ETV Bharat / state

ಜಿಂದಾಲ್ ವಿವಾದ ಬಗ್ಗೆ ಬಿಜೆಪಿ ಬಹಿರಂಗ ಚರ್ಚೆಗೆ ಬರಲಿ: ಸತೀಶ್ ಜಾರಕಿಹೊಳಿ ಸವಾಲ್

ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭಗಳಲ್ಲಿ ಜಿಂದಾಲ್‌ ಕಂಪನಿಗೆ ಭೂಮಿಯನ್ನು ಲೀಸ್ ಮತ್ತು ಸೇಲ್ ಮಾಡುವ ಒಪ್ಪಂದ ಮಾಡಿಕೊಂಡಿತ್ತು. ಅದರಂತೆ ಸರ್ಕಾರ ಭೂಮಿ ನೀಡಲು ಮುಂದಾಗಿದೆ. ಬಿಜೆಪಿ ನಾಯಕರು ಬಹಿರಂಗ ಚರ್ಚೆಗೆ ಬಂದರೆ ಸಮರ್ಪಕ ಉತ್ತರ ನೀಡುತ್ತೇವೆ ಎಂದಿದ್ದಾರೆ.

ಜಿಂದಾಲ್ ಕುರಿತು ಬಿಜೆಪಿ ಬಹಿರಂಗ ಚರ್ಚೆಗೆ ಬರಲಿ
author img

By

Published : Jun 16, 2019, 6:11 PM IST

ಬೆಳಗಾವಿ: ಜಿಂದಾಲ್ ಕಂಪನಿಗೆ ಭೂಮಿ ನೀಡುವ ಕುರಿತು ಬಿಜೆಪಿ ಮಾಡುತ್ತಿರುವ ಆರೋಪಕ್ಕೆ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭಗಳಲ್ಲಿ ಜಿಂದಾಲ್‌ ಕಂಪನಿಗೆ ಭೂಮಿಯನ್ನು ಲೀಸ್ ಮತ್ತು ಸೇಲ್ ಮಾಡುವ ಒಪ್ಪಂದ ಮಾಡಿಕೊಂಡಿತ್ತು. ಅದರಂತೆ ಸರ್ಕಾರ ಕಂಪನಿಗೆ ಭೂಮಿ ನೀಡಲು ಮುಂದಾಗಿದೆ. ಬಿಜೆಪಿಯ ನಾಯಕರು ಬಹಿರಂಗ ಚರ್ಚೆಗೆ ಬಂದರೆ ಸಮರ್ಪಕ ಉತ್ತರ ನೀಡುತ್ತೇವೆ ಎಂದರು. ಬಿಜೆಪಿ ಕೇವಲ ರಾಜಕೀಯಕ್ಕಾಗಿ ಆರೋಪ ಮಾಡುತ್ತಿದ್ದು, ಸರ್ಕಾರ ಒಡಂಬಡಿಕೆ ಕುರಿತು ಭೂಮಿ ನೀಡಲು ಮುಂದಾಗಿದೆ.

ಸಚಿವ ಸತೀಶ್ ಜಾರಕಿಹೊಳಿ

ರಾಜಕೀಯ ಹೊರಗಿಟ್ಟು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ. ಜಿಲ್ಲಾ ಪಂಚಾಯತಿ ಅಧ್ಯಕ್ಷರ ಮೇಲೆ ಕ್ರಮದ ಭರವಸೆ, ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತಿ ಅಧ್ಯಕ್ಷರು ತಲೆಮರೆಸಿಕೊಂಡು ಕಚೇರಿಯ ಕೆಲಸಕ್ಕೆ ಹಾಜರಿಯಾಗಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ ಅವರು, ಅಧ್ಯಕ್ಷರ ಮೇಲಿರುವ ಆರೋಪ ನನ್ನ ಗಮನಕ್ಕೆ ಬಂದಿದ್ದು, ಜಿಲ್ಲಾ ಪಂಚಾಯತಿ ಸದಸ್ಯರ ಸಭೆ ಕರೆದು ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಐಎಂಎ ತಪ್ಪಿತಸ್ಥರ ವಿರುದ್ಧ ಕ್ರಮ:

ಬಹುಕೋಟಿ ಹಣ ವಂಚನೆ ಆರೋಪ ಕಂಡು ಬಂದಿರುವ ಐಎಂಎ ಜುವೆಲ್ಸ್‌ ಮೇಲೆ ಸರ್ಕಾರ ಸೂಕ್ತ ರೀತಿಯ ಕ್ರಮ ಕೈಗೊಳ್ಳುತ್ತದೆ. ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸರ್ಕಾರ ಹಿಂಜರಿಯುವುದಿಲ್ಲ. ಕೆಲವು ಸಚಿವರ ಮೇಲೆ ಆರೋಪ ಕೇಳಿಬಂದಿದ್ದು ಸೂಕ್ತ ರೀತಿಯ ಕ್ರಮದ ಭರವಸೆ ನೀಡಿದ್ದಾರೆ.

Intro:ಜಿಂದಾಲ್ ಕುರಿತು ಬಿಜೆಪಿ ಬಹಿರಂಗ ಚರ್ಚೆಗೆ ಬರಲಿ : ಸಚಿವ ಸತೀಶ್ ಜಾರಕಿಹೊಳಿ ಸವಾಲ್

ಬೆಳಗಾವಿ : ಜಿಂದಲ್ ಕಂಪನಿಗೆ ಭೂಮಿ ನೀಡುವ ಕುರಿತು ಬಿಜೆಪಿ ಮಾಡಿತ್ತಿರುವ ಆರೋಪಕ್ಕೆ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದಾರೆ.

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು. ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭಗಳಲ್ಲಿ ಜಿಂದಾಲ್‌ ಕಂಪನಿಗೆ ಭೂಮಿಯನ್ನು ಲೀಸ್ ಮತ್ತು ಸೇಲ್ ಮಾಡುವ ಒಪ್ಪಂದ ಮಾಡಿಕೊಂಡಿತ್ತು ಅದರಂತೆ ಸರ್ಕಾರ ಕಂಪನಿಗೆ ಭೂಮಿ ನೀಡಲು ಮುಂದಾಗಿದ್ದು, ಬಿಜೆಪಿಯ ನಾಯಕರು ಬಹಿರಂಗ ಚರ್ಚೆಗೆ ಬಂದರೆ ಸಮರ್ಪಕ ಉತ್ತರ ನೀಡುತ್ತೇವೆ ಎಂದಿದ್ದಾರೆ.

Body:ಬಿಜೆಪಿ ಕೇವಲ ರಜಕೀಯಕ್ಕಾಗಿ ಆರೋಪ ಮಾಡುತ್ತಿದ್ದು ಸರ್ಕಾರ ಒಡಂಬಡಿಕೆ ಕುರಿತು ಭೂಮಿ ನೀಡಲು ಮುಂದಾಗಿದೆ. ರಾಜಕೀಯ ಹೊರಗಿಟ್ಟು ಈ ಕ್ರಮ ಕೈಗೊಳ್ಳಲಾದಿದೆ ಎಂದು ಸಚಿವ ಜಾರಕಿಹೊಳಿ ತಿರುಗೆಟು ನೀಡಿದ್ದಾರೆ.

ಜಿಲ್ಲಾ ಪಂಚಾಯತಿ ಅಧ್ಯಕ್ಷರ ಮೇಲೆ ಕ್ರಮದ ಬರವಸೆ : ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತಿ ಅಧ್ಯಕ್ಷರು ತಲೆಮರಿಸಿಕೊಂಡು ಕಚೇರಿಯ ಕೆಲಸಕ್ಕೆ ಹಾಜರಿಯಾಗಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವರು. ಅಧ್ಯಕ್ಷರ ಮೇಲೆ ಆರೋಪ ನನ್ನ ಗಮನಕ್ಕೆ ಬಂದಿದ್ದು ಜಿಲ್ಲಾ ಪಂಚಾಯತಿ ಸದಸ್ಯರ ಸಭೆ ಕರೆದು ಈ ಬಗ್ಗೆ ನಿರ್ಮಾಣ ಕೈಗೊಳ್ಳಲಾಗುವುದು ಎಂದಿದ್ದಾರೆ.

Conclusion:ಐಎಂಎ ಆರೋಪಿಗಳಿಗೆ ಸರ್ಕಾರ ಶಿಕ್ಷೆ : ಬಹುಕೋಟಿ ಹಣ ವಂಚನೆ ಆರೋಪ ಕಂಡುಬಂದಿರುವ ಐಎಂಎ ಮೇಲೆ ಸರ್ಕಾರ ಸೂಕ್ತ ರೀತಿಯ ಕ್ರಮ ಕೈಗೊಳ್ಳುತ್ತದೆ. ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸರ್ಕಾರ ಹಿಂಜರಿಯುದಿಲ್ಲ ಎಂದರು. ಸರ್ಕಾರದ ಸಚಿವರ ಮೇಲೆ ಐಎಂಎ ಆರೋಪ ಕೆಳಿಬಂದಿದ್ದು ಸೂಕ್ತ ರೀತಿಯ ಕ್ರಮದ ಬರವಸೆ ನೀಡಿದ್ದಾರೆ.

ವಿನಾಯಕ ಮಠಪತಿ
ಬೆಳಗಾವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.