ETV Bharat / state

ವಿಧಾನಸಭೆಯಲ್ಲಿ ಸ್ಫೋಟಗೊಂಡ 'ಕುಕ್ಕರ್'.. ಸದಸ್ಯರ ನಡುವೆ ಮಾತಿನ ವಾಗ್ಯುದ್ಧ - politicians statements

ನಮಗೆ ಇತ್ತೀಚೆಗೆ ಎಲ್ಲದರಲ್ಲೂ ರಾಜಕಾರಣ ಮಾಡುವುದು ಅಭ್ಯಾಸವಾಗಿಬಿಟ್ಟಿದೆ. ಈಗ ಸಿಕ್ಕಿಬಿದ್ದಿರುವ ಶಂಕಿತ ಉಗ್ರ ಎಂಥ ಅನಾಹುತ ಮಾಡಲು ಹೊರಟಿದ್ದ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಚುನಾವಣೆಯಲ್ಲಿ ಮತ ಗಳಿಕೆಗಾಗಿ ಹೇಳಿಕೆಗಳನ್ನು ಕೊಡಬಾರದು. ಭಯೋತ್ಪಾದನೆ ಮಾಡುವವರು ಯಾರೇ ಇರಲಿ ಅದನ್ನು ಉಗ್ರವಾಗಿ ಖಂಡಿಸಬೇಕು ಎಂದು ಸಚಿವ ಅರಗ ಜ್ಞಾನೇಂದ್ರ ಹೇಳಿದರು.

Cooker bomb blast case proposal in the House

author img

By

Published : Dec 22, 2022, 5:48 PM IST

Updated : Dec 22, 2022, 7:21 PM IST

ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ವಾಗ್ಯುದ್ಧ

ಬೆಳಗಾವಿ : ಕಳೆದ ತಿಂಗಳು ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಹೇಳಿಕೆ ವಿಧಾನಸಭೆಯಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ವಾಗ್ಯುದ್ಧಕ್ಕೆ ಕಾರಣವಾಯಿತು.

ಸದನದಲ್ಲಿ ಇಂದು ಶೂನ್ಯವೇಳೆ ಬಿಜೆಪಿ ಶಾಸಕ ಸಿ ಟಿ ರವಿ ವಿಷಯ ಪ್ರಸ್ತಾಪಿಸಿ, ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಬಗ್ಗೆ ಈ ಸದನದ ಹಿರಿಯ ಸದಸ್ಯರೊಬ್ಬರು ಹಾಗೂ ರಾಷ್ಟ್ರೀಯ ಪಕ್ಷದ ಅಧ್ಯಕ್ಷರೊಬ್ಬರು, ಲಘುವಾಗಿ ಮಾತನಾಡಿ ಕುಮ್ಮಕ್ಕು ನೀಡುವಂತಹ ಹೇಳಿಕೆಗಳನ್ನು ನೀಡಿದ್ದಾರೆ. ಇದು ಭಯೋತ್ಪಾದನೆ ಮತ್ತು ಭಯೋತ್ಪಾದಕರಿಗೆ ಬೆಂಬಲ ವ್ಯಕ್ತಪಡಿಸುವ ಕೃತ್ಯವಾಗಿದೆ ಎಂದು ಆರೋಪಿಸಿದರು.

ಸಿ ಟಿ ರವಿ ಅವರ ಆರೋಪಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಉಪ ನಾಯಕ ಯು ಟಿ ಖಾದರ್ ಮತ್ತಿತರ ಕಾಂಗ್ರೆಸ್ ಸದಸ್ಯರು, ಈ ಸದನದ ಸದಸ್ಯರು ಅಥವಾ ಪಕ್ಷದ ಅಧ್ಯಕ್ಷರು ಎಂದು ಹೇಳುವುದು ಸರಿಯಲ್ಲ. ಸದನದ ಹೊರಗಡೆ ಮಾತನಾಡುವುದಕ್ಕೂ, ಸದನದ ಒಳಗೆ ಮಾತನಾಡುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಈ ಹಂತದಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರ ನಡುವೆ ಗದ್ದಲ ಉಂಟಾಯಿತು. ಸಿ.ಟಿ.ರವಿ ಅವರ ಬೆಂಬಲಕ್ಕೆ ಗೃಹ ಸಚಿವ ಅರಗ ಜ್ಱಆನೇಂದ್ರ, ಶಾಸಕರಾದ ಕೆ.ಎಸ್. ಈಶ್ವರಪ್ಪ, ಅರವಿಂದ ಲಿಂಬಾವಳಿ ನಿಂತರು. ಯಾರು ಏನು ಹೇಳಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಮತಗಳ ಓಲೈಕೆಗೆ ಈ ರೀತಿ ತುಷ್ಟೀಕರಣ ಮಡುವುದು ಸರಿಯಲ್ಲ.

ಒಂದು ಧರ್ಮವನ್ನು ಓಲೈಕೆ ಮಾಡಿಕೊಂಡರೆ ನಮಗೆ ನಾಲ್ಕು ಮತಗಳು ಬರಬಹುದೆಂದು ಭಾವಿಸಿದ್ದಾರೆ. ಭಯೋತ್ಪಾದನೆ ಚಟುವಟಿಕೆ ನಡೆಸಿದವನಿಗೆ ಇವರು ಕ್ಲೀನ್ ಚಿಟ್ ಕೊಟ್ಟರೆ ಹೇಗೆ ಎಂದು ಈಶ್ವರಪ್ಪ ಪ್ರಶ್ನಿಸಿದರು. ಇವರ ಪ್ರಕಾರ ಡಿಜಿ ಕೂಡ ಹೇಳಿಕೆ ಕೊಡಬಾರದು. ಇವರು ಹೇಳಿದಂತೆ ಅವರು ಕೇಳಬೇಕೇ? ಹೀಗೆ ಹೇಳಲು ಇವರಿಗೇನು ಅಧಿಕಾರ ಇದೆ ಎಂದು ಪರೋಕ್ಷವಾಗಿ ಡಿ ಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.

ಉಪ ನಾಯಕ ಯು ಟಿ ಖಾದರ್ ಮಧ್ಯಪ್ರವೇಶಿಸಿ, ದುರುದ್ದೇಶದಿಂದ ವಿಷಯ ಪ್ರಸ್ತಾಪ ಮಾಡಲಾಗಿದೆ. ರಾಜಕೀಯ ತರಬೇಡಿ. ಗುಪ್ತಚರ ವೈಫಲ್ಯವಾಗಿದೆ. ಅದು ಚರ್ಚೆ ಆಗಬೇಕು ಎಂದರು. ಈ ಹಂತದಲ್ಲೂ ಮತ್ತೆ ಜಟಾಪಟಿ ನಡೆಯಿತು.

ಆಗ ಮಧ್ಯಪ್ರವೆಶಿಸಿದ ಅರಗ ಜ್ಞಾನೇಂದ್ರ ಅವರು, ಪ್ರತಿಯೊಂದನ್ನು ರಾಜಕೀಯ ಮಾಡಬೇಕಾದ ಅಗತ್ಯವಿಲ್ಲ. ಭಯೋತ್ಪಾದಕ ದುಷ್ಕೃತ್ಯವನ್ನು ಯಾರೇ ನಡೆಸಿದರೂ ಅದನ್ನು ಉಗ್ರವಾಗಿ ಖಂಡಿಸಬೇಕು. ಪ್ರತಿಯೊಂದರಲ್ಲೂ ರಾಜಕೀಯ ಮಾಡುವುದನ್ನು ಬಿಡಬೇಕು. ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಮಾಹಿತಿ ಇಲ್ಲದೆ ಸುಖಾಸುಮ್ಮನೆ ಹೇಳುವುದಿಲ್ಲ. ಅವರು ಸಂಪೂರ್ಣ ಮಾಹಿತಿ ಇಟ್ಟುಕೊಂಡೇ ಟ್ವೀಟ್ ಮಾಡಿದ್ದರು. ಅವರಿಗೆ ಮಾಹಿತಿ ಇಲ್ಲದೆ ಹೇಳುವುದಿಲ್ಲವೆಂದು ಸಮರ್ಥಿಸಿಕೊಂಡರು. ನಮಗೆ ಇತ್ತೀಚೆಗೆ ಎಲ್ಲದರಲ್ಲೂ ರಾಜಕಾರಣ ಮಾಡುವುದು ಅಭ್ಯಾಸವಾಗಿಬಿಟ್ಟಿದೆ. ಈಗ ಸಿಕ್ಕಿಬಿದ್ದಿರುವ ಶಂಕಿತ ಉಗ್ರ ಎಂಥ ಅನಾಹುತ ಮಾಡಲು ಹೊರಟಿದ್ದ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಚುನಾವಣೆಯಲ್ಲಿ ಮತ ಗಳಿಕೆಗಾಗಿ ಹೇಳಿಕೆಗಳನ್ನು ಕೊಡಬಾರದು. ಭಯೋತ್ಪಾದನೆ ಮಾಡುವವರು ಯಾರೇ ಇರಲಿ ಅದನ್ನು ಉಗ್ರವಾಗಿ ಖಂಡಿಸಬೇಕು ಎಂದು ಹೇಳಿದರು.

ಆಗ ಸಿದ್ದರಾಮಯ್ಯ ಅವರು ಭಯೋತ್ಪಾದಕರು ಯಾರೇ ಇರಲಿ, ಯಾವ ಜಾತಿ, ಧರ್ಮ ಇರಲಿ. ಇದು ಸಂಪೂರ್ಣವಾಗಿ ನಿರ್ಮೂಲನೆಯಾಗಬೇಕು. ಇದರಲ್ಲಿ ರಾಜೀಯಾಗುವ ಪ್ರಶ್ನೆಯೇ ಇಲ್ಲ ಎಂದರು.

ಈ ಮಧ್ಯೆ ಮಾತನಾಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಸಿ ಟಿ ರವಿ ಅವರು ತುಂಬಾ ಬುದ್ಧಿವಂತಿಕೆಯಿಂದ ಮಾತನಾಡಿದ್ದಾರೆ. ಸಂಸದೀಯ ವ್ಯವಸ್ಥೆಯಲ್ಲಿ ಮಾತನಾಡುವುದು ಒಂದು ಕಲೆ. ಅದನ್ನು ಸಿ ಟಿ ರವಿ ಮಾಡಿದ್ದಾರೆ. ಅವರನ್ನು ಅಭಿನಂದಿಸುತ್ತೇನೆ. ಐ ಲೈಕ್ ಇಟ್ ಎಂದಾಗ, ಸದನ ನಗೆಗಡಲಲ್ಲಿ ತೇಲಿತು. ಇದು ಗಂಭೀರವಾದ ವಿಚಾರ. ಹಾಗಾಗಿ, ಈ ವಿಷಯದ ಬಗ್ಗೆ ಸೋಮವಾರ ಚರ್ಚೆಗೆ ಅವಕಾಶ ನೀಡುವುದಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಇದನ್ನೂ ಓದಿ: ಕೋವಿಡ್ ಹೆಚ್ಚಳ ಭೀತಿ: ಒಳಾಂಗಣ ಪ್ರದೇಶದಲ್ಲಿ ಮಾಸ್ಕ್ ಧರಿಸಲು ಸಚಿವ ಕೆ ಸುಧಾಕರ್ ಸಲಹೆ

Last Updated : Dec 22, 2022, 7:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.