ETV Bharat / state

ಬೆಳಗಾವಿಯ ನೆರೆಪೀಡಿತ ಪ್ರದೇಶಗಳಿಗೆ ಇಂದು ಸಿಎಂ ಭೇಟಿ

ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಳಗಾವಿ ಜಿಲ್ಲೆಯ ಅಥಣಿಗೆ ಪ್ರವಾಸ ಬೆಳೆಸಿ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

ಯಡಿಯೂರಪ್ಪ
author img

By

Published : Aug 5, 2019, 8:04 AM IST

ಚಿಕ್ಕೋಡಿ: ಮುಖ್ಯಮಂತ್ರಿಯಾದಾಗಿನಿಂದಲೂ ಕಾಲಿಗೆ ಚಕ್ರ ಕಟ್ಟಿಕೊಂಡು ವಿವಿಧ ಅಭಿವೃದ್ಧಿ ಕಾಮಗಾರಿಗಳ ಅನುಮೋದನೆ, ಮಂಜೂರಾತಿ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಅಟೆಂಡ್ ಮಾಡುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಬೆಳಗಾವಿ ಜಿಲ್ಲೆಯ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.

ಪ್ರವಾಹ ಪೀಡಿತ ಪ್ರದೇಶ

ಇಂದು ಬೆಳಗಾವಿ ಜಿಲ್ಲಾ ಪ್ರವಾಸ ಕೈಗೊಂಡಿರುವ ಬಿಎಸ್​ವೈ ಮಧ್ಯಾಹ್ನ 2-15ಕ್ಕೆ ಅಥಣಿಯ ಎಸ್​ಎಂಎಸ್ ಕಾಲೇಜು ಆವರಣದಲ್ಲಿ ನಿರ್ಮಾಣ ಮಾಡಲಾಗಿರುವ ಹೆಲಿಪ್ಯಾಡ್​​ಗೆ ಹೆಲಿಕಾಪ್ಟರ್​​​ ಮುಖಾಂತರ ಆಗಮಿಸಿ ನಂತರ ಕೃಷ್ಣೆಯ ಪ್ರವಾಹದ ಅಬ್ಬರಕ್ಕೆ ಬಸವಳಿದು ಹೋಗಿರುವ ಅಥಣಿ ತಾಲೂಕಿನ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

ತಾಂತ್ರಿಕ ಕಾರಣಗಳಿಂದ ಮುಖ್ಯಮಂತ್ರಿಗಳ ಪ್ರವಾಸ ರದ್ದಾಗಿತ್ತು. ಆದರೆ ಬೆಳಗಾವಿಯ ಬಿಜೆಪಿ ನಾಯಕರು ಮನವಿ ಮಾಡಿದ್ದರಿಂದ ಯಡಿಯೂರಪ್ಪ ಬರುತ್ತಿದ್ದಾರೆ. ಇನ್ನು ಸಿಎಂ ಭೇಟಿ ಮಾಡುವ ಜಾಗಗಳಲ್ಲಿ ರಕ್ಷಣಾ ಕಾರ್ಯಾಚರಣೆಯೂ ಸಹ ಮುಂದುವರೆಯಲಿದ್ದು, ಎನ್​ಡಿಆರ್ಎಫ್ ತಂಡ ಮತ್ತು ಎಸ್​ಡಿಆರ್​​ಎಫ್ ತಂಡಗಳು ಜನ-ಜಾನುವಾರುಗಳ ರಕ್ಷಣೆಯಲ್ಲಿ ತೊಡಗಲಿವೆ.

CM trip list
ಬಿಎಸ್​ವೈ ಪ್ರವಾಸ ಪಟ್ಟಿ

ಇನ್ನು ಈಗಾಗಲೇ ಕೃಷ್ಣಾ ಒಳಹರಿವಿನ ಪ್ರಮಾಣ 2 ಲಕ್ಷ 80 ಸಾವಿರ ಕ್ಯೂಸೆಕ್ ದಾಟಿದ್ದು, ನಿನ್ನೆ ತಡರಾತ್ರಿ 1 ಲಕ್ಷ ಕ್ಯೂಸೆಕ್ ನೀರು ಹರಿದು ಬಿಡಲಾಗಿದೆ. ಹೀಗಾಗಿ ನದಿ ನೀರಿನ ಪ್ರಮಾಣವೂ ಹೆಚ್ಚಾಗಲಿದ್ದು, ಒಂದು ಕಡೆ ಸಿಎಂ ಯಡಿಯೂರಪ್ಪ ಭೇಟಿ, ಇನ್ನೊಂದೆಡೆ ಜನರ ರಕ್ಷಣಾ ಕಾರ್ಯ ಎರಡು ಸಹ ಒಟ್ಟಿಗೆ ಸಾಗಲಿವೆ.

Intro:ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಬೆಳಗಾವಿ ಜಿಲ್ಲೆಯ ಅಥಣಿಗೆ ಪ್ರವಾಸ ಬೆಳಸಲ್ಲಿದ್ದಾರೆ.Body:

ಚಿಕ್ಕೋಡಿ :

ಮುಖ್ಯಮಂತ್ರಿಯಾದಾಗಿನಿಂದಲೂ ಕಾಲಿಗೆ ಚಕ್ರಕಟ್ಟಿಕೊಂಡು ವಿವಿಧ ಅಭಿವೃದ್ದಿ ಕಾಮಗಾರಿಗಳ ಅನುಮೋದನೆ, ಮಂಜೂರಾತಿ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಅಟೆಂಡ್ ಮಾಡುತ್ತಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇಂದು ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ.

ಇಂದು ಬೆಳಗಾವಿ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಮಧ್ಯಾಹ್ನ ೨-೧೫ ಕ್ಕೆ ಅಥಣಿಯ ಎಸ್ ಎಂ ಎಸ್ ಕಾಲೇಜು ಆವರಣದಲ್ಲಿ ನಿರ್ಮಾಣ ಮಾಡಲಾಗಿರುವ ಹೆಲಿಪ್ಯಾಡ್ಗೆ ಹೆಲಿಕಾಫ್ಡರ್ ಮುಖಾಂತರ ಆಗಮಿಸಿ ನಂತರ ಕೃಷ್ಣೆಯ ಪ್ರವಾಹದ ಅಬ್ಬರಕ್ಕೆ ಬಸವಳಿದು ಹೋಗಿರುವ ಅಥಣಿ ತಾಲೂಕಿನ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

ತಾಂತ್ರಿಕ ಕಾರಣಗಳಿಂದ ರದ್ದಾಗಿದ್ದ ಮುಖ್ಯಂತ್ರಿಗಳ ಪ್ರವಾಸ ಕಾರ್ಯಕ್ರಮ ಬೆಳಗಾವಿಯ ಬಿಜೆಪಿ ನಾಯಕರು ಮನವಿ ಮಾಡಿದ್ದರಿಂದ ಯಡಿಯೂರಪ್ಪ ಬರುತ್ತಿದ್ದಾರೆ. ಇನ್ನು ಸಿ ಎಂ ಭೇಟಿ ಮಾಡುವ ಜಾಗಗಳಲ್ಲಿ ರಕ್ಷಣಾ ಕಾರ್ಯಾಚರಣೆಯೂ ಸಹ ಮುಂದುವರೆಯಲಿದ್ದು ಎನ್ ಡಿ ಆರ್ ಎಫ್ ತಂಡ, ಸೇನಾತುಕಡಿ, ಮತ್ತು ಎಸ್ ಡಿ ಆರ್ ಎಫ್ ತಂಡಗಳು ಜನ ಜಾನುವಾರುಗಳ ರಕ್ಷಣೆಯಲ್ಲಿ ತೊಡಗಲಿವೆ.

ಇನ್ನು ಈಗಾಗಲೇ ಕೃಷ್ಣಾ ಒಳ ಹರಿವಿನ ಪ್ರಮಾಣ ೨ ಲಕ್ಷ ೮೦ ಸಾವಿರ ಕ್ಯೂಸೇಕ್ ದಾಟಿದ್ದು ನಿನ್ನೆ ತಡರಾತ್ರಿ ೧ ಲಕ್ಷ ಕ್ಯೂಸೇಕ್ ನೀರು ಹರಿದು ಬಿಡಲಾಗಿದೆ. ಹೀಗಾಗಿ ನದಿ ನೀರಿನ ಪ್ರಮಾಣವೂ ಹೆಚ್ಚಾಗಲಿದ್ದು ಒಂದು ಕಡೆ ಸಿ ಎಂ ಯಡಿಯೂರಪ್ಪ ಬೇಟಿ ಇನ್ನೊಂದು ಕಡೆ ಜನರ ರಕ್ಷಣಾ ಕಾರ್ಯ ಎರಡು ಸಹ ಒಟ್ಟಿಗೆ ಸಾಗಲಿವೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.