ETV Bharat / state

ಉಪಚುನಾವಣೆ -  ಇಂದು ಸಿಎಂ ಬಿಎಸ್​ವೈ ಕೊನೆ ಹಂತದ ಕಸರತ್ತು: ಬೆಳಗಾವಿಯಲ್ಲಿ ಭರ್ಜರಿ ಪ್ರಚಾರ

author img

By

Published : Dec 3, 2019, 9:38 AM IST

ಜಿಟಿ ಜಿಟಿ ಮಳೆಯಲ್ಲಿ ನೀವೆಲ್ಲಾ ಕೂತಿದ್ದಿರಿ ಇದು ಒಳ್ಳೆಯ ಶುಭ ಸೂಚನೆ,ಅಥಣಿ ಮಹೇಶ್​ ಕುಮಠಳ್ಳಿ ಮತ್ತು ಕಾಗವಾಡದಲ್ಲಿ ಶ್ರೀಮಂತ ಪಾಟೀಲ್​ ಹಾಗೂ ಗೋಕಾಕದಲ್ಲಿ ರಮೇಶ್ ಜಾರಕಿಹೋಳಿ ಗೆಲ್ಲಿಸುತ್ತಿರಿ ಅನ್ನುವ ಭರವಸೆ ಇದೆ ಎಂದು ಮತದಾರರನ್ನು ಕುರಿತು ಸಿಎಂ ಬಿಎಸ್​ ಯಡಿಯೂರಪ್ಪ ವಿಶ್ವಾಸದ ಮಾತುಗಳನ್ನ ಆಡಿದ್ದಾರೆ.

wsdded
ಉಪಚುನಾವಣೆಗೆ ಸಿಎಂ ಬಿಎಸ್​ವೈ ಕೊನೆ ಹಂತದ ಕಸರತ್ತು,ಬೆಳಗಾವಿಯಲ್ಲಿ ಭರ್ಜರಿ ಪ್ರಚಾರ

ಚಿಕ್ಕೋಡಿ: ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಸಿಎಂ ಯಡಿಯೂರಪ್ಪ ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ಹಾಗೂ ಕಾಗವಾಡ ಮತ ಕ್ಷೇತ್ರದಲ್ಲಿ ಎಡೆಬಿಡದೆ ಪ್ರಚಾರ ಸಮಾವೇಶಗಳನ್ನೆ ನಡೆಸಿ ಶತಾಯಗತಾಯ ಬಿಜೆಪಿ ಅಭ್ಯರ್ಥಿಗಳನ್ನ ಗೆಲ್ಲಿಸಲೇಬೇಕು ಅಂತ ಪಣತೊಟ್ಟಿದ್ದಾರೆ.

ಉಪಚುನಾವಣೆಗೆ ಸಿಎಂ ಬಿಎಸ್​ವೈ ಕೊನೆ ಹಂತದ ಕಸರತ್ತು,ಬೆಳಗಾವಿಯಲ್ಲಿ ಭರ್ಜರಿ ಪ್ರಚಾರ
ಬೆಳಗ್ಗೆಯಿಂದ ಎರಡು ಕ್ಷೇತ್ರದಲ್ಲಿ ಒಂದಾದ ಮೇಲೊಂದು ಪ್ರಚಾರ ಕಾರ್ಯಕ್ರಮ ಹಾಗೂ ಮುಖಂಡರು ಜೊತೆ ಚರ್ಚೆ ಕೂಡ ನಡೆಸಿದರು. ಅಥಣಿಯಲ್ಲಿ ಬೃಹತ್ ಸಮಾವೇಶ ಮುಗಿಸಿ ಕಾಗವಾಡ ಕ್ಷೇತ್ರದ ಐನಾಪೂರ ಪಟ್ಟಣಕ್ಕೆ ಆಗಮಿಸಿದ ಸಿಎಂ ಯಡಿಯೂರಪ್ಪ ಮತಬೇಟೆಗೆ ಮುಂದಾದರು. ಹಣ,ಹೆಂಡ,ತೊಳ್ಬಲ, ಜಾತಿ ವಿಷಬೀಜ ಬಿತ್ತಿ ಚುನಾವಣೆ ಗೆಲ್ಲುವ ಕಾಂಗ್ರೆಸ್ ಜೆಡಿಎಸ್ ಗೆ ಡಿಸೆಂಬರ್ 9 ರಂದು ಜನ ಉತ್ತರಿಸುತ್ತಾರೆ. ಅವರಿಗೆ ಅಭಿವೃದ್ಧಿ ಬೇಕಾಗಿಲ್ಲ ಯಡಿಯೂರಪ್ಪ ಗೆ ಬಹುಮತ ಬರಬಾರದು, ಮತ್ತೆ ಚುನಾವಣೆ ನಡೆಯಬೇಕು ಎನ್ನುವ ಭ್ರಮೆಯಲ್ಲಿದ್ದಾರೆ ಎಂದು ಕಾಂಗ್ರೆಸ್​, ಜೆಡಿಎಸ್​ ವಿರುದ್ಧ ವ್ಯಂಗ್ಯವಾಡಿದರು.

ಈ ಉಪಚುನಾವಣೆಯಲ್ಲಿ ಶ್ರೀಮಂತ ಪಾಟೀಲ್‌ ಅವರನ್ನು 25 ಸಾವಿರತ ಮತಗಳಿಂದ ಆರಿಸಿ ತನ್ನಿ. ಈ ಕ್ಷೇತ್ರದಲ್ಲಿ ಏನೇನು ಯೋಜನೆ ಆಗಬೇಕು ಅಂತಾ ಅಪೇಕ್ಷ ಪಡ್ತಿರೋ ಅವೆಲ್ಲವೂ ಈಡೇರಿಸುವ ಭರವಸೆ ನೀಡುತ್ತೇನೆ ಎಂದು ಹೇಳಿದರು. ಅದರಲ್ಲು ನೀರಾವರಿ, ರೈತರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಕರ್ನಾಟಕ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡುವ ಕನಸು ಕಂಡಿದ್ದೇನೆ. ಶ್ರೀಮಂತ ಪಾಟೀಲ್ ಸೇರಿದಂತೆ 17 ಜನರ ರಾಜೀನಾಮೆ ನೀಡಿದ್ದರಿಂದ ಇಂದ ನಾನು ಸಿಎಂ ಆಗಿ ಅಧಿಕಾರ ಸಿಕ್ಕಿದೆ. ಶ್ರೀಮಂತ ಪಾಟೀಲ್​ ಅವರನ್ನು ಜೀವ‌ನ ಪೂರ್ತಿ ಮರೆಯಲ್ಲಾ ಎಂದು ಕೊಂಡಾಡಿದರು. ಮುಂದಿನ ದಿನದಲ್ಲಿ ಶ್ರೀಮಂತ ಪಾಟೀಲ್​​​ ಗೆ ಒಳ್ಳೆಯ ಸ್ಥಾನ ಸಿಗುತ್ತದೆ ಎಂದು ಭರವಸೆ ನೀಡುತ್ತೇನೆ ಎಂದು ಹೇಳಿದರು. ಕ್ಷೇತ್ರದ ಸಮಸ್ಯೆ ಬಗೆಹರಿಸಲು ಪ್ರಮಾಣಿಕ ಪ್ರಯತ್ನ ಮಾಡಿ ನಿಮ್ಮ ಕಣ್ಣೀರು ಒರೆಸುತ್ತೇನೆ. ಬರುವ ಡಿಸೆಂಬರ್ 5 ರಂದು ಕಮಲದ ಚಿನ್ಹೆಗೆ ಮತ ನೀಡಿ ಹೆಚ್ಚು ಮತಗಳಿಂದ ಆರಿಸಿ ತನ್ನಿ ಎಂದು ಶ್ರೀಮಂತ ಪಾಟೀಲ್​ ಪರ ಸಿಎಂ ಯಡಿಯೂರಪ್ಪ ಭರ್ಜರಿ ಮತಯಾಚನೆ ಮಾಡಿದರು.

Intro:ರಂಗೇರಿದ ಬಿಜೆಪಿ ನಾಯಕರ ಪ್ರಚಾರBody:

ಚಿಕ್ಕೋಡಿ :
ಪ್ಯಾಕೇಜ್

ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಸಿಎಂ ಯಡಿಯೂರಪ್ಪ ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ಹಾಗೂ ಕಾಗವಾಡ ಮತಕ್ಷೇತ್ರದಲ್ಲಿ ಎಡೆಬಿಡದೆ ಪ್ರಚಾರ ಸಮಾವೇಶಗಳನ್ನೆ ನಡೆಸಿ ಶತಾಯಗತಾಯ ಬಿಜೆಪಿ ಅಭ್ಯರ್ಥಿಗಳನ್ನ ಗೆಲ್ಲಿಸಲೇ ಬೇಕು ಅಂತ ಪಣತೊಟ್ಟಿದ್ದಾರೆ.

ಬೆಳಿಗ್ಗೆಯಿಂದ ಎರಡು ಕ್ಷೇತ್ರದಲ್ಲಿ ಒಂದಾದ ಮೇಲೊಂದು ಪ್ರಚಾರ ಕಾರ್ಯಕ್ರಮ ಹಾಗೂ ಮುಖಂಡರು ಜೊತೆ ಚರ್ಚೆ ಕೂಡ ನಡೆಸಿದರು.
ಅಥಣಿಯಲ್ಲಿ ಬೃಹತ್ ಸಮಾವೇಶ ಮುಗಿಸಿ ಕಾಗವಾಡ ಕ್ಷೇತ್ರದ ಐನಾಪೂರ ಪಟ್ಟಣಕ್ಕೆ ಆಗಮಿಸಿದ ಸಿಎಂ ಯಡಿಯೂರಪ್ಪ ಮತಬೇಟಿಗೆ ಮುಂದಾದರೂ.

ಹಣಬಲ ಹೆಂಡದ ಬಲ ತೊಳ್ಬಲ ಜಾತಿಯ ವಿಷಬೀಜ ಬಿತ್ತಿ ಚುನಾವಣೆ ಗೆಲ್ಲುವ ಕಾಂಗ್ರೆಸ್ ಜೆಡಿಎಸ್ ಗೆ ಡಿಸೆಂಬರ್ 9 ರಂದು ಜನ ಉತ್ತರಿಸುತ್ತಾರೆ. ಅವರಿಗೆ ಅಭಿವೃದ್ಧಿ ಬೇಕಾಗಿಲ್ಲ ಯಡಿಯೂರಪ್ಪ ಗೆ ಬಹುಮತ ಬರಬಾರದು, ಮತ್ತೆ ಚುನಾವಣೆ ನಡೆಯಬೇಕು ಅನ್ನುವ ಭ್ರಮೆಯಲ್ಲಿ ಇದ್ದಾರೆ.‌ ಅಥಣಿ ಮಹೇಶ ಕುಮಠಳ್ಳಿ ಮತ್ತು ಕಾಗವಾಡದಲ್ಲಿ ಶ್ರೀಮಂತ ಪಾಟೀಲ ಹಾಗೂ ಗೋಕಾಕದಲ್ಲಿ ರಮೇಶ್ ಜಾರಕಿಹೋಳಿ ಅವರನ್ನು ಗೆಲ್ಲಿಸುತ್ತಿರಿ ಅನ್ನುವ ಭರವಸೆ ಇದೆ. ಜಿಟಿ ಜಿಟಿ ಮಳೆಯಲ್ಲಿ ನೀವೆಲ್ಲಾ ಕೂತಿದ್ದಿರಿ ಇದು ಒಳ್ಳೆಯ ಶುಭ ಸೂಚನೆ ಅಂತ ಹೇಳಿ ತಮ್ಮ ಭಾಷಣ ಆರಂಭಿಸಿದರು.

ಈ ಉಪಚುನಾವಣೆಯಲ್ಲಿ ಶ್ರೀಮಂತ ಪಾಟೀಲ್‌ರನ್ನು 25 ಸಾವಿರತ ಮತ ಗಳಿಂದ ಆರಿಸಿ ತನ್ನಿ. ಈ ಕ್ಷೇತ್ರದಲ್ಲಿ ಏನೇನು ಯೋಜನೆ ಆಗಬೇಕು ಅಂತಾ ಅಪೇಕ್ಷ ಪಡ್ತಿರೋ ಅವೆಲ್ಲವೂ ಈಡೇರಿಸುವ ಭರವಸೆ ನೀಡುತ್ತೇನೆ ಎಂದು ಹೇಳಿದರು. ಅದರಲ್ಲು ನೀರಾವರಿ, ರೈತರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಕರ್ನಾಟಕ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡುವ ಕನಸು ಕಂಡಿದ್ದೇನೆ. ಶ್ರೀಮಂತ ಪಾಟೀಲ್ ಸೇರಿದಂತೆ ೧೭ ಜನರ ರಾಜೀನಾಮೆ ನೀಡಿದ್ದರಿಂದ ಇಂದ ನಾನು ಸಿಎಂ ಆಗಿ ಅಧಿಕಾರ ಸಿಕ್ಕಿದೆ. ಶ್ರೀಮಂತ ಪಾಟೀಲ ರನ್ನು ಜೀವ‌ನ ಪೂರ್ತಿ ಮರೆಯಲ್ಲಾ ಎಂದು ಕೊಂಡಾಡಿದರು. ಮುಂದಿನ ದಿನದಲ್ಲಿ ಶ್ರೀಮಂತ ಪಾಟೀಲಗೆ ಒಳ್ಳೆಯ ಸ್ಥಾನ ಸಿಗುತ್ತದೆ ಎಂದು ಭರವಸೆ ನೀಡುತ್ತೇನೆ ಎಂದು ಹೇಳಿದರು. ಕ್ಷೇತ್ರದ ಸಮಸ್ಯೆ ಬಗೆಹರಿಸಲು ಪ್ರಮಾಣಿಕ ಪ್ರಯತ್ನ ಮಾಡಿ ನಿಮ್ಮ ಕಣ್ಣೀರು ಒರೆಸುತ್ತೇನೆ. ಬರುವ ಡಿಸೆಂಬರ್ ೫ ರಂದು ಕಮಲದ ಚಿನ್ಹೆಗೆ ಮತ ನೀಡಿ ಅತೀ ಹೆಚ್ಚು ಮತಗಳಿಂದ ಆರಿಸಿ ತನ್ನಿ ಎಂದು ಶ್ರೀಮಂತ ಪಾಟೀಲ ಪರ ಮತಯಾಚನೆ ಮಾಡಿದರು.

ಬೈಟ್: ಬಿ. ಎಸ್ ಯಡಿಯೂರಪ್ಪ - ಮುಖ್ಯ ಮಂತ್ರಿ

ಇನ್ನು ಇದೇ ವೇಳೆ ಮಾತನಾಡಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಶಾಸಕಿ ಹೆಬ್ಬಾಳ್ಕರ್ ಡ್ಯಾಶ್ ಡ್ಯಾಶ್ ಗೆ ಹೇಳಿಕೆಗೆ ಯತ್ನಾಳ ವ್ಯಂಗ್ಯ, ಕರ್ನಾಟಕ ತುಂಬೆಲ್ಲ ಡ್ಯಾಸ್ ಡ್ಯಾಶ್ ಫೆಮಸ್ ಆಗಿದೆ. ಮಾಜಿ ಪ್ರಧಾನಿ ದೇವಗೌಡರ ಧ್ವನಿಯಲ್ಲಿ ಮಿಮಿಕ್ರಿ ಮಾಡಿದ ಯತ್ನಾಳ, ಶುಕ್ರವಾರ ನನ್ನ ಮಗನಿಗೆ ಶುಕ್ರ ದೆಸೆ ಬರುತ್ತದೆ ಅಂತಾ ಅವರ ಧ್ವನಿ ಯಲ್ಲೇ ಮಿಮಿಕ್ರಿ ಮಾಡಿದರು. ಗಂಡಸ್ತನ, ಡ್ಯಾಶ್ ಡ್ಯಾಶ್ ಎನ್ನುವ ಮಾತು ಆಡಿದವರಿಗೆ ಸರಿಯಾಗಿ ಪಾಠ ಕಲಸಿ. ಎಂದು ಹೆಬ್ಬಾಳ್ಕರ್ ಗೆ ತಿರುಗೇಟು ನೀಡಿದರು.

ಶಾಸಕ ಉಮೇಶ ಕತ್ತಿಗೆ ಕಾಲ ಎಳೆದ ಯತ್ನಾಳ,
ಎರಡು ದಿನ ಕ್ಷೇತ್ರದಲ್ಲಿ ಕೆಲಸ ಮಾಡಿ. ಮುಂದೆ ನಿಮಗೂ ಸಚಿವ ಸ್ಥಾನ ಸಿಗುತ್ತದೆ ಇಲ್ಲಾಂದ್ರ ಇಲ್ಲಾ. ಈ ಶ್ರೀಮಂತ ಪಾಟೀಲ ಗೆದ್ದರೆ ಮಾತ್ರೆ ನಿಮಗೆ ಸಚಿವ ಸ್ಥಾನ ಸಿಗುತ್ತದೆ ಇಲ್ಲಾಂದ್ರೆ ಉಹೂ.

ಡಿಸಿಎಂ ಲಕ್ಷ್ಮಣ ಸವದಿಗೆ , ಸವದಿ ಅವರೇ ನಮ್ಮ ಜಿಲ್ಲೇನೂ ಅಭಿವೃದ್ಧಿ ಮಾಡಿ ನಿಮ್ಮ ಕ್ಷೇತ್ರ ಮಾತ್ರ ಅಭಿವೃದ್ಧಿ ಮಾತ್ರ ಮಾಡಕೊಬೇಡಿ. ನೀವು ರಾಜ್ಯದ ಮಂತ್ರಿ ಆಗಿದ್ದೀರಿ. ನಾವು ಮಂತ್ರಿ ಆಗಿಲ್ಲ. ಸೀನಿಯರ್ ಮೇಲೆ ಬಂದ್ರೆ ನಾನೂ ಮಂತ್ರಿ ಆಗ್ತಿನಿ ಆದರೆ ಆಗಿಲ್ಲ. ಎಂದು ಸಿಎಂ ಯಡಿಯೂರಪ್ಪ ಅವರಿಗೆ ಪರೋಕ್ಷವಾಗಿ ಸಚಿವ ಸ್ಥಾನ ನೀಡಿ ಅಂತಾ ಬೇಡಿಕೊಂಡ ಶಾಸಕ ಯತ್ನಾಳ

ಬೈಟ್ 2 : ಬೈಟ್: ಬಸನಗೌಡ ಪಾಟೀಲ ಯತ್ನಾಳ - ಮಾಜಿ ಕೇಂದ್ರ ಸಚಿವ

ಒಟ್ಟಾರೆಯಾಗಿ ಅಥಣಿ, ಕಾಗವಾಡ ವಿಧಾನಸಭಾ ಮತಕ್ಷೇತ್ರದಲ್ಲಿ ಬಿಜೆಪಿ‌ ನಾಯಕರ ಸೈನ್ಯವೇ ಬಂದಿಳಿದಿದ್ದು ಶತಾಯ ಗತಾಯ ಪ್ರಯತ್ನ ಮಾಡಿ ಅಥಣಿ ಬಿಜೆಪಿ ಮಹೇಶ ಕುಮಟಳ್ಳಿ ಹಾಗೂ ಕಾಗವಾಡ ಶ್ರೀಮಂತ ಪಾಟೀಲ ಅವರನ್ನು ಗೆಲ್ಲಿಸಿ ತರುವ ನಿಟ್ಟಿನಲ್ಲಿ ಇಂದು ಎಲ್ಲ ನಾಯಕರೂ ಪ್ರಚಾರ ಸಭೆಯಲ್ಲಿ ಭಾಗಿಯಾಗಿದ್ದು ಇಂದಿನ ಬಿಜೆಪಿ ಕಾರ್ಯಕರ್ತರ ಸಭೆಗೆ ಸಾಕ್ಷಿಯಾಯಿತು.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.