ಚಿಕ್ಕೋಡಿ : ಪಾದಚಾರಿಗಳ ಮೇಲೆ ಬುಲೆರೊ ಕಾರು ಹರಿದು ಮೂವರು ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಗುಡಸ ಗ್ರಾಮದಲ್ಲಿ ನಡೆದಿದೆ. ಗುಡಸ ಗ್ರಾಮದ ಪ್ರೇಮಾ ರಾಜು ಬಂಗಾರಿ (38), ಜಯಶ್ರೀ ಯಲ್ಲಪ್ಪಾ ಮಾಲದಂಡಿ (40) ಹಾಗೂ ಸುಮಿತ್ರಾ ಭವಾನಿ (45) ಸಾವನ್ನಪ್ಪಿದ ಮಹಿಳೆಯರು. ಇನ್ನೂ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಾಹನ ಹಾಯಿಸಿ ಪರಾರಿಯಾಗಲು ಯತ್ನಿಸಿದ ಬುಲೆರೊ ವಾಹನದ ಚಾಲಕ, ಮೃತದೇಹ ವಾಹನಕ್ಕೆ ಸಿಲುಕಿದ್ದರೂ ಒಂದು ಕಿಲೋಮೀಟರ್‌ವರೆಗೂ ವಾಹನ ಚಲಾಯಿಸಿ ಪರಾರಿಯಾಗಲು ಯತ್ನಿಸಿದ್ದಾನೆ. ಸಿನಿಮೀಯ ರೀತಿ ವಾಹನ ಬೆನ್ನಟ್ಟಿ ಚಾಲಕನನ್ನ ಹುಕ್ಕೇರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.