ETV Bharat / state

ಸಿಎಂ ಪಾಲ್ಗೊಂಡ ಸಭೆಯಲ್ಲೇ ಕೋವಿಡ್ ನಿಯಮ ಮಂಗಮಾಯ - ಬೆಳಗಾವಿಯಲ್ಲಿ ಕೋವಿಡ್ ನಿಯಮ ಉಲ್ಲಂಘನೆ

ಬೆಳಗಾವಿಯಲ್ಲಿ ಸಿಎಂ, ಸಚಿವರು ಸೇರಿದಂತೆ ಘಟಾನುಘಟಿಗಳು ಸೇರಿದ್ದ ಕಾರ್ಯಕ್ರಮದಲ್ಲೇ ಕೋವಿಡ್ ನಿಯಮ ಗಾಳಿಗೆ ತೂರಿದ್ದು ಕಂಡು ಬಂತು.

Covid Guidelines Violated in BJP Campaign
ಬಿಜೆಪಿ ಸಭೆಯಲ್ಲಿ ಕೋವಿಡ್ ನಿಯಮ ಉಲ್ಲಂಘನೆ
author img

By

Published : Apr 14, 2021, 8:57 PM IST

ಚಿಕ್ಕೋಡಿ : ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ಬೆಳಗಾವಿ ಜಿಲ್ಲೆಯ ಮೂಡಲಗಿಯಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಕಿಕ್ಕಿರಿದು ಜನ ಸೇರುವ ಮೂಲಕ ಕೋವಿಡ್ ನಿಯಮವನ್ನು ಗಾಳಿಗೆ ತೂರಿದ್ದು ಕಂಡು ಬಂತು.

ಕಾರ್ಯಕ್ರಮದಲ್ಲಿ ಸಾವಿರಾರು ಜನರು ಅಂತರ ಕಾಯ್ದುಕೊಳ್ಳದೇ ಕುಳಿತಿದ್ದರು, ಇವರಲ್ಲಿ ಬಹುತೇಕರು ಮಾಸ್ಕ್​ ಧರಿಸಿರಲಿಲ್ಲ. ವಿಶೇಷ ಎಂದರೆ ಈ ಸಭೆಯಲ್ಲಿ ಸ್ವತಃ ಸಿಎಂ ಬಿಎಸ್​ವೈ ಸಚಿವರಾದ ಜಗದೀಶ್ ಶೆಟ್ಟರ್, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ‌, ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.

ಕೋವಿಡ್ ನಿಯಮ ಉಲ್ಲಂಘಿಸಿ ಕಿಕ್ಕಿರಿದು ಸೇರಿದ ಜನ

ಓದಿ : ರಾಜ್ಯದಲ್ಲಿ ಮತ್ತೊಮ್ಮೆ ಕೊರೊನಾ ಸ್ಫೋಟ: ಒಂದೇ ದಿನ 11,265 ಮಂದಿಗೆ ಸೋಂಕು ದೃಢ

ಒಂದೆಡೆ ಜನರು ಮಾಸ್ಕ್​ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಕೋವಿಡ್ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಕರೆ ನೀಡುವ ಸಿಎಂ ಮತ್ತು ಸಚಿವರು, ತಾವೇ ನೇತೃತ್ವದ ವಹಿಸಿದ್ದ ಕಾರ್ಯಕ್ರಮದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ್ದನ್ನು ನೋಡಿಯೂ ಕಂಡು ಕಾಣದಂತೆ ಕುಳಿತಿದ್ದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.