ETV Bharat / state

ಇಂದಿನಿಂದ ಎರಡು ದಿನ ಸಿಎಂ ಬೆಳಗಾವಿ ಪ್ರವಾಸ; ಬೊಮ್ಮಾಯಿಗೆ ತಟ್ಟಲಿದೆ ರೈತರ ಪ್ರತಿಭಟನೆ ಬಿಸಿ - sugar cane farmers protest

ನೆರೆಸಂತ್ರಸ್ತರು, ಕಬ್ಬು ಬೆಳೆಗಾರರು ಇಂದಿನಿಂದ ಅಹೋರಾತ್ರಿ ಪ್ರತಿಭಟನೆಗೆ ನಿರ್ಧರಿಸಿದ್ದಾರೆ. ಈ ಮಧ್ಯೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳಗಾವಿ ಪ್ರವಾಸ ಕೈಗೊಳ್ಳುತ್ತಿದ್ದು ಸಿಎಂಗೆ ಪ್ರತಿಭಟನೆ ಕಾವು ತಟ್ಟುವ ಸಾಧ್ಯತೆ ಇದೆ ಎನ್ನಲಾಗಿದೆ.

cm to visit belgavi for two days
ಇಂದಿನಿಂದ ಎರಡು ದಿನ ಸಿಎಂ ಬೆಳಗಾವಿ ಪ್ರವಾಸ
author img

By

Published : Sep 25, 2021, 9:06 AM IST

Updated : Sep 25, 2021, 9:44 AM IST

ಬೆಳಗಾವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿನಿಂದ ಎರಡು ದಿನ ಬೆಳಗಾವಿ ಪ್ರವಾಸ ಕೈಗೊಳ್ಳಲಿದ್ದಾರೆ. ಹೀಗಾಗಿ ಸಿಎಂ ಬೊಮ್ಮಾಯಿಗೆ ನೆರೆ ಸಂತ್ರಸ್ತರು, ರೈತರಿಂದ ಪ್ರತಿಭಟನೆ ಬಿಸಿ ತಟ್ಟುವ ಸಾಧ್ಯತೆಯಿದೆ.

ನೆರೆಸಂತ್ರಸ್ತರು, ಕಬ್ಬು ಬೆಳೆಗಾರರು ಇಂದಿನಿಂದ ಅಹೋರಾತ್ರಿ ಪ್ರತಿಭಟನೆಗೆ ನಿರ್ಧರಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಗಮನ ಸೆಳೆಯುವ ನಿಟ್ಟಿನಲ್ಲಿ ರೈತರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ನೇತೃತ್ವದಲ್ಲಿ ಪ್ರತಿಭಟನೆಯಲ್ಲಿ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ 200ಕ್ಕೂ ಹೆಚ್ವು ರೈತರು ಭಾಗಿಯಾಗುವ ಸಾಧ್ಯತೆ ಇದೆ.

ಬೆಳಗ್ಗೆ 9 ಗಂಟೆಯಿಂದ ಬೆಳಗಾವಿ ಡಿಸಿ ಕಚೇರಿ ಎದುರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಸಕ್ಕರೆ ಆಯುಕ್ತಾಲಯ ಕಚೇರಿ ಬೆಳಗಾವಿಗೆ ಸ್ಥಳಾಂತರಿಸಬೇಕು ಹಾಗೂ ‌2019 ಹಾಗೂ 2021ರ ಪ್ರವಾಹದ ನೆರೆಸಂತ್ರಸ್ತರಿಗೆ ಪರಿಹಾರ ನೀಡಬೇಕು, ಕಬ್ಬು ಬೆಳೆಗಾರರಿಂದ ಬಾಕಿ ಉಳಿಸಿಕೊಂಡ ಸಕ್ಕರೆ ಕಾರ್ಖಾನೆಗಳಿಂದ ಹಣ ಬಿಡುಗಡೆಗೆ ಕ್ರಮ ವಹಿಸುವುದು ಸೇರಿದಂತೆ ‌ಈ ಮೂರು ಪ್ರಮುಖ ಬೇಡಿಕೆಗಳನ್ನು ಇಟ್ಟುಕೊಂಡು ಪ್ರತಿಭಟನೆಗೆ ರೈತರು ನಿರ್ಧರಿಸಿದ್ದಾರೆ.

ಸಿಎಂ ಸಂಚರಿಸುವ ಮಾರ್ಗದಲ್ಲಿ ಬಿಜೆಪಿ ಧ್ವಜ ಕಟ್ಟಿದ ಶಾಸಕ ಅಭಯ ಪಾಟೀಲ:

ಬೆಳಗಾವಿ ನಗರದಲ್ಲಿ ಸಿಎಂ ಸಂಚರಿಸುವ ಮಾರ್ಗದಲ್ಲಿ ಬಿಜೆಪಿ ಶಾಸಕ ಅಭಯ ಪಾಟೀಲ ಪಕ್ಷದ ಧ್ವಜ ಕಟ್ಟಿ ಗಮನ ಸೆಳೆದರು. ತಡರಾತ್ರಿ ಕಾರ್ಯಕರ್ತರ ಜತೆಗೂಡಿ ಶಾಸಕರೇ ಪಕ್ಷದ ಧ್ವಜ ಕಟ್ಟಿದರು. ಬೆಳಗಾವಿ ನಗರದ ವಿವಿಧೆಡೆ ಕಾರ್ಯಕರ್ತರ ಜೊತೆಗೆ ಶಾಸಕ ಅಭಯ ಪಾಟೀಲ ಪಕ್ಷದ ಧ್ವಜ ಕಟ್ಟುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

belagavi
ಬಿಜೆಪಿ ಧ್ವಜ ಕಟ್ಟಿದ ಶಾಸಕ ಅಭಯ ಪಾಟೀಲ
belagavi
ಬಿಜೆಪಿ ಧ್ವಜ ಕಟ್ಟಿದ ಶಾಸಕ ಅಭಯ ಪಾಟೀಲ

ಇದನ್ನೂ ಓದಿ: ಯುಪಿಎಸ್‌ಸಿ ಪರೀಕ್ಷೆ ಫಲಿತಾಂಶ: ಬೆಳಗಾವಿಯ ಶಾಕೀರ್ ಅಹ್ಮದ್​ಗೆ 583ನೇ ರ್‍ಯಾಂಕ್

Last Updated : Sep 25, 2021, 9:44 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.