ಬೆಳಗಾವಿ: ವಾರಣಾಸಿಯಲ್ಲಿನ ಜ್ಞಾನವ್ಯಾಪಿ ಮಸೀದಿ ಹಾಗೂ ಕಾಶಿ ವಿಶ್ವನಾಥ ದೇಗುಲ ಸಮುಚ್ಚಯ ವಿವಾದವನ್ನು ಸಮೀಕ್ಷೆ ನಡೆಸಲು ಉತ್ತರ ಪ್ರದೇಶದ ಹೈಕೋರ್ಟ್ ಪುರಾತತ್ವ ಇಲಾಖೆಗೆ ಸೂಚಿಸಿರುವುದನ್ನು ನಾವು ಸ್ವಾಗತಿಸುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪುರಾತತ್ವ ಇಲಾಖೆಗೆ ಉತ್ತರಪ್ರದೇಶ ಹೈಕೋರ್ಟ್ ಸಮೀಕ್ಷೆ ನಡೆಸಲು ಸೂಚಿಸಿರುವುದನ್ನು ನಾವು ಸ್ವಾಗತಿಸುತ್ತೇವೆ. ಔರಂಗಜೇಬನ ಕಾಲಘಟ್ಟದಲ್ಲಿ ಕಾಶಿ ವಿಶ್ವನಾಥ ಮಂದಿರದ ಸಮುಚ್ಚಯ ಒಡೆದು ಮಸೀದಿ ನಿರ್ಮಾಣ ಮಾಡಿದ್ದಾರೆ. ದೇವಾಲಯದ ಸಮುಚ್ಚಯ ಅವಶೇಷಗಳನ್ನೇ ಬಳಸಿಕೊಂಡು ಮಸೀದಿ ನಿರ್ಮಾಣ ಮಾಡಿದ್ದಾರೆಂಬ ಕೂಗು ಇದೆ.
ಪುರಾತತ್ವ ಇಲಾಖೆ ಪಾರದರ್ಶಕವಾಗಿ ಸಮೀಕ್ಷೆ ನಡೆಸಲಿ, ಸಮೀಕ್ಷೆ ವೇಳೆ ಪ್ರತಿಯೊಂದನ್ನು ವಿಡಿಯೋ ರೆಕಾರ್ಡ್ ಮಾಡಲಿ, ಅಲ್ಲಿ ದೇವಾಲಯ ಇತ್ತೋ ಇಲ್ವಾ, ದೇವಾಲಯ ಮೇಲೆ ಮಸೀದಿ ನಿರ್ಮಾಣ ಮಾಡಿದ್ದಾರಾ ಎಂಬ ಸತ್ಯವೂ ಗೊತ್ತಾಗಲಿದ್ದು, ದೇವಾಲಯ ಇಲ್ಲದ ಜಾಗದಲ್ಲಿ ಮಸೀದಿ ನಿರ್ಮಾಣ ಆಗಿದ್ದರೂ ಆ ಸತ್ಯವೂ ಅತಿ ಶೀಘ್ರದಲ್ಲಿ ಸತ್ಯ ತಿಳಿಯಲಿ ಎಂದರು.
ಇದನ್ನೂ ಓದಿ: ಕೋವಿಡ್ ಅಟ್ಟಹಾಸ: ತುಮಕೂರು ಕೋವಿಡ್ ಟೆಸ್ಟಿಂಗ್ ಸೆಂಟರ್ಗಳ ಕಾರ್ಯವೈಖರಿ ಹೇಗಿದೆ?
ಕಾಂಗ್ರೆಸ್ ಹರಕೆ ಕುರಿ ಹುಡುಕುತ್ತಿತ್ತು. ಹರಕೆ ಕುರಿ ಸಿಕ್ಕಿದೆ. ಹಳೆಯ ಸಿಟ್ಟು ತೀರಿಸಿಕೊಳ್ಳುವ ಯೋಚನೆ, ಯೋಜನೆ ಕಾಂಗ್ರೆಸ್‌ಗೆ ಇದ್ದ ಹಾಗೆ ಕಾಣುತ್ತದೆ. ಅದಕ್ಕಾಗಿ ಡಿಕೆಶಿ, ಸಿದ್ದರಾಮಯ್ಯ ಈ ವಿಷಯದಲ್ಲಿ ಒಟ್ಟಾಗಿದ್ದಾರೆ ಎಂದರು.