ಚಿಕ್ಕೋಡಿ : ಕೊರೊನಾ ವೈರಸ್ ಅಟ್ಟಹಾಸ ದಿನೆ ದಿನೇ ದೇಶಾದ್ಯಂತ ಹೆಚ್ಚಾಗುತ್ತಿದೆ. ಪೊಲೀಸರು ಸೇರಿದಂತೆ ವಿವಿಧ ಇಲಾಖೆ ಸಿಬ್ಬಂದಿ ಕೊರೊನಾ ಕುರಿತು ಸಾರ್ವಜನಿಕರಲ್ಲಿ ಸಾಕಷ್ಟು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ಜನ ಮಾತ್ರ ಯಾವುದಕ್ಕೂ ಜಗ್ಗದೆ ಅನಗತ್ಯವಾಗಿ ಎಲ್ಲೆಂದರಲ್ಲಿ ಓಡಾಟ ನಡೆಸಿದ್ದಾರೆ. ಈಗ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ನಿಪ್ಪಾಣಿ ನಗರಸಭೆಯ ಪೌರಾಯುಕ್ತ ಮಹಾವೀರ ಬೋರನ್ನವರ ಯಮಧರ್ಮರಾಜ ಮತ್ತು ಚಿತ್ರಗುಪ್ತರನ್ನ ಕರೆತಂದಿದ್ದಾರೆ.
ಸ್ಥಳೀಯ ಮೂವರು ನಿವಾಸಿಗಳಿಗೆ ಯಮಧರ್ಮ, ಚಿತ್ರಗುಪ್ತ ಹಾಗೂ ಕೊರೊನ ವೈರಸ್ ಸೋಂಕಿತನ ರೀತಿ ವೇಷ ಹಾಕಿ ವಿಭಿನ್ನವಾಗಿ ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ, ಮನೆಯಿಂದ ಹೊರಗೆ ಬಂದರೆ ನಿಮ್ಮನ್ನು ಕರೆದೊಯ್ಯುಲು ಯಮನು ತಯಾರಾಗಿ ಬಂದಿದ್ದಾನೆ. ದಯವಿಟ್ಟು ಲಾಕ್‌ಡೌನ್ ಪಾಲಿಸಿ ಎಂದು ಕೊರೊನಾ ವೈರಸ್ ಅಪಾಯದ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.