ಬೆಳಗಾವಿ: ವಿದ್ಯಾಗಮ ಯೋಜನೆಯಡಿ ಮಕ್ಕಳಿಗೆ ಪಾಠ ಮಾಡಲು ಹೋಗುತ್ತಿದ್ದ ಶಿಕ್ಷಕನಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ನಿತ್ಯ ವಠಾರಗಳಿಗೆ ತೆರಳಿ ಸುಮಾರು 40 ವಿದ್ಯಾರ್ಥಿಗಳಿಗೆ ಹಂತ ಹಂತವಾಗಿ ಈ ಶಿಕ್ಷಕ ಪಾಠ ಮಾಡುತ್ತಿದ್ದರು. ಇದರ ಜೊತೆಗೆ ಕಣಬರಗಿ ಗ್ರಾಮವೊಂದರಲ್ಲೇ 200 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹೀಗಾಗಿ ಪೋಷಕರು ವಿದ್ಯಾಗಮ ಯೋಜನೆಯೇ ಬೇಡ ಆನ್‌ಲೈನ್ ಶಿಕ್ಷಣ ನೀಡಿ ಎಂದು ಒತ್ತಾಯಿಸುತ್ತಿದ್ದಾರೆ.
ದಿಢೀರ್ ಎಸ್‌ಡಿಎಂಸಿ ಸಭೆ :
ವಿದ್ಯಾಗಮ ಯೋಜನೆ ಬಗ್ಗೆ ಸಮಾಲೋಚಿಸಲು ಕಣಬರಗಿ ಗ್ರಾಮದಲ್ಲಿ ಎಸ್‌ಡಿಎಂಸಿ ಸದಸ್ಯರು ದಿಢೀರ್ ಸಭೆ ನಡೆಸಿದರು. ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಮುಖ್ಯ ಶಿಕ್ಷಕರು ಹಾಗು ಶಿಕ್ಷಕರು ಚರ್ಚಿಸುತ್ತಿದ್ದಾರೆ. ಆನ್‌ಲೈನ್ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು. ವಠಾರಗಳಿಗೆ ತೆರಳಿ ಮಕ್ಕಳಿಗೆ ಪಾಠ ಹೇಳೋದರಿಂದ ಇಬ್ಬರಿಗೂ ಸಮಸ್ಯೆ ಆಗುತ್ತದೆ. ಅಲ್ಲದೇ ವಠಾರಗಳಲ್ಲಿ ಶುಚಿತ್ವವೂ ಕಾಪಾಡಲೂ ಆಗಲ್ಲ ಎಂಬ ಅಭಿಪ್ರಾಯ ಕೇಳಿ ಬಂದಿದೆ.