ಬೆಳಗಾವಿ: ಕಿತ್ತೂರು ಉಪ ನೋಂದಣಿ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಸುತ್ತಿದ್ದ ಸಿಬ್ಬಂದಿಗೆ ಸಾರ್ವಜನಿಕರೇ ಛೀಮಾರಿ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ಬೆಳಗಾವಿ ಜಿಲ್ಲಾಧಿಕಾರಿ ಹೆಸರಲ್ಲಿ ಇಲ್ಲಿನ ಸಿಬ್ಬಂದಿ ಸಾರ್ವಜನಿಕರಿಂದ ಹಗಲು ದರೋಡೆ ಮಾಡುತ್ತಿದ್ದಾರೆ. ಲಂಚ ತೆಗೆದುಕೊಳ್ಳುತ್ತಿದ್ದ ಎನ್ನಲಾದ ಸಿಬ್ಬಂದಿಯನ್ನು ಸಾರ್ವಜನಿಕರು ತರಾಟೆ ತೆಗೆದುಕೊಂಡಿದ್ದಾರೆ. ಉಪ ನೋಂದಣಿ ಕಚೇರಿಯ ಗುಮಾಸ್ತ ಗಿರಿಮಲ್ಲ ಹಿರೇಕೋಡಿ ಎಂಬಾತ ಹಗಲು ದರೋಡೆ ಮಾಡುತ್ತಿರುವ ಆರೋಪಕ್ಕೆ ಗುರಿಯಾಗಿದ್ದಾನೆ.
ಬ್ಯಾಂಕಿನ ಬೋಜಾ ತೆಗೆಯಲು ಸರ್ಕಾರಿ ಶುಲ್ಕ 670 ಇದೆ. ಇದರ ಜತೆಗೆ ಇಲ್ಲಿನ ಸಿಬ್ಬಂದಿ 10 ರೂ. ಮುಖ ಬೆಲೆಯ ಶಸ್ತ್ರಾಸ್ತ್ರ ಸೇನಾ ಧ್ವಜ ದಿವಸ್ ಟಿಕೆಟ್ ನೀಡಿ ಸಾರ್ವಜನಿಕರಿಂದ 270 ರೂ. ವಸೂಲಿ ಮಾಡತ್ತಿದ್ದಾನೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಾಪಂ ಮಾಜಿ ಅಧ್ಯಕ್ಷ ಬಸವರಾಜ ಪರವಣ್ಣವರ, ರೈತ ಮುಖಂಡ ಮಾರುತಿ ಹೈಬತ್ತಿ ಸಿಬ್ಬಂದಿಗೆ ಚಳಿ ಬಿಡಿಸಿದ್ದಾರೆ. ಡಿಸಿ ಅವರೇ ಹಣ ಪಡೆಯಲು ಹೇಳಿದ್ದಾರೆ ಎಂದು ಗುಮಾಸ್ತ ಜಾರಿಕೊಳ್ಳಲು ಯತ್ನ ಮಾಡಿದ್ದಾನೆ. ಈ ಬಗ್ಗೆ ಡಿಸಿ ಸಾಹೇಬ್ರು ಸ್ಪಷ್ಟನೆ ನೀಡುವ ಜತೆಗೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.