ಬೆಳಗಾವಿ: ಸಿ.ಎಂ.ಇಬ್ರಾಹಿಂ ಜೊತೆ ಮಾತನಾಡಿದ್ದೇನೆ. ಅವರು ನಮ್ಮ ಪಕ್ಷಕ್ಕೆ ಬಂದ ಮೇಲೆ ಒಂದು ಸಲ, ವಿಧಾನಸಭೆ ಟಿಕೆಟ್, ಎರಡು ಬಾರಿ ಎಂಎಲ್‌ಸಿ ಟಿಕೆಟ್ ನೀಡಲಾಗಿದೆ. ಇಬ್ರಾಹಿಂ ನಮ್ಮ ಪಕ್ಷದ ಹಿರಿಯ ನಾಯಕ. ತಮ್ಮ ನೋವನ್ನು ನನ್ನ ಮುಂದೆ ಹೇಳಿಕೊಂಡಿದ್ದಾರೆ. ಅನೇಕರು ಆಕಾಂಕ್ಷಿಗಳಿದ್ದ ಕಾರಣ ಅವರನ್ನು ಮಂತ್ರಿ ಮಾಡಲು ಆಗಲಿಲ್ಲ. ಎಲ್ಲ ರೀತಿಯ ಅರ್ಹತೆ ಅವರಿಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಳಗಾವಿ ಲೋಕಸಭಾ ಉಪಚುನಾವಣೆ ಟಿಕೆಟ್ ಹಂಚಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಭೆ ಮಾಡಿ ಎಲ್ಲ ಮುಖಂಡರ ಅಭಿಪ್ರಾಯ ಸಂಗ್ರಹಿಸಿದ್ದೇವೆ. ಅವಶ್ಯಕತೆ ಬಿದ್ರೆ ಮತ್ತೊಂದು ಸಭೆ ಮಾಡ್ತೀವಿ. ಬಹಳ ಜನ ಆಕಾಂಕ್ಷಿಗಳಿದ್ದು ಒಂದೆರಡು ಹೆಸರು ಇಟ್ಟುಕೊಂಡಿದ್ದೀವಿ. ಸತೀಶ್ ಜಾರಕಿಹೊಳಿ ಕೆಪಿಸಿಸಿ ಕಾರ್ಯಾಧ್ಯಕ್ಷರು, ಈ ಭಾಗದ ಪ್ರಮುಖ ನಾಯಕರು. ಅವರಿಗೆ ಟಿಕೆಟ್ ನೀಡುವ ಬಗ್ಗೆ ಚರ್ಚಿಸುತ್ತೇವೆ ಎಂದರು.
ಓದಿ: ಬಿಬಿಎಂಪಿ ಚುನಾವಣೆ: ಹೈಕೋರ್ಟ್ ತೀರ್ಪಿಗೆ ಸುಪ್ರೀಂ ತಡೆ
ಮೈಲಾರಲಿಂಗೇಶ್ವರನಿಗೆ ನಮ್ಮ ಕಾರ್ಯಕರ್ತರೆಲ್ಲರೂ ಹರಕೆ ಹೊತ್ತಿದ್ದರು. ನಾನು ಸಹ ಒಂದು ಸಲ ಹೆಲಿಕಾಪ್ಟರ್ ನಲ್ಲಿ ಹೋಗಿದ್ದೆ. ಹೆಲಿಕಾಪ್ಟರ್‌ನಲ್ಲಿ ಹೋಗೋದು ತಪ್ಪು ಅಂತ ಕೆಲವು ಜನ ಹೇಳಿದ್ದರು. ಅದಕ್ಕೆ ಈ ಸಲ ರಸ್ತೆ ಮಾರ್ಗವಾಗಿ ಹೋಗಿ ಕ್ಷಮಾಪಣೆ ಕೋರಿದ್ದೇನೆ. ಎಲ್ಲರಿಗೂ ಆರೋಗ್ಯ, ಅಧಿಕಾರ ಕೊಡಲಿ ಅಂತ ಪ್ರಾರ್ಥಿಸಿದ್ದೇನೆ ಎಂದರು.