ETV Bharat / state

ಕೃಷ್ಣ ಬಣ ಬಣ... ಆಹಾರಕ್ಕಾಗಿ ನದಿಯಿಂದ ಗ್ರಾಮಕ್ಕೆ ನುಗ್ಗಿತು ಬೃಹತ್​ ಗಾತ್ರದ ಮೊಸಳೆ

ಕೃಷ್ಣ ನದಿ ತೀರದಲ್ಲಿರುವ ಅಥಣಿ ತಾಲೂಕು ಹುಲಗಬಾಳ ಗ್ರಾಮದ ಮನೆಯೊಳಗೆ ನುಗ್ಗಿಬಂದಿದ್ದ ಬೃಹದಾಕಾರದ ಮೊಸಳೆಯನ್ನು ಸಾರ್ವಜನಿಕರು ಹಿಡಿದು ಅರಣ್ಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.

author img

By

Published : Apr 16, 2019, 9:07 PM IST

ಮೊಸಳೆ

ಚಿಕ್ಕೋಡಿ: ಸಾರ್ವಜನಿಕರು ಕುಡಿಯಲು ನೀರಿಲ್ಲದೆ ಪರದಾಡುತ್ತಿದ್ದಾರೆ. ಇನ್ನೊಂದೆಡೆ ನೀರಿನಲ್ಲಿ ಇರಬೇಕಾದ ಮೊಸಳೆಗಳು ಜಮೀನುಗಳಿಗೆ ಆಹಾರ ಅರಸಿ ನುಗ್ಗುತ್ತಿವೆ. ಹೀಗಾಗಿ ನದಿ ತೀರದ ತೋಟದ ನಿವಾಸಿಗಳಲ್ಲಿ ಆತಂಕ ಮೂಡಿದೆ. ಅಥಣಿ ತಾಲೂಕಿನ ಹುಲಗಬಾಳ ಗ್ರಾಮದಲ್ಲಿ ಮೊಸಳೆಯೊಂದು ಸೆರೆಯಾಗಿದೆ.

ನದಿ ತೀರದ ಗ್ರಾಮಗಳಾದ ಸತ್ತಿ, ಸವದಿ, ದರೂರ, ಸಂಕ್ರಟ್ಟಿ, ನದಿ ಇಂಗಳಗಾಂವ್​, ಸಪ್ತಸಾಗರ ಸೇರಿದಂತೆ ಹಲವೆಡೆ ಆಗಾಗ ಮೊಸಳೆಗಳು ಜಮೀನುಗಳಲ್ಲಿ ಪತ್ತೆಯಾಗುತ್ತಿರುವುದು ರೈತರ ನಿದ್ದೆಗೆಡಿಸಿದೆ.

ಹುಲಗಬಾಳ ಗ್ರಾಮದ ಹಿರೇಮಠ ತೋಟದಲ್ಲಿರುವ ವಸತಿಗೆ ನುಗ್ಗಿಬಂದಿದ್ದ ಬೃಹದಾಕಾರದ ಮೊಸಳೆಯನ್ನು ಸಾರ್ವಜನಿಕರು ಹಿಡಿದು ಅರಣ್ಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.

ಕಳೆದ 15 ದಿನಗಳಲ್ಲಿ ಕೃಷ್ಣ ನದಿ ಸಂಪೂರ್ಣ ಬತ್ತಿದ ಪರಿಣಾಮ ಜಲಚರಗಳೂ ಕೂಡ ಆಹಾರ ಮತ್ತು ನೀರು ಸಿಗದೆ ಪರದಾಡುವಂತಾಗಿದೆ. ಸದ್ಯ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆಸಿಕ್ಕಿರುವ ಮೊಸಳೆಯನ್ನು ಬೇರೆಡೆಗೆ ಸ್ಥಳಾಂತರಿಸಿದ್ದಾರೆ.

ನದಿಯಲ್ಲಿ ನೀರಿಲ್ಲದೆ ಜನರ ಜೊತೆ ಜಲಚರಗಳು ಕಂಗಾಲಾಗಿವೆ. ಜನರ ಕಡೆ ಮುಖ‌ ಮಾಡಿದ ಜಲಚರ ಪ್ರಾಣಿಗಳು ಚಿಕ್ಕೋಡಿ : ಸಾರ್ವಜನಿಕರು ಕುಡಿಯಲು ನೀರಿಲ್ಲದೆ ಪರದಾಡುತ್ತಿದ್ದಾರೆ. ಇನ್ನೊಂದೆಡೆ ನೀರಿನಲ್ಲಿ ಇರಬೇಕಾದ ಮೊಸಳೆಗಳು ಜಮೀನುಗಳಲ್ಲಿ ಆಹಾರ ಅರಸಿ ಬರುತ್ತಿದ್ದು ನದಿ ತೀರದ ತೋಟದ ನಿವಾಸಿಗಳಲ್ಲಿ ಆತಂಕ ಹುಟ್ಟಿಸಿರುವ ಘಟನೆ ಬೆಳಗಾವ ಜಿಲ್ಲೆ ಅಥಣಿ ತಾಲೂಕಿನ ಹುಲಗಬಾಳ ಗ್ರಾಮದಲ್ಲಿ ನಡೆದಿದೆ. ನದಿ ತೀರದ ತೋಟದ ನಿವಾಸಿಗಳಲ್ಲಿ ಈ ಘಟನೆಯಿಂದ ಆತಂಕ ಹುಟ್ಟಿಸಿದ್ದು ನದಿ ತೀರದ ಗ್ರಾಮಗಳಾದ ಸತ್ತಿ, ಸವದಿ, ದರೂರ, ಸಂಕ್ರಟ್ಟಿ, ನದಿ ಇಂಗಳಗಾಂವ, ಸಪ್ತಸಾಗರ ಸೇರಿದಂತೆ ಹಲವೆಡೆ ಆಗಾಗ ಮೊಸಳೆಗಳು ಜಮೀನುಗಳಲ್ಲಿ ಪತ್ತೆಯಾಗುತ್ತಿರುವದು ರೈತರ ನಿದ್ದೆ ಕೆಡಿಸಿದೆ. ಕೃಷ್ಣ ನದಿ ತೀರದ ಅಥಣಿ ತಾಲೂಕಿನ ಹುಲಗಬಾಳ ಗ್ರಾಮದ ಹಿರೇಮಠ ತೋಟದ ವಸತಿಗೆ ನುಗ್ಗಿಬಂದ ಬೃಹದಾಕಾರದ ಮೊಸಳೆಯನ್ನು ಸಾರ್ವಜನಿಕರು ಹಿಡಿದು ಅರಣ್ಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಕಳೆದ ಹದಿನೈದು ದಿನಗಳಲ್ಲಿ ಕೃಷ್ಣ ನದಿ ಸಂಪೂರ್ಣ ಬತ್ತಿದ ಪರಿಣಾಮ ಜಲಚರಗಳೂ ಕೂಡ ಆಹಾರ ಮತ್ತು ನೀರು ಸಿಗದೆ ಪರದಾಡುವಂತಾಗಿದ್ದು ಸದ್ಯ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಸಿಕ್ಕ ಮೊಸಳೆಯನ್ನು ಬೇರೆಕಡೆ ಸ್ಥಳಾಂತರಿಸಿದ್ದಾರೆ. ಸಂಜಯ ಕೌಲಗಿ ಚಿಕ್ಕೋಡಿ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.