ETV Bharat / state

ಚಿಕ್ಕೋಡಿ: ಪ್ರತ್ಯೇಕ ಕಡೆ ಎರಡು ಎಟಿಎಂಗಳಲ್ಲಿ ಲಕ್ಷಾಂತರ ರೂಪಾಯಿ ದರೋಡೆ, ಪ್ರಕರಣ ದಾಖಲು - ​ ETV Bharat Karnataka

ಚಿಕ್ಕೋಡಿ ತಾಲೂಕಿನಲ್ಲಿ ಸರಣಿ ಎಟಿಎಂ ಕಳ್ಳತನದಿಂದ ಸಾರ್ವಜನಿಕರು ಆತಂಕಗೊಂಡಿದ್ದಾರೆ.

ಎಟಿಎಂ ದರೋಡೆ
ಎಟಿಎಂ ದರೋಡೆ
author img

By ETV Bharat Karnataka Team

Published : Nov 9, 2023, 1:34 PM IST

ಚಿಕ್ಕೋಡಿ (ಬೆಳಗಾವಿ) : ತಡರಾತ್ರಿ ಚಿಕ್ಕೋಡಿ ತಾಲೂಕಿನ ಪ್ರತ್ಯೇಕ ಕಡೆ ಎರಡು ಎಟಿಎಂಗಳಲ್ಲಿ ಕಳ್ಳರು ಲಕ್ಷಾಂತರ ರೂಪಾಯಿ ಹಣವನ್ನು ದೋಚಿಕೊಂಡು ಹೋಗಿರುವ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಅಂಬೇಡ್ಕರ್ ನಗರದಲ್ಲಿರುವ ಎಸ್‌ಬಿಐ ಎಟಿಎಂ ಬುಧವಾರ ತಡರಾತ್ರಿ ಕಳ್ಳರು ಗ್ಯಾಸ್ ಕಟರ್ ಬಳಸಿಕೊಂಡು ಸರಿಸುಮಾರು 10 ಲಕ್ಷ ರೂಪಾಯಿಗೂ ಹೆಚ್ಚು ಹಣವನ್ನು ದರೋಡೆ ಮಾಡಿದ್ದಾರೆ.

ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳಿಂದ ಕೃತ್ಯ ನಡೆದಿದೆ. ಎಟಿಎಂನಲ್ಲಿ ನಿಖರವಾಗಿ ಎಷ್ಟು ಹಣ ಇತ್ತು ಎಂಬ ಬಗ್ಗೆ ಬ್ಯಾಂಕ್ ಸಿಬ್ಬಂದಿ ಮಾಹಿತಿ ಕಲೆಹಾಕುತ್ತಿದ್ದಾರೆ. ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇದೇ ಕಳ್ಳರ ಗ್ಯಾಂಗ್ ಎಸ್​ಬಿಐ ಎಟಿಎಂ ಕಳ್ಳತನ ಮಾಡಿದ್ದು, ಪಕ್ಕದಲ್ಲಿರುವ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಎಟಿಎಂ‌ನಲ್ಲಿ ಹಣ ಕದಿಯುವಾಗ ವಿಫಲವಾಗಿದೆ. ಈ ಬಗ್ಗೆ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂಕಲಿ ಗ್ರಾಮದಲ್ಲಿ ಎಟಿಎಂ ಕಳ್ಳತನ : ಮತ್ತೊಂದೆಡೆ ಬುಧವಾರ ತಡರಾತ್ರಿ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಆಕ್ಸಿಸ್ ಬ್ಯಾಂಕ್ ಎಟಿಎಂ ಕಳ್ಳತವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಚಿಕ್ಕೋಡಿ ಪಟ್ಟಣದ ಎಸ್​ಬಿಐ ಬ್ಯಾಂಕ್ ಎಟಿಎಂ ಕಳ್ಳತನ ಮಾಡಿದ ರೀತಿಯಲ್ಲೇ ಅಂಕಲಿ ಗ್ರಾಮದಲ್ಲಿ ಎಟಿಎಂನಲ್ಲಿ ಗ್ಯಾಸ್ ಕಟರ್​ ಬಳಸಿ ಕಳ್ಳತನ ಮಾಡಲಾಗಿದೆ. ಎರಡು ದಿನಗಳ ಹಿಂದೆ 17 ಲಕ್ಷ ರೂಪಾಯಿಯನ್ನು ಬ್ಯಾಂಕ್ ಸಿಬ್ಬಂದಿ ಎಟಿಎಂ ತುಂಬಿದರು. ಸ್ಥಳಕ್ಕೆ ಪೊಲೀಸರು ಹಾಗೂ, ಎಫ್‌ಎಸ್‌ಎಲ್ ಸಿಬ್ಬಂದಿ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಸರಣಿ ಕಳ್ಳತನದಿಂದ ಚಿಕ್ಕೋಡಿ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಇತ್ತೀಚೆನ ಪ್ರಕರಣ- ಎಟಿಎಂ ದರೋಡೆಗೆ ಯತ್ನ ಕಳ್ಳರ ಬಂಧನ : ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಜಿಗಣಿಯ ಶ್ರೀರಾಮಪುರ ಮುಖ್ಯರಸ್ತೆಯಲ್ಲಿರುವ ಆ್ಯಕ್ಸಿಸ್ ಬ್ಯಾಂಕ್​ ಎಟಿಎಂಗೆ ನುಗ್ಗಿ ಕಳ್ಳತನಕ್ಕೆ ತಂಡವೊಂದು ಯತ್ನಿಸಿತ್ತು. ಈ ಸಂಬಂಧ ಐವರನ್ನು ಜಿಗಣಿ ಇನ್​ಸ್ಪೆಕ್ಟರ್​ ಸುದರ್ಶನ್​ ತಂಡ ಸೆರೆ ಹಿಡಿದಿತ್ತು. ನಾಲ್ವರು ಅಸ್ಸೋಂ ಮೂಲದವರಾಗಿದ್ದು, ಓರ್ವ ಯುವಕ ಪಶ್ಚಿಮ ಬಂಗಾಳದವನು ಎಂದು ತಿಳಿದುಬಂದಿದೆ. ಬಾಬುಲ್ ನೋನಿಯಾ, ಮಹ್ಮದ್‌ ಆಸೀಪ್ ಉದ್ದಿವ್, ಹಗೆ ಬಿಸ್ವಾಸ್, ದಿಲ್ವಾ‌ ಹುಸೇನ್‌ ಅಸ್ಟರ್, ರೂಹುಲ್ ಅಮೀರ್ ಬಿನ್ ಶ್ಯಾಮ್ ಉದ್ದೀನ್ ಬಂಧಿತರು ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ‌ ಬಾಲದಂಡೆ ತಿಳಿಸಿದ್ದರು. ಅಕ್ಟೋಬರ್ 22ರ ಮುಂಜಾನೆ ಸಮಯದಲ್ಲಿ ಗ್ಯಾಸ್ ಕಟರ್ ಉಪಯೋಗಿಸಿ ಎಟಿಎಂ ಯಂತ್ರ ಭೇದಿಸಲು ಕಳ್ಳರು ಯತ್ನಿಸಿದ್ದರು.

ಇದನ್ನೂ ಓದಿ : ಪಕ್ಕದಲ್ಲೇ ಇದ್ದ ಪಿಕಪ್​ ವಾಹನ ಕದ್ದು, ಅದರಲ್ಲೇ ಎಟಿಎಂ ಯಂತ್ರ ಸಾಗಿಸಿದ ಕಳ್ಳರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.