ಬೆಳಗಾವಿ: ಜನರು ಬಹಳಷ್ಟು ನಿರೀಕ್ಷೆ ಇಟ್ಟುಕೊಂಡು ಬಿಜೆಪಿಗೆ ಮತ್ತೊಮ್ಮೆ ಬಹುಮತ ನೀಡಿದ್ದರು. ಆದರೆ ಇಂದು ಮಂಡನೆಯಾದ ಕೇಂದ್ರದ ಬಜೆಟ್ ಜನರ ನಿರೀಕ್ಷೆಗಳನ್ನೆಲ್ಲಾ ಹುಸಿಯಾಗಿಸಿದೆ ಎಂದು ಶಾಸಕಿ ಹಾಗೂ ಮೈಸೂರು ಮಿನರಲ್ಸ್ ಚೇರಮನ್ ಲಕ್ಷ್ಮಿ ಹೆಬ್ಬಾಳಕರ್ ಪ್ರತಿಕ್ರಿಯಿಸಿದ್ದಾರೆ.
ಜನಸಾಮಾನ್ಯರಿಗೆ ಬಜೆಟ್ನಲ್ಲಿ ಏನೂ ಕೊಟ್ಟಿಲ್ಲ. ಪೆಟ್ರೋಲ್, ಡಿಸೆಲ್, ಆಟೋಮೊಬೈಲ್ ಉಪಕರಣಗಳ ಬೆಲೆಯನ್ನು ಮತ್ತಷ್ಟು ಏರಿಸುವ ಮೂಲಕ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈಗಿನ ಅಗತ್ಯವಾದ ಉದ್ಯಮ ವಲಯದ ಅಭಿವೃದ್ಧಿಗಾಗಲಿ, ಹೊಸ ಉದ್ಯೋಗ ಸೃಷ್ಟಿಗಾಗಲಿ ಬಜೆಟ್ನಲ್ಲಿ ಕೊಡುಗೆ ನೀಡಿಲ್ಲ ಎಂದು ಅವರು ಹೇಳಿದ್ದಾರೆ.