ಬೆಳಗಾವಿ: ಲೋಕ ಕಲ್ಯಾಣಕ್ಕಾಗಿ ಬೆಳಗಾವಿಯ ಹುಕ್ಕೇರಿ ಹಿರೇಮಠದಲ್ಲಿ ನಡೆಯುತ್ತಿರುವ ಧನ್ವಂತರಿ ಸುದರ್ಶನ ಹೋಮ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಾಲ್ಗೊಂಡರು.
ಬೆಳಗಾವಿಯ ಹುಕ್ಕೇರಿ ಹಿರೇಮಠದಲ್ಲಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ವಿದ್ವಾನ್ ಚಂದ್ರಶೇಖರಯ್ಯ, ವಿದ್ವಾನ್ ಸಂಪತ್ ಕುಮಾರಯ್ಯ ಹೋಮ ನಡೆಸುತ್ತಿದ್ದಾರೆ. ಆರೋಗ್ಯ ವೃದ್ಧಿ, ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದೆ ಎಂಬ ಮಾಹಿತಿ ದೊರೆತಿದೆ.
ಇದನ್ನೂ ಓದಿ: ಬಿಎಸ್ವೈ ಆರೋಗ್ಯದಲ್ಲಿ ಚೇತರಿಕೆ: ಸಿಎಂ ತಂಗಿರುವ ಹೋಟೆಲ್ ಸುತ್ತ ಸ್ಯಾನಿಟೈಸೇಷನ್