ETV Bharat / state

ಜೆಡಿಎಸ್​ನಿಂದ ಬಿಜೆಪಿ ಜಿಲ್ಲಾ ಪಂಚಾಯಿತಿ ಸದಸ್ಯ ಸ್ಪರ್ಧೆ: ಕುಮಟಳ್ಳಿ ಮಣಿಸಲು ಸವದಿ ಮಾಸ್ಟರ್ ಪ್ಲಾನ್? - ಅಥಣಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಹೇಳಿಕೆ

ಅಥಣಿ ಕ್ಷೇತ್ರದಲ್ಲಿ ಬಿಜೆಪಿಯ ಜಿಲ್ಲಾ ಪಂಚಾಯತ್ ಸದಸ್ಯ ಗುರು ದಾಶ್ಯಾಳ ಅವರಿಗೆ ಜೆಡಿಎಸ್ ಟಿಕೆಟ್ ನೀಡಿದೆ. ಇದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆ ಹುಟ್ಟಿಸಿದ್ದು, ಇದರ ಹಿಂದೆ ಹೆಚ್.ಡಿ. ಕುಮಾರಸ್ವಾಮಿ ಅವರ ರಾಜಕೀಯ ತಂತ್ರ ಅಡಗಿದೆ ಎನ್ನಲಾಗಿದೆ.

ಕುಮಟಳ್ಳಿ ಮಣಿಸಲು ಸವದಿ ಮಾಸ್ಟರ್ ಪ್ಲಾನ್..?
author img

By

Published : Nov 21, 2019, 10:23 AM IST

ಬೆಳಗಾವಿ: ಉಪ'ಸಮರ'ಕ್ಕೆ ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಭರ್ಜರಿ ಮತಬೇಟೆ ನಡೆಯುತ್ತಿದೆ. ಅಚ್ಚರಿ ಎಂದರೆ ಅಥಣಿ ಕ್ಷೇತ್ರದಲ್ಲಿ ಬಿಜೆಪಿಯ ಜಿಲ್ಲಾ ಪಂಚಾಯತ್ ಸದಸ್ಯ ಗುರು ದಾಶ್ಯಾಳ ಅವರಿಗೆ ಜೆಡಿಎಸ್ ಈ ಬಾರಿ ಟಿಕೆಟ್ ನೀಡಿದೆ. ಇದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಇದರ ಹಿಂದೆ ಹೆಚ್.ಡಿ. ಕುಮಾರಸ್ವಾಮಿ ಅವರ ರಾಜಕೀಯ ತಂತ್ರ ಅಡಗಿದೆ ಎನ್ನಲಾಗುತ್ತಿದೆ.

ಅಥಣಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಲ್ಲಿ ಐದು ಜನ ಪ್ರಮುಖ ಟಿಕೆಟ್ ಆಕಾಂಕ್ಷಿಗಳಿದ್ದರು. ಅವರೆಲ್ಲಾ ಜೆಡಿಎಸ್ ಪಕ್ಷಕ್ಕಾಗಿ ನಿರಂತರ ಗುರುತಿಸಿಕೊಂಡವರು. ಆದರೆ ಅವರನ್ನು ಬಿಟ್ಟು ಬಿಜೆಪಿ ಜಿಲ್ಲಾ ಪಂಚಾಯಿತಿ ಸದಸ್ಯನಿಗೆ ಟಿಕೆಟ್ ನೀಡಿರುವುದು ಅಚ್ಚರಿ ಮೂಡಿಸಿದೆ. ಅನರ್ಹ ಶಾಸಕರನ್ನು ಯಾವುದೇ ಕ್ಷೇತ್ರದಲ್ಲೂ ಗೆಲ್ಲೋಕೆ ನಾನು ಬಿಡಲ್ಲ ಎಂದ ಹೆಚ್​ಡಿಕೆ ಮಾತು ಅಥಣಿ ಕ್ಷೇತ್ರದಲ್ಲಿ ನಿಜವಾಗುತ್ತಾ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.

ಗುರು ದಾಶ್ಯಾಳ ಅವರು ಡಿಸಿಎಂ ಲಕ್ಷ್ಮಣ ಸವದಿಯವರಿಗೆ ಆಪ್ತರಾಗಿದ್ದು, ಅಥಣಿ ರಾಜಕೀಯ ವಲಯದಲ್ಲಿ ಕಾಣದ ಕೈಗಳು ರಾಜಕೀಯ ಲೆಕ್ಕಾಚಾರ ಬರೆಯುತ್ತಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಗುರು ದಾಶ್ಯಾಳ ವಿಷಯದಲ್ಲಿ ಡಿಸಿಎಂ ಲಕ್ಷ್ಮಣ ಸವದಿಯವರನ್ನು ಸಿಎಂ ಯಡಿಯೂರಪ್ಪ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗ್ತಿದೆ. ಇದರ ನಡುವೆ ಗುರು ದಾಶ್ಯಾಳ ನಾಮಪತ್ರ ಹಿಂಪಡೆಯುತ್ತಾರೆ ಎಂಬ ಮಾತುಗಳು ಕೇಳಿ ಬಂದಿವೆ. ಒಂದು ವೇಳೆ ಜೆಡಿಎಸ್​ನಿಂದ ಗುರು ದಾಶ್ಯಾಳ ಸ್ಪರ್ಧಿಸಿದ್ರೆ, ಮಹೇಶ್ ಕುಮಟಳ್ಳಿಗೆ ಎಲ್ಲೋ ಒಂದು ಕಡೆ ಹಿನ್ನಡೆಯಾಗುವುದು ಖಚಿತ ಅನ್ನೋದು ಸಾರ್ವಜನಿಕರ ಮಾತು.

Intro:ಬಿಜೆಪಿ ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಅಥಣಿ ಜೆಡಿಎಸ್ ಅಭ್ಯರ್ಥಿ ಗುರು ದಾಶ್ಯಾಳ ನಿಗೂಢ ನಡೆ,Body:ಅಥಣಿ ವರದಿ:
ಬಿಜೆಪಿ ಹಾಲಿ ಜಿಲ್ಲಾ ಪಂಚಾಯತ್ ಸದಸ್ಯ ಗುರು ದಾಶ್ಯಾಳ ಅವರಿಗೆ ಅಥಣಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ನೀಡಲಾಗಿದೆ, ಇದರ ಹಿಂದೆ ಎಚ್ ಡಿ ಕುಮಾರಸ್ವಾಮಿ ಅವರ ರಾಜಕೀಯ ತಂತ್ರ ಎದ್ದು ಕಾಣುತ್ತಿದೆ. ಏನೋ ಅನರ್ಹ ಶಾಸಕರು ಯಾವುದೇ ಕ್ಷೇತ್ರದಲ್ಲಿ ಗೆಲ್ಲೋಕೆ ನಾನು ಬಿಡಲ್ಲ ಎಂಬ ಪಣತೊಟ್ಟಿದ್ದಾರೆ ಅಥಣಿ ಕ್ಷೇತ್ರದಲ್ಲಿ ಅದು ನಿಜವಾಗಿದೆ, ಎಂಬುದನ್ನು ಇಲ್ಲಿ ಹೇಳಬಹುದು.

ಅಥಣಿ ಜೆಡಿಎಸ್ ಪಕ್ಷದಲ್ಲಿ ಐದು ಜನ ಪ್ರಮುಖ ಟಿಕೆಟ್ ಆಕಾಂಕ್ಷಿಗಳು ಇದ್ದರೂ ಅವರು ಜೆಡಿಎಸ್ ಪಕ್ಷಕ್ಕಾಗಿ ನಿರಂತರ ಪಕ್ಷದಲ್ಲಿ ಗುರುತಿಸಿಕೊಂಡವರು, ಅವರನ್ನು ಬಿಟ್ಟು ಬಿಜೆಪಿ ಜಿಲ್ಲಾ ಪಂಚಾಯಿತಿ ಸದಸ್ಯ ಟಿಕೆಟ್ ನೀಡುವುದಕ್ಕೆ ಅಚ್ಚರಿಯಾಗಿದೆ, ಜೆಡಿಎಸ್ ನಿಂದ ಏನಾದರೂ ಗುರು ದಾಶ್ಯಾಳ ಸ್ಪರ್ಧೆ ಮಾಡಿದ್ದೆ ಆದರೆ ಮಹೇಶ್ ಕುಮಟ್ಟಳ್ಳಿ ಎಲ್ಲೋ ಒಂದು ಕಡೆ ಹಿನ್ನಡೆಯಾಗುವುದು ಖಚಿತ ಅಂತ ಸಾರ್ವಜನಿಕರು ಹೇಳುತ್ತಿದ್ದಾರೆ

ಗುರು ದಾಶ್ಯಾಳ ಇವರು ಕೂಡ ಡಿಸಿಎಂ ಲಕ್ಷ್ಮಣ್ ಸವದಿ ಆಪ್ತ, ಅಥಣಿ ರಾಜಕೀಯವಲಯದಲ್ಲಿ ಕಾಣದ ಎರಡು ಕೈಗಳು ರಾಜಕೀಯ ಲೆಕ್ಕಾಚಾರ ಬರೆಯುತ್ತಿದ್ದಾರೆ ಎಂದು ಕೇಳಿ ಬರುತ್ತಿದೆ,

ಗುರು ದಾಶ್ಯಾಳ ವಿಷಯದಲ್ಲಿ, ಒಂದು ಕಡೆ ಡಿಸಿಎಂ ಲಕ್ಷ್ಮಣ ಸವದಿಗೆ ಬಿಎಸ್ ಯಡಿಯೂರಪ್ಪನವರು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಮಾತುಗಳು ಕೇಳಿಬರುತ್ತವೆ. ಒಂದು ಕಡೆ ಗುರು ದಾಶ್ಯಾಳ ನಾಮಪತ್ರ ಹಿಂದೆ ಪಡೆಯುತ್ತಾರೆ ಎಂಬುದು ಕೇಳಿ ಬರುತ್ತಿದೆ, ಏನೇ ಆಗಲಿ ಇವತ್ತು ಸಂಜೆವರೆಗೆ ಯಾರ್ಯಾರು ನಾಮಪತ್ರ ಹಿಂಪಡೆದಿದ್ದಾರೆ ಎಂಬುದು ಕಾದು ನೋಡಬೇಕಾಗಿದೆ.
ಈ ಟಿವಿ ಭಾರತ ಅಥಣಿConclusion: ಅಥಣಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.