ETV Bharat / state

ಕರ್ನಾಟಕದಲ್ಲಿನ ವೀರಶೈವ ಲಿಂಗಾಯತ ಎಂದು ಹೇಳುವವರೆಲ್ಲರೂ ಲಿಂಗಾಯತರೇ.. ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ - ಲಿಂಗಾಯತ ಧರ್ಮ ಹೋರಾಟದ ಸಂಸ್ಮರಣೋತ್ಸವ ಕಾರ್ಯಕ್ರಮ

ವೀರಶೈವ-ಲಿಂಗಾಯತ ವಿಷಯ ನಮಗೆ ಅಲ್ಲವೇ ಅಲ್ಲ. ಯಾಕೆಂದರೆ, ಕರ್ನಾಟಕದಲ್ಲಿ ಇರುವವರು ಎಲ್ಲರೂ ಲಿಂಗಾಯತರೇ.. ವೀರಶೈವ-ಲಿಂಗಾಯತರು ಎಂದು ಹೇಳುವ ಎಲ್ಲರೂ ಲಿಂಗಾಯತರೇ.. ಕರ್ನಾಟಕದಲ್ಲಿ ಯಾರೂ ವೀರಶೈವರು ಇಲ್ಲ. ಸುಮ್ಮನೇ ವೀರಶೈವ ಲಿಂಗಾಯತ ಎಂದು ಹೇಳಿಕೊಳ್ಳುತ್ತಾರೆ ಎಂದು ಶ್ರೀ ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ ಹೇಳಿದರು..

channabasavananda swamiji
ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ
author img

By

Published : Mar 20, 2022, 7:51 PM IST

ಬೆಳಗಾವಿ : ಕರ್ನಾಟಕದಲ್ಲಿ ಇರುವವರು ಎಲ್ಲರೂ ಕೂಡ ಲಿಂಗಾಯತರೇ.. ಕರ್ನಾಟಕದಲ್ಲಿ ಯಾರೂ ವೀರಶೈವರು ಇಲ್ಲ ಎಂದು ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ ಹೇಳಿದರು.

ಬೆಳಗಾವಿಯ ಗಾಂಧಿ ಭವನದಲ್ಲಿ ಲಿಂಗೈಕ್ಯ ಮಹಾಜಗದ್ಗುರು ಲಿಂಗಾನಂದ ಸ್ವಾಮೀಜಿ ಹಾಗೂ ಡಾ. ಮಾತೆ ಮಹಾದೇವಿ ತಾಯಿಯವರ ಸಂಸ್ಮರಣೆ ನಿಮಿತ್ತ ಲಿಂಗಾಯತ ಧರ್ಮ ಹೋರಾಟದ ಮಹಾದಂಡನಾಯಕರ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವೀರಶೈವರನ್ನೂ ಸೇರಿಸಿ ಲಿಂಗಾಯತ ಧರ್ಮದ 100 ಒಳಪಂಗಡಗಳಿಗೂ ಕೂಡ ಧಾರ್ಮಿಕ ಅಲ್ಪಸಂಖ್ಯಾತ ಸೌಲಭ್ಯ ಸಿಗಬೇಕು. ಹೀಗಾಗಿ, ಮತ್ತೊಮ್ಮೆ ಸಿಎಂ ಬೊಮ್ಮಾಯಿ ಅವರು ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ಸಿಗುವ ಸಂಬಂಧ ಕೇಂದ್ರಕ್ಕೆ ವರದಿ ಕಳುಹಿಸಬೇಕು ಎಂದು ಆಗ್ರಹಿಸಿದರು.

ಶ್ರೀ ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ ಮಾತನಾಡಿರುವುದು..

ನ್ಯಾ. ನಾಗಮೋಹನ್ ದಾಸ್ ಅವರ ವರದಿಯನ್ನು ಓದಲಾರದೆ ಕೇಂದ್ರದವರು ತಿರಸ್ಕರಿಸಿದ್ದಾರೆ. ಅದಕ್ಕೆ ಕೊಟ್ಟಿರುವ ಕಾರಣ ಕೂಡ ಸಮಂಜಸ ಆಗಿಲ್ಲ. ಆಗ ಕಾಂಗ್ರೆಸ್ ಸರ್ಕಾರ ಕಳುಹಿಸಿದ್ದಕ್ಕೆ ನೀವು ಮಾನ್ಯತೆ ಮಾಡಿರಲಿಕ್ಕಿಲ್ಲ. ಆದರೆ, ಈಗ ನಿಮ್ಮದೆ ಆದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಆಡಳಿತದಲ್ಲಿದೆ.

ಲಿಂಗಾಯತರೇ ಆಗಿರುವ ಬಸವರಾಜ್ ಬೊಮ್ಮಾಯಿ ಅವರು ಸಿಎಂ ಆಗಿದ್ದಾರೆ. ಈ ಬೆಳಗಾವಿಯ ಅಧಿವೇಶನದ ಮೂಲಕ ಬಸವರಾಜ್ ಬೊಮ್ಮಾಯಿ ಅವರು ಮತ್ತೊಮ್ಮೆ ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ಕೊಡುವಂತೆ ವರದಿಯನ್ನು ಕೇಂದ್ರಕ್ಕೆ ಕಳುಹಿಸಬೇಕು ಎಂದರು.

ವೀರಶೈವ-ಲಿಂಗಾಯತ ವಿಷಯ ನಮಗೆ ಅಲ್ಲವೇ ಅಲ್ಲ. ಯಾಕೆಂದರೆ, ಕರ್ನಾಟಕದಲ್ಲಿ ಇರುವವರು ಎಲ್ಲರೂ ಲಿಂಗಾಯತರೇ.. ವೀರಶೈವ ಲಿಂಗಾಯತರು ಎಂದು ಹೇಳುವ ಎಲ್ಲರೂ ಲಿಂಗಾಯತರೇ.. ಕರ್ನಾಟಕದಲ್ಲಿ ಯಾರೂ ವೀರಶೈವರು ಇಲ್ಲ. ಸುಮ್ಮನೇ ವೀರಶೈವ ಲಿಂಗಾಯತ ಎಂದು ಹೇಳಿಕೊಳ್ಳುತ್ತಾರೆ.

ಈಗ ಪಂಚಮಸಾಲಿ ಲಿಂಗಾಯತರಿದ್ದಾರೆ. ಬಣಜಿಗ, ಕುಂಬಾರ, ವೀರಶೈವ ಲಿಂಗಾಯತರಿದ್ದಾರೆ. ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸಿಕ್ಕಾಗ ವೀರಶೈವರಿಗೂ ಕೂಡ ಧಾರ್ಮಿಕ ಅಲ್ಪಸಂಖ್ಯಾತ ಸೌಲಭ್ಯಗಳು ಸಿಗುತ್ತವೆ. ವೀರಶೈವರಿಗೂ ಸೇರಿಸಿ ಲಿಂಗಾಯತ ಧರ್ಮದ 100 ಒಳಪಂಗಡಗಳಿಗೂ ಕೂಡ ಧಾರ್ಮಿಕ ಅಲ್ಪಸಂಖ್ಯಾತ ಸೌಲಭ್ಯ ಸಿಗಬೇಕು.

ವೀರಶೈವರನ್ನೂ ನಾವು ಬಿಡೋದಿಲ್ಲ. ಅವರು ಕೂಡ ಲಿಂಗಾಯತರೇ.. ಅವರಿಗೂ ಸವಲತ್ತುಗಳು ಸಿಗಬೇಕು. ಅವರು ಲಿಂಗಾಯತರೇ ಎಂದು ತಿಳಿದುಕೊಂಡು ಕರ್ನಾಟಕ ಸರ್ಕಾರಕ್ಕೆ ಒತ್ತಾಯಿಸುತ್ತೇವೆ ಎಂದರು.

ಓದಿ: ಸತ್ಯ ಸ್ವೀಕರಿಸೋದಕ್ಕೆ ಎದೆಗಾರಿಕೆ ಬೇಕು, ಕಾಂಗ್ರೆಸ್‌ನವರಿಗೆ ಅಂತಹ ಎದೆಗಾರಿಕೆ ಇಲ್ಲ: ಪ್ರತಾಪ್​​​ ಸಿಂಹ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.