ETV Bharat / state

ಚಿಕ್ಕೋಡಿ: ಪತ್ನಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈದ ಪತಿ - ಹಾರೂಗೇರಿ ಪೊಲೀಸ್

ಪತ್ನಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈದ ಘಟನೆ ಹಾರೂಗೇರಿ ಪಟ್ಟಣದಲ್ಲಿ ನಡೆದಿದೆ.

husband who killed his wife
ಪತ್ನಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈದ ಪತಿ
author img

By

Published : Jun 22, 2023, 9:32 PM IST

ಚಿಕ್ಕೋಡಿ: ಪತಿಯು ತನ್ನ ಪತ್ನಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ಹಾರೂಗೇರಿ ಪಟ್ಟಣದಲ್ಲಿ ಗುರುವಾರ ನಡೆದಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ರುಕ್ಮವ್ವ ಉಪ್ಪಾರ (29) ಗಂಡನಿಂದಲೇ ಕೊಲೆಯಾಗಿದ್ದಾರೆ.

ಆರೋಪಿಯ ಹೆಸರು ಮಲ್ಲಪ್ಪ ಉಪ್ಪಾರ. ಕೊಲೆಗೆ ಸಾಂಸಾರಿಕ ವೈಮನಸ್ಸು ಕಾರಣವೆಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಹಾರೂಗೇರಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮಲ್ಲಪ್ಪ ಸದಾಶಿವ ಉಪ್ಪಾರನನ್ನು ಬಂಧಿಸಲಾಗಿದೆ. ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಇದನ್ನೂ ಓದಿ: ಮೈಸೂರು: 10 ಸಾವಿರ ರೂಪಾಯಿ ಹಣಕ್ಕಾಗಿ ಭಿಕ್ಷುಕಿ ಕೊಲೆ

ಪತ್ನಿ ಹತ್ಯೆ ನಂತರ, ಪೊಲೀಸರಿಗೆ ಶರಣಾದ ಪತಿ: ಶೀಲ ಶಂಕಿಸಿ ಪತ್ನಿ ಕೊಲೆಗೈದ ಪತಿ ಪೊಲೀಸ್ ಠಾಣೆಗೆ ಹೋಗಿ‌ ಶರಣಾದ ಘಟನೆ ಮೈಸೂರು ನಗರದ ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿತ್ತು. ಕೆಎಸ್‌ಆರ್‌ಟಿಸಿ ಲೇಔಟ್ ನಿವಾಸಿ ಲೋಕೇಶ್ ಆರಾಧ್ಯ ಆರೋಪಿ. ಪತ್ನಿ ಪಲ್ಲವಿ ಕೊಲೆಯಾದವರು. ಲೋಕೇಶ್ ಹಾಗೂ ಪಲ್ಲವಿ 9 ವರ್ಷದ ಹಿಂದೆ ವಿವಾಹವಾಗಿದ್ದರು. ಇವರಿಗೆ 7 ವರ್ಷದ ಮಗನಿದ್ದಾನೆ. ಈ ಹಿಂದೆ ಕೆಲಕಾಲ ದಂಪತಿ ಮೈಸೂರು ತಾಲೂಕಿನ ವರುಣಾದಲ್ಲಿ ನೆಲೆಸಿದ್ದರು. ಮಗನನ್ನು ಒಳ್ಳೆಯ ಶಾಲೆಗೆ ಸೇರಿಸಬೇಕು ಎಂಬ ಕಾರಣದಿಂದ ಕಳೆದ ಎರಡು ತಿಂಗಳ ಹಿಂದೆ ಮೈಸೂರಿಗೆ ಬಂದು ಕೆಎಸ್‌ಆರ್‌ಟಿಸಿ ಬಡಾವಣೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದರು.

ಇದನ್ನೂ ಓದಿ: ಶ್ರೀರಂಗಪಟ್ಟಣ ಬಳಿ ಹೃದಯವಿದ್ರಾವಕ ಘಟನೆ: ಇಬ್ಬರು ಮಕ್ಕಳ ಬರ್ಬರ ಹತ್ಯೆ, ಹೆಂಡ್ತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪತಿ ಎಸ್ಕೇಪ್

ಆರೋಪಿ ಲೋಕೇಶ್ ಆಗಾಗ್ಗೆ ಪತ್ನಿಯ ಶೀಲ ಶಂಕಿಸಿ ಜಗಳವಾಡುತ್ತಿದ್ದನು. ಕೆಲವು ದಿನಗಳ ಹಿಂದೆ ಇಬ್ಬರ ನಡುವೆ ದೊಡ್ಡ ಜಗಳವೇ ನಡೆದಿತ್ತು. ಪಲ್ಲವಿ ಅವರ ತಾಯಿ ಹಾಗೂ ಸೋದರ ಮಾವ ಬಂದು ರಾಜಿ ಸಂಧಾನ ಮಾಡಿದ್ದರು. ಇಬ್ಬರಿಗೂ ಬುದ್ದಿವಾದ ಹೇಳಿದ್ದರು. ಮನೆಯ ಬಾಡಿಗೆಗೆ ಹಣ ನೀಡಿ ತೆರಳಿದ್ದರು. ಆದರೂ, ಲೋಕೇಶ್ ಆರಾಧ್ಯ ಜೂನ್​ 15ರಂದು ಬೆಳಗಿನ ಜಾವ ತನ್ನ ಹೆಂಡತಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಬಳಿಕ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಪಲ್ಲವಿ ಅವರ ತಂದೆ ಆಲನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಪೊಲೀಸರು ಆರೋಪಿಗೆ ಶೋಧ ನಡೆಸುವ ವೇಳೆ, ಆತನೇ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದ.

ಇದನ್ನೂ ಓದಿ: Bengaluru crime: ಕುಂಟ ಎಂದು ರೇಗಿಸಿದ್ದಕ್ಕೆ ಹಾಲೋಬ್ಲಾಕ್‌ ಇಟ್ಟಿಗೆಯಿಂದ ಹೊಡೆದು ಯುವಕನ ಹತ್ಯೆ.. ಇಬ್ಬರು ಸ್ನೇಹಿತರ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.