರೀಗ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಇಲ್ಲದೇ, ದಲ್ಲಾಳಿಗಳು ಕೇಳುವ ದರಕ್ಕೆ ಮೆಣಸಿನಕಾಯಿ ನೀಡುವಂತಾಗಿದೆ. ದಲ್ಲಾಳಿ ಮಾತ್ರ ಮೂರು-ನಾಲ್ಕು ಪಟ್ಟು ಹೆಚ್ಚಿನ ದರಕ್ಕೆ ಮಾರುತ್ತಾರೆ. ಇದರಿಂದ ರೈತ ಮನನೊಂದು ಹೊಲದಲ್ಲಿಯೇ ಕೊಳೆತು ಗೊಬ್ಬರವಾಗಲಿ ಎಂಬ ದೃಷ್ಟಿಯಿಂದ ಮೆಣಸಿನಕಾಯಿಯನ್ನ ಹೊಲದಲ್ಲಿ ಚೆಲ್ಲುತ್ತಿದ್ದಾನೆ.