ETV Bharat / state

ಧನದಾಹಕ್ಕೆ ಬಾಲ್ಯ ವಿವಾಹ! ಮುಚ್ಚಳಿಕೆ ಬರೆದುಕೊಟ್ಟರೂ ಹಳೆ ಚಾಳಿ ಬಿಡಲಿಲ್ಲ! - kannada news

ಯಾವುದೇ ಕಾರಣಕ್ಕೂ ಬಾಲ್ಯ ವಿವಾಹ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆದು ಕೊಟ್ಟ ಪೋಷಕರ ಧನದಾಹಕ್ಕೆ ಬಾಲಕಿ ಬಲಿಯಾದಳು!

ಬಾಲ್ಯವಿವಾಹ
author img

By

Published : May 30, 2019, 12:04 PM IST

ಚಿಕ್ಕೋಡಿ : ಬಾಲ್ಯವಿವಾಹ ನಿಲ್ಲಿಸಿ ಮುಚ್ಚಳಿಕೆ ಪತ್ರ ಬರೆದುಕೊಟ್ಟಿದ್ದ ಕುಟುಂಬವೊಂದು ಅಧಿಕಾರಿಗಳಿಗೆ ತಿಳಿಯದಂತೆ ಅಪ್ರಾಪ್ತ ಬಾಲಕಿಯ ಮದುವೆ ಮಾಡಿದ್ದು, ಈ ವಿಷಯ ಅಧಿಕಾರಿಗಳಿಗೆ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಪರಾರಿಯಾದ ಪ್ರಕರಣ ನಡೆದಿದೆ.

ಕೊಪ್ಪಳ ತಾಲೂಕಿನ ಗ್ರಾಮವೊಂದರ ಅಪ್ರಾಪ್ತೆಯನ್ನು ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಹುಲಗಬಾಳಿ ಗ್ರಾಮದ ಯುವಕನ ಜೊತೆ ವಿವಾಹ ಮಾಡಲು ನಿರ್ಧರಿಸಲಾಗಿತ್ತು. ಅದ್ರೆ ಮದುವೆಗೆ ಸಹಮತ ವ್ಯಕ್ತಪಡಿಸದ ಬಾಲಕಿ ಈ ಕುರಿತಾಗಿ ತನ್ನ ಚಿಕ್ಕಪ್ಪನ ಮುಂದೆ ಅಳಲು ತೋಡಿಕೊಂಡಿದ್ದಳು. ಹುಡುಗಿಯ ಚಿಕ್ಕಪ್ಪ ಮಕ್ಕಳ ಸಹಾಯವಾಣಿಗೆ ಈ ಸಂಬಂಧ ದೂರು ನೀಡಿದ್ದರು.

ಈ ವಿವಾಹ ಕೊಪ್ಪಳದಲ್ಲಿ ನಡೆಯಬೇಕಿತ್ತು. ಅಪ್ರಾಪ್ತೆಯನ್ನು ಮದುವೆ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿದ್ದಂತೆ ಬಾಲಕಿ ತಂದೆ- ತಾಯಿಯನ್ನು ಕೊಪ್ಪಳ ಕಲ್ಯಾಣ ಸಮಿತಿ ಅಧಿಕಾರಿಗಳು ಕರೆಸಿಕೊಂಡು ಕಾನೂನು ಮತ್ತು ಬಾಲ್ಯ ವಿವಾಹದಿಂದಾಗುವ ವ್ಯತಿರಿಕ್ತ ಪರಿಣಾಮದ ಬಗ್ಗೆ ತಿಳಿ ಹೇಳಿದ್ದರು. ಇದರಿಂದ ಎಚ್ಚೆತ್ತ ಬಾಲಕಿ ಮನೆಯವರು ಯಾವುದೇ ಕಾರಣಕ್ಕೂ ಬಾಲ್ಯ ವಿವಾಹ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆದು ಕೊಟ್ಟಿದ್ದರು.

ಆದ್ರೆ, ಪೋಷಕರ ಧನದಾಹ ನಿಲ್ಲಲಿಲ್ಲ. ಪಾಲಕರು ಮೇ 20ಕ್ಕೆ ಅಥಣಿ ತಾಲೂಕಿನ ಹುಲಗಬಾಳ ಗ್ರಾಮದಲ್ಲಿ ಒತ್ತಾಯದ ಮೇರೆಗೆ ಬಾಲ್ಯವಿವಾಹ ನೆರವೇರಿಸಿದ್ದಾರೆ. ಈ ಬಗ್ಗೆ ಬೆಳಗಾವಿ ಮಕ್ಕಳ ಕಲ್ಯಾಣ ಸಮಿತಿಗೆ ಕೊಪ್ಪಳ ಮಕ್ಕಳ ಕಲ್ಯಾಣ ಸಮಿತಿ ಮಾಹಿತಿ ನೀಡಿದೆ. ಬಳಿಕ ಎಚ್ಚೆತ್ತುಕೊಂಡ ಅಧಿಕಾರಿಗಳು ಹುಲಬಾಳ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದ್ರೆ, ಈ ವೇಳೆ ಕುಟುಂಬಸ್ಥರು ಪರಾರಿಯಾಗಿದ್ದು ಗ್ರಾಮದ ಹಿರಿಯರಿಗೆ ಬಾಲ್ಯವಿವಾಹಕ್ಕೊಳಗಾದ ಯುವತಿಯನ್ನು ಒಪ್ಪಿಸುವಂತೆ ಎಚ್ಚರಿಕೆ ನೀಡಿದ್ದಾರೆ.

Intro:ಹಣದ ಆಸೆಗಾಗಿ ಬಾಲ್ಯವಿವಾಹBody:

ಚಿಕ್ಕೋಡಿ :

ಕೊಪ್ಪಳ ತಾಲ್ಲೂಕಿನ ಗ್ರಾಮವೊಂದರ ಅಪ್ರಾಪ್ತೆಯನ್ನು ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಹುಲಗಬಾಳಿ ಗ್ರಾಮದ ಯುವಕನ ಜೊತೆ ವಿವಾಹ ಮಾಡಲು ಮನೆಯವರು ಒಪ್ಪಿರುತ್ತಾರೆ. ಆದರೆ, ಹುಡಗಿಗೆ ಮಾತ್ರ ಈ ಮದುವೆ ಒಪ್ಪಿಗೆ ಇಲ್ಲದೆ ಇರುವುದರಿಂದ ಹುಡಗಿ‌ ಕಾಕಾ ಕೊಪ್ಪಳದ ಮಕ್ಕಳ ಸಹಾಯವಾಣಿಗೆ ದೂರು ನೀಡಿದ್ದಾರೆ.

ಈ ವಿವಾಹ ಕೊಪ್ಪಳದಲ್ಲಿ ನಡೆಯಬೇಕಿತ್ತು. ಅಪ್ರಾಪ್ತೆಯನ್ನು ಮದುವೆ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿದ್ದಂತೆ ಬಾಲಕಿ ತಂದೆ ತಾಯಿಯನ್ನು ಕೊಪ್ಪಳ ಕಲ್ಯಾಣ ಸಮಿತಿ ಅವರು ಕರೆಸಿಕೊಂಡು ಕಾನೂನು ಮತ್ತು ಬಾಲ್ಯ ವಿವಾಹದಿಂದಾಗುವ ವ್ಯತಿರಿಕ್ತ ಪರಿಣಾಮದ ಬಗ್ಗೆ ತಿಳಿಹೇಳಿದ್ದರು. ಇದರಿಂದ ಎಚ್ಚೆತ್ತ ಬಾಲಕಿ ಮನೆಯವರು ಯಾವುದೇ ಕಾರಣಕ್ಕೂ ಬಾಲ್ಯ ವಿವಾಹ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆದು ಕೊಟ್ಟಿದ್ದರು.

ಇಷ್ಟೇಲ್ಲ ನಡೆದರೂ ಸಹಿತ ಬಾಲಕಿಯರ ಪಾಲಕರು ಹಣದ ಆಸೆಗೆ ಸುಮ್ಮನಿರದೆ, ಮೇ 20 ಕ್ಕೆ ಅಥಣಿ ತಾಲೂಕಿನ ಹುಲಗಬಾಳ ಗ್ರಾಮದಲ್ಲಿ ಒತ್ತಾಯದ ಮೇರೆಗೆ ಬಾಲ್ಯ ವಿವಾಹ ಮಾಡಲಾಗಿತ್ತು. ಈ ವಿವಾಹದ ಬಗ್ಗೆ ಮಾಹಿತಿ ನೀಡಿದ ಕೊಪ್ಪಳ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಯವರ ಮಾಹಿತಿ ಮೇರೆಗೆ ಬೆಳಗಾವಿ ಮಕ್ಕಳ ಕಲ್ಯಾಣ ಸಮಿತಿಯವರು ಹಾಗೂ ಅಥಣಿ ಅಧಿಕಾರಿಗಳೊಂದಿಗೆ ಮೇ.21 ಕ್ಕೆ ಅಧಿಕಾರಿಗಳು ಅಥಣಿಯ ಹುಲಗಬಾಳ ಗ್ರಾಮಕ್ಕೆ ಬೇಟಿ ನೀಡಿದ್ದರು.

ಆಗ ಅಧಿಕಾರಿಗಳಿಗೆ ಮನೆಯಲ್ಲಿ ಯಾರು ಇಲ್ಲ ಎಲ್ಲರೂ ದೇವರಿಗೆ ಹೋಗಿದ್ದಾರೆ ಎಂದು ಹೇಳಿದಾಗ ಅಧಿಕಾರಿಗಳು ಗ್ರಾಮದ ಹಿರಿಯರ ಸಮೂಕದಲ್ಲಿಯೇ ಬಾಲ್ಯಗೊಳಗಾದ ಹುಡಗಿ ಬಂದ ತಕ್ಷಣ ಬೆಳಗಾವಿ ಕಛೇರಿಗೆ ಕರೆದುಕೊಂಡು ಬರಬೇಕು. ಇಲ್ಲವಾದಲ್ಲಿ ನೇರವಾಗಿ ನೀವೆ ಹೊಣೆಗಾರರು ಎಂದಾಗ ಮೇ.28 ಕ್ಕೆ ವಿವಾಹಿತ ಹುಡುಗ ತುಕಾರಾಮ ಜಾಧವ ಹಾಗೂ ಅಪ್ರಾಪ್ತ ಬಾಲಕಿಯನ್ನು ಕರೆದುಕೊಂಡು ಬೆಳಗಾವಿಯ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದಾರೆ.

ಅಪ್ರಾಪ್ತ ಬಾಲಕಿಯನ್ನು ಅಧಿಕಾರಿಗಳು ರಕ್ಷಣೆ ಮಾಡಿದ್ದು ಹುಡುಗನ ಮನೆಯವರು ಹಾಗೂ ಇದಕ್ಕೆ ಸಂಭಂಧ ಪಟ್ಟ ವ್ಯಕ್ತಿಗಳು ಅಧಿಕಾರಿಗಳಿಂದ ತಪ್ಪಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾವುದೇ ಪೋಟೊ ಇಲ್ಲಾ

Conclusion:
ಸಂಜಯ ಕೌಲಗಿ‌
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.