ಬೆಳಗಾವಿ: ಭೀಕರ ಪ್ರವಾಹಕ್ಕೆ ಬೆಳೆ ಕೊಚ್ಚಿ ಹೋದ ಪರಿಣಾಮ ಸಾಲಭಾದೆ ತಾಳಲಾರದೆ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸವದತ್ತಿ ತಾಲೂಕಿನ ಕುರವಿನಕೊಪ್ಪ ಗ್ರಾಮದಲ್ಲಿ ನಡೆದಿದೆ.
ಸ್ಥಳೀಯ ಗುರ್ಲಹೊಸೂರಿನ ಮಲ್ಲಯ್ಯ ಕೊಡ್ಲಿಮಠ (32) ಮೃತ ರೈತ. ಸಿಂಡಿಕೇಟ್ ಬ್ಯಾಂಕ್‌ನಲ್ಲಿ ರೂ. 80 ಸಾವಿರ ಬೆಳೆ ಸಾಲ ಹಾಗೂ 2012 ರಲ್ಲಿ ಖಾಸಗಿ ಫೈನಾನ್ಸ್ಗಳಿಂದ ಸಾಲ ಪಡೆದು ಮರು ಪಾವತಿಸಲಾಗಿದೆ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಪ್ರವಾಹದಲ್ಲಿ ಬೆಳೆಯಲ್ಲಾ ನಾಶವಾಗಿದೆ. ಇದಕ್ಕೆ ಸರ್ಕಾರ ಯಾವುದೇ ಪರಿಹಾರ ನೀಡಿಲ್ಲವೆಂದು ಸಂಕಷ್ಟದಲ್ಲಿ ಮನನೊಂದ ರೈತ ಮಲ್ಲಯ್ಯ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪತ್ನಿ ಲಕ್ಷ್ಮೀ ಮಲ್ಲಯ್ಯ ಕೊಡ್ಲಿಮಠ ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.