ETV Bharat / state

ರಾಜು ಕಾಗೆ, ಪೂಜಾರಿ ನಿಗೂಢ ನಡೆ... ಬಿಜೆಪಿ ಬಿಟ್ಟು ಹಾರಲು ಸಜ್ಜಾಗುತ್ತಿದೆಯಾ ಜೋಡಿಹಕ್ಕಿ?

ಬಿಜೆಪಿಯ ಇಬ್ಬರು ಪ್ರಮುಖರು ಒಂದೇ ಸಮಯದಲ್ಲಿ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಒಟ್ಟಾರೆಯಾಗಿ ಕಾಗವಾಡದಲ್ಲಿ ತಮಗೆ ಟಿಕೆಟ್ ಕೊಡದ ಕಮಲಕ್ಕೆ ಬೆಳಗಾವಿ ಜಿಲ್ಲೆಯಲ್ಲಿ ದೊಡ್ಡ ಹೊಡೆತ ಕೊಡಬೇಕು ಎನ್ನುವ ಛಲದಲ್ಲಿದ್ದಾರೆ ರಾಜು ಕಾಗೆ.

ರಾಜು ಕಾಗೆ, ಪೂಜಾರಿ
author img

By

Published : Nov 11, 2019, 12:05 PM IST

ಚಿಕ್ಕೋಡಿ: ಕಾಗವಾಡದ ರಾಜು ಕಾಗೆ ಜೊತೆಗೆ ಗೋಕಾಕ್​ನ ಅಶೋಕ ಪೂಜಾರಿ ಕಮಲದಿಂದ ಜಿಗಿಯಲು ಪ್ರಯತ್ನ ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆ ಈಗಾಗಲೇ ಎರಡು ಮತಕ್ಷೇತ್ರಗಳ ಮತದಾರರನ್ನು ಕಾಡುತ್ತಿದೆ.

ಸದ್ಯದ ಬೆಳವಣಿಗೆಯನ್ನು ಗಮನಿಸಿದರೆ ಇದು ಹೌದು ಎನ್ನುವಂತೆ ಕಾಣುತ್ತಿದೆ. ಕಾಗೆಯವರಂತೂ ಇಷ್ಟರಲ್ಲೇ ಕಾಂಗ್ರೆಸ್ ಸೇವರು ಸಾಧ್ಯತೆ ಇದೆ ಎಂದು ಬೆಂಬಲಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಉಪ ಚುನಾವಣೆಯಲ್ಲಿ ಬಿಜೆಪಿ ಅನರ್ಹ ಶಾಸಕ ಶ್ರೀಮಂತ ಪಾಟೀಲಗೆ ಟಿಕೆಟ್​ ನೀಡುತ್ತಿರುವ ಹಿನ್ನೆಲೆಯಲ್ಲಿ ರಾಜು ಕಾಗೆ ಅವರು ಸಿಎಂ ಹಾಗೂ ಬಿಜೆಪಿ ಪಕ್ಷದ ವಿರುದ್ಧ ಮುನಿಸಿಕೊಂಡಿದ್ದಾರೆ. ಅಲ್ಲದೇ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ನಿರಾಕರಿಸಿ ಚುನಾವಣೆಗೆ ಸ್ಪರ್ಧಿಸಲು ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಕಾಂಗ್ರೆಸ್​ ಮುಖಂಡ ಡಿಕೆಶಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಕಾಂಗ್ರೆಸ್​ನಿಂದ ರಾಜು ಕಾಗೆ ಅವರಿಗೆ ಟಿಕೆಟ್​ ನೀಡಲು ಚಿಂತನೆ ನಡೆದಿದೆ ಎನ್ನಲಾಗುತ್ತಿದೆ.

ಗೋಕಾಕ್​ ಬಿಜೆಪಿ ನಾಯಕ ಅಶೋಕ್​​ ಪೂಜಾರಿ ಕೂಡಾ ಡಿಕೆಶಿ ಅವರನ್ನು ಭೇಟಿ ಮಾಡಿದ್ದಾರೆ. ರಮೇಶ್​ ಜಾರಕಿಹೊಳಿ ಅನರ್ಹತೆಯಿಂದ ತೆರವಾಗಿರುವ ಗೋಕಾಕ್​ ಕ್ಷೇತ್ರದಲ್ಲಿ ಉಪ ಚುನಾವಣೆಗೆ ಸ್ಪರ್ಧಿಸಲು ಅಶೋಕ್​ ಪೂಜಾರಿ ಸಿದ್ಧತೆ ನಡೆಸುತ್ತಿದ್ದಾರೆ. ಇವರು ಕಳೆದ ಚುನಾವಣೆಯಲ್ಲಿ ರಮೇಶ್​ ಜಾರಕಿಹೊಳಿ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು. ಬಿಜೆಪಿ ಗೋಕಾಕ್​ನಲ್ಲಿ ರಮೇಶ್​ ಜಾರಕಿಹೊಳಿಗೆ ಟಿಕೆಟ್​ ನೀಡುತ್ತಿರುವ ಹಿನ್ನೆಲೆಯಲ್ಲಿ ಪೂಜಾರಿ ಕಾಂಗ್ರೆಸ್​ ಬಾಗಿಲು ಬಡಿಯಲು ಸಜ್ಜಾಗಿದ್ದಾರೆ ಎನ್ನುವ ಮಾತುಗಳು ಗೋಕಾಕ್​ ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ.

ಇವರಿಬ್ಬರೂ ಬಿಜೆಪಿ ನಾಯಕರಾಗಿದ್ದು, ಕಾಗವಾಡ, ಗೋಕಾಕ್​ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಬಂಡಾಯ ಏಳದಂತೆ ಸಿಎಂ ಯಡಿಯೂರಪ್ಪ ಇವಬ್ಬರಿಗೂ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ಕೊಟ್ಟಿದ್ದರೂ ಅದನ್ನು ಇವರು ನಿರಾಕರಿಸಿ ಹೋಗುತ್ತಿದ್ದಾರೆ.

ಉಪ ಚುನಾವಣೆಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ರಾಜು ಕಾಗೆ, ಅಶೋಕ‌ ಪೂಜಾರಿ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡುತ್ತಾ, ಇಲ್ಲವೇ ಬಂಡಾಯ ಕಹಳೆ ಉದುತ್ತಾರಾ ಎಂದು ಕಾದು ನೋಡಬೇಕಿದೆ.

Intro:ಕಾಗೆ, ಪೂಜಾರಿ ನಿಗೂಢ ನಡೆ. ಬಿಜೆಪಿಯಿಂದ ಹಾರಲು ಸಜ್ಜಾಗುತ್ತಿವೆಯಾ ಜೋಡಿ ಹಕ್ಕಿಗಳು?Body:

ಚಿಕ್ಕೋಡಿ :
ಸ್ಟೋರಿ

ಕಾಗವಾಡದ ರಾಜು ಕಾಗೆ ಜೊತೆಗೆ ಗೋಕಾಕದ ಅಶೋಕ ಪೂಜಾರಿ ಕಮಲದಿಂದ ಜಿಗಿಯಲು ಪ್ರಯತ್ನ ಮಾಡುತ್ತಿದ್ದಾರೆಯೇ? ಎಂಬುವುದು ಈಗಾಗಲೇ ಎರಡು ಮತಕ್ಷೇತ್ರಗಳ ಮತದಾರರಲ್ಲಿ ಮೂಡುತ್ತಿರುವ ಪ್ರಶ್ನೆಯಾಗಿದೆ.

ಸದ್ಯದ ಬೆಳವಣಿಗೆಯನ್ನು ಗಮನಿಸಿದರೆ ಇದು ಹೌದು ಎನ್ನಬಹುದಾಗಿದೆ. ಕಾಗೆಯವರಂತೂ ಇಷ್ಟರಲ್ಲೇ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎಂದು ಬೆಂಬಲಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಉಪ ಚುನಾವಣೆಯಲ್ಲಿ ಬಿಜೆಪಿ ಅನರ್ಹ ಶಾಸಕ ಶ್ರೀಮಂತ ಪಾಟೀಲಗೆ ಟಿಕೆಟ್​ ನೀಡುತ್ತಿರುವ ಹಿನ್ನೆಲೆಯಲ್ಲಿ ರಾಜು ಕಾಗೆ ಅವರು ಸಿಎಂ ಹಾಗೂ ಬಿಜೆಪಿ ಪಕ್ಷದ ವಿರುದ್ಧ ಮುಸಿನಿಕೊಂಡಿದ್ದಾರೆ. ಅಲ್ಲದೇ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ನಿರಾಕಿರಿಸಿ ಚುನಾವಣೆಗೆ ಸ್ಪರ್ಧಿಸಲು ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಕಾಂಗ್ರೆಸ್​ ಮುಖಂಡ ಡಿಕೆಶಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಕಾಂಗ್ರೆಸ್​ನಿಂದ ರಾಜು ಕಾಗೆ ಅವರಿಗೆ ಟಿಕೆಟ್​ ನೀಡಲು ಚಿಂತನೆ ನಡೆದಿದೆ ಎನ್ನಲಾಗುತ್ತಿದೆ.

2018 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಕಾಗೆ. ಇದೀಗ ಬದಲಾದ ರಾಜಕೀಯ ಬೆಳವಣಿಗೆಯಿಂದಾಗಿ ಕಾಗವಾಡ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. ಆದರೆ, ರಾಜು ಕಾಗೆಯವರಿಗೆ ಬಿಜೆಪಿ ಟಿಕೇಟ ಸಿಗದೆ ಇರುವ ಸಾದ್ಯತೆ ಇದ್ದು, ಬದಲಾಗಿ ಅನರ್ಹ ಶಾಸಕರಿಗೆ ಟಿಕೇಟ್ ಪಕ್ಕಾ ಆಗಿರುವ ಹಿನ್ನೆಲೆಯಲ್ಲಿ ಸಹಜವಾಗಿಯೇ ರಾಜು ಕಾಗೆ ಮುನಿಸಿಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಗೋಕಾಕ ಬಿಜೆಪಿ ನಾಯಕ ಗೋಕಾಕ್​ನ ಅಶೋಕ ಪೂಜಾರಿ ಅವರು ಕೂಡಾ ಡಿಕೆಶಿ ಭೇಟಿ ಮಾಡಿದ್ದಾರೆ. ರಮೇಶ ಜಾರಕಿಹೊಳಿ ಅನರ್ಹತೆಯಿಂದ ತೆರವಾಗಿರುವ ಗೋಕಾಕ್​ ಕ್ಷೇತ್ರದಲ್ಲಿ ಉಪ ಚುನಾವಣೆಗೆ ಸ್ಪರ್ಧಿಸಲು ಅಶೋಕ ಪೂಜಾರಿ ಸಿದ್ಧತೆ ನಡೆಸುತ್ತಿದ್ದಾರೆ. ಇವರು ಕಳೆದ ಚುನಾವಣೆಯಲ್ಲಿ ರಮೇಶ್​ ಜಾರಕಿಹೊಳಿ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು. ಬಿಜೆಪಿ ಗೋಕಾಕ ನಲ್ಲಿ ರಮೇಶ್​ ಜಾರಕಿಹೊಳಿಗೆ ಟಿಕೆಟ್​ ನೀಡುತ್ತಿರುವ ಹಿನ್ನೆಲೆಯಲ್ಲಿ ಪೂಜಾರಿ ಕಾಂಗ್ರೆಸ್​ ಬಾಗಿಲು ಬಡಿಯಲು ಸಜ್ಜಾಗಿದ್ದಾರೆ ಎನ್ನುವ ಮಾತುಗಳು ಗೋಕಾಕ ಕ್ಷೇತ್ರದಲ್ಲಿ ಕೇಳಿ ಬರುವಂತಹದ್ದು.

ಇವರಿಬ್ಬರೂ ಬಿಜೆಪಿ ನಾಯಕರಾಗಿದ್ದು, ಕಾಗವಾಡ, ಗೋಕಾಕ ಉಪಚುನಾವಣೆ ಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಬಂಡಾಯ ಏಳದಂತೆ ಸಿಎಂ ಯಡಿಯೂರಪ್ಪ ಇವಬ್ಬರಿಗೂ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ಒದಗಿಸಿಕೊಟ್ಟಿದ್ದರೂ ಅದನ್ನು ಇವರು ನಿರಾಕರಿಸಿ ಹೋಗುತ್ತಿರುವುದು ಸ್ಪಷ್ಟವಾಗಿದೆ.

ಬೆಳಗಾವಿಯ ಇಬ್ಬರು ಬಿಜೆಪಿ ಪ್ರಮುಖರು ಒಂದೇ ಸಮಯದಲ್ಲಿ ಕಾಂಗ್ರೆಸ್ ನಾಯಕ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದು ತೀವ್ರ ಕುತೂಹಲಕ್ಕೆ ಎಡೆ ಮಾಡಿದೆ. ಒಟ್ಟಾರೆಯಾಗಿ ಕಾಗವಾಡದಲ್ಲಿ ತಮ್ಮಗೆ ಟಿಕೆಟ್ ಕೊಡದ ಕಮಲಕ್ಕೆ ಬೆಳಗಾವಿ ಜಿಲ್ಲೆಯಲ್ಲಿ ದೊಡ್ಡ ಹೊಡೆತ ಕೊಡಬೇಕು ಎನ್ನುವ ಛಲದಲ್ಲಿದ್ದಾರೆ ರಾಜು ಕಾಗೆ.

ಉಪ ಚುನಾವಣೆಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು ರಾಜು ಕಾಗೆ, ಅಶೋಕ‌ ಪೂಜಾರಿ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೇಟ್ ನೀಡುತ್ತಾ, ಇಲ್ಲವೇ ಬಂಡಾಯ ಕಹಳೆ ಉದುತ್ತಾರಾ ಎಂದು ಕಾಯ್ದು ನೋಡಬೇಕಿದೆ.

ಪೋಟೋ 1 : ರಾಜು ಕಾಗೆ

ಪೋಟೋ 2 : ಅಶೋಕ ಪೂಜಾರಿ

Conclusion:ಸಂಜಯ ಕೌಲಗಿ
ಚಿಕ್ಕೋಡಿ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.