ETV Bharat / state

ಉಸ್ತುವಾರಿ ಹೊಣೆ ಬಳಿಕ ಮೊದಲ ಗೋವಾ ಭೇಟಿ: ದಿನೇಶ್​ ಗುಂಡೂರಾವ್​​ಗೆ ಅದ್ಧೂರಿ ಸ್ವಾಗತ - ದಿನೇಶ್​ ಗುಂಡೂರಾವ್​​ ಲೇಟೆಸ್ಟ್​ ನ್ಯೂಸ್​

ಕಾಂಗ್ರೆಸ್ ಉಸ್ತುವಾರಿ ಹೊಣೆ ಹೊತ್ತ ಬಳಿಕ ದಿನೇಶ್​ ಗುಂಡೂರಾವ್​ ಇದೇ ಮೊದಲ ಬಾರಿಗೆ ಗೋವಾಗೆ ಭೇಟಿ ನೀಡಿದ್ದು, ದಾಬೋಲಿಮ್ ಏರ್‌ಪೋರ್ಟ್‌ನಲ್ಲಿ ಕಾರ್ಯಕರ್ತರು ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದರು.

dinesh gundurao visits goa
ದಿನೇಶ ಗುಂಡೂರಾವ್​​ಗೆ ಗೋವಾದಲ್ಲಿ ಅದ್ಧೂರಿ ಸ್ವಾಗತ..
author img

By

Published : Oct 24, 2020, 10:07 AM IST

Updated : Oct 24, 2020, 10:52 AM IST

ಬೆಳಗಾವಿ: ಗೋವಾದ ಕಾಂಗ್ರೆಸ್ ಉಸ್ತುವಾರಿ ಹೊಣೆ ಹೊತ್ತ ಬಳಿಕ ದಿನೇಶ್​ ಗುಂಡೂರಾವ್ ಇಂದು ಮೊದಲ ಬಾರಿಗೆ ಗೋವಾಗೆ ಭೇಟಿ ನೀಡಿದರು. ಈ ವೇಳೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿ ಬರಮಾಡಿಕೊಂಡರು.

ಉಸ್ತುವಾರಿ ಹೊಣೆ ಹೊತ್ತ ಬಳಿಕ ಚೊಚ್ಚಲ ಭೇಟಿ: ದಿನೇಶ ಗುಂಡೂರಾವ್​​ಗೆ ಗೋವಾದಲ್ಲಿ ಅದ್ಧೂರಿ ಸ್ವಾಗತ

ಬಳಿಕ ಪಕ್ಷದ ನಾಯಕರೊಂದಿಗೆ ಸಭೆ ನಡೆಸಿದ ಅವರು, ಪಕ್ಷ ಸಂಘಟನೆ ಬಗ್ಗೆ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು. ಬೂತ್‌‌ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಬೇಕು, ಮುಂದಿನ ವಿಧಾನಸಭೆ ಚುನಾವಣೆಗೆ ಸಿದ್ಧರಾಗುವಂತೆ ಹಾಗೂ ಬಿಜೆಪಿ ನೇತೃತ್ವದ ಗೋವಾ ಸರ್ಕಾರದ ಜನವಿರೋಧಿ ನೀತಿಯನ್ನು ಜನರ ಮುಂದಿಡುವಂತೆ ಕಾರ್ಯಪ್ರವೃತ್ತರಾಗಲು ಸಲಹೆ ನೀಡಿದರು.

ಗೋವಾದ ರಾಜ್ಯ ಮಟ್ಟದ ನಾಯಕರು, ಹಾಲಿ ಮಾಜಿ ಶಾಸಕರು ಹಾಗೂ ಮುಖಂಡರ ಜೊತೆಗೂ ಗುಂಡೂರಾವ್ ಸಭೆ ನಡೆಸಿದ್ದಾರೆ. ಇಂದು ಗೋವಾದ ವಿಭಾಗ ಮಟ್ಟದ ಪದಾಧಿಕಾರಿಗಳು ಹಾಗೂ ‌ಕಾರ್ಯಕರ್ತರ ಸಭೆ ನಡೆಸಲಿದ್ದಾರೆ.

Last Updated : Oct 24, 2020, 10:52 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.