ETV Bharat / state

ಬೆಳಗಾವಿಯ ಮೂವರು ಲಿಂಗಾಯತ ನಾಯಕರ ಅಗಲಿಕೆ: ಚುನಾವಣೆ ವರ್ಷದಲ್ಲೇ ಬಿಜೆಪಿಗೆ ಆಘಾತ - ಬೆಳಗಾವಿ ಜಿಲ್ಲೆಯ ಪ್ರಬಲ ನಾಯಕರ ನಿಧನ

ರಾಜ್ಯ ಬಿಜೆಪಿ ಪಾಲಿಗೆ ನಾಯಕರ ಅಗಲಿಕೆಯ ನೋವು ಮಾಸುತ್ತಿಲ್ಲ. ಪ್ರಬಲ ಲಿಂಗಾಯತ ನಾಯಕರ ಅಗಲಿಕೆ ಬೆಳಗಾವಿಯಲ್ಲಿ ಬಿಜೆಪಿಗೆ ಬಲವಾದ ಪೆಟ್ಟು ನೀಡಿದ್ದು, ರಾಜ್ಯ ಬಿಜೆಪಿಗೂ ತುಂಬಲಾರದ ನಷ್ಟವುಂಟು ಮಾಡಿದೆ‌.

ಬೆಳಗಾವಿಯ ಮೂವರು ಲಿಂಗಾಯತ ನಾಯಕರ ಅಗಲಿಕೆ
ಬೆಳಗಾವಿಯ ಮೂವರು ಲಿಂಗಾಯತ ನಾಯಕರ ಅಗಲಿಕೆ
author img

By

Published : Oct 23, 2022, 6:25 PM IST

ಬೆಳಗಾವಿ: 2023ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಗೆ ಕಮಲ ಪಾಳೆಯ ಸಜ್ಜುಗೊಳ್ಳುತ್ತಿದೆ. ಈ ಮಧ್ಯೆ ಉನ್ನತ ಸ್ಥಾನದಲ್ಲಿದ್ದಿರುವ ಪಕ್ಷದ ಹಿರಿಯ ನಾಯಕರ ಅಗಲಿಕೆ ಬಿಜೆಪಿಯ ಆತಂಕಕ್ಕೆ ಕಾರಣವಾಗಿದೆ. ಅದರಲ್ಲೂ ಬೆಂಗಳೂರು ‌ನಂತರ ಅತಿಹೆಚ್ಚು ವಿಧಾನಸಭೆ ಕ್ಷೇತ್ರ ಹೊಂದಿರುವ ಬೆಳಗಾವಿ ಜಿಲ್ಲೆಯ ಪ್ರಬಲ ನಾಯಕರ ನಿಧನ ಪ್ರಮುಖವಾಗಿ ಬಿಜೆಪಿಗೆ ತುಂಬಲಾರದ ನಷ್ಟವುಂಟು ಮಾಡಿದೆ‌.

ಅತಿದೊಡ್ಡ ಜಿಲ್ಲೆಯಾಗಿದ್ದರಿಂದ ಬೆಳಗಾವಿಗೆ ಎಲ್ಲ ರಾಜಕೀಯ ಪಕ್ಷಗಳು ಮಹತ್ವದ ಆದ್ಯತೆ ನೀಡುತ್ತವೆ. ಒಂದೂವರೆ ವರ್ಷದ ಹಿಂದೆ ರೈಲ್ವೆ ಇಲಾಖೆ ರಾಜ್ಯ ಸಚಿವರನ್ನು ಕಳೆದುಕೊಂಡಿದ್ದ ಬಿಜೆಪಿ, ಒಂದೂವರೆ ತಿಂಗಳ ಹಿಂದಷ್ಟೇ ರಾಜ್ಯದ ಹಿರಿಯ ನಾಯಕ ಹಾಗೂ ಅರಣ್ಯ ಸಚಿವ ಉಮೇಶ ಕತ್ತಿ ಅವರನ್ನು ಕಳೆದುಕೊಂಡಿತ್ತು. ಈ ಘಟನೆ ಮಾಸುವ ಮುನ್ನವೇ ಇದೀಗ ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ ಅವರ ಅಕಾಲಿಕ ನಿಧನ ಪಕ್ಷಕ್ಕೆ ತುಂಬಲಾರದ ನಷ್ಟ ಉಂಟುಮಾಡಿದೆ. ಚುನಾವಣೆ ವರ್ಷದಲ್ಲೇ ಬೆಳಗಾವಿ ಜಿಲ್ಲೆಯ ಪ್ರಭಾವಿ ನಾಯಕರನ್ನು ಕಳೆದುಕೊಂಡಿರುವ ಬಿಜೆಪಿಗೆ ದೊಡ್ಡ ಆಘಾತ ಉಂಟಾಗಿದೆ.

ಅಂಗಡಿ ಸಾವು ಇಡೀ ರಾಜ್ಯಕ್ಕೆ ನಷ್ಟ! ಸಿಮೆಂಟ್ ಉದ್ಯಮಿ ಆಗಿದ್ದ ಸುರೇಶ ಅಂಗಡಿ: ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ಮುತ್ಸದ್ಧಿ ರಾಜಕಾರಣಿ. ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ನಾಲ್ಕು ಸಲ ಸಂಸದರಾಗಿದ್ದ ಸುರೇಶ ಅಂಗಡಿ ಅವರು ನರೇಂದ್ರ ಮೋದಿ ಸರ್ಕಾರದಲ್ಲಿ ರೈಲ್ವೆ ಇಲಾಖೆ ರಾಜ್ಯ ಸಚಿವರಾಗಿದ್ದರು. ಅಧಿಕಾರ ವಹಿಸಿಕೊಳ್ಳುತ್ತಿದ್ದನಂತೆ ಈ ಭಾಗದಲ್ಲಿ ನೆನೆಗುದಿಗೆ ಬಿದ್ದಿದ್ದ ರೈಲ್ವೆ ಯೋಜನೆಗಳಿಗೆ ಕಾಯಕಲ್ಪ ಕಲ್ಪಿಸಿದ್ದರು. ಹಲವು ಭಾಗಗಳಲ್ಲಿ ಜೋಡಿ ಮಾರ್ಗ ನಿರ್ಮಾಣಕ್ಕೆ ಚಾಲನೆ ನೀಡಿದ್ರೆ, ಹುಬ್ಬಳ್ಳಿ, ಬೆಳಗಾವಿ ಸೇರಿ ಕೆಲ ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಿದ್ದರು. ತಮ್ಮ ಕಾರ್ಯವೈಖರಿ ಮ‌ೂಲಕ ಸುರೇಶ ಅಂಗಡಿ ರಾಜ್ಯದ ಜನ ಅಷ್ಟೇ ಅಲ್ಲ, ಕೇಂದ್ರ ನಾಯಕರ ಗಮನವನ್ನು ಸಹ ಸೆಳೆದಿದ್ದರು. ಬೆಳಗಾವಿ-ಬೆಂಗಳೂರು ವಿಶೇಷ ಹೊಸ ಎಕ್ಸ್​ಪ್ರೆಸ್ ರೈಲು ಸೇವೆ ಆರಂಭಿಸಿ ಈ ಭಾಗದ ಜನರ ಮನಸ್ಸನ್ನು ಗೆದ್ದಿದ್ದರು. ತಮ್ಮ ಕೆಲಸದ ಮೂಲಕ ಬಿಜೆಪಿ ವರ್ಚಸ್ಸು ಹೆಚ್ಚಿಸುವ ಜೊತೆಗೆ ಸುರೇಶ ಅಂಗಡಿ ಬೆಳಗಾವಿಗರ ಮನಸ್ಸನ್ನು ಸಹ ಗೆದ್ದಿದ್ದರು. ಕೋವಿಡ್‌ ಸೋಂಕಿಗೆ ತುತ್ತಾಗಿದ್ದ ಸುರೇಶ ಅಂಗಡಿ ಬಳಿಕ ಚಿಕಿತ್ಸೆ ಫಲಿಸದೇ ದೆಹಲಿಯ ಏಮ್ಸ್‌ನಲ್ಲಿ ಮೃತರಾಗಿದ್ದರು.

ರೈತರ ಹೃದಯ ಗೆದ್ದಿದ್ದ ಕತ್ತಿ: ರಾಜ್ಯ ವಿಧಾನಸಭೆಯಲ್ಲಿ ಅತಿಹೆಚ್ಚು ಸಲ ಗೆದ್ದ ಶಾಸಕ ಎಂಬ ಕೀರ್ತಿಗೆ ಪಾತ್ರರಾದವರು ಉಮೇಶ ಕತ್ತಿ. ಒಂಬತ್ತು ಚುನಾವಣೆಗಳನ್ನು ಎದುರಿಸಿದ್ದ ಉಮೇಶ ಕತ್ತಿ ಎಂಟು ಸಲ ಗೆದ್ದಿದ್ದರು. ಅಲ್ಲದೇ ಬೊಮ್ಮಾಯಿ ಸರ್ಕಾರದಲ್ಲಿ ಅರಣ್ಯ ಮತ್ತು ಆಹಾರ ಸಚಿವರಾಗಿದ್ದರು. ಈ ಮೊದಲು ಬಿಎಸ್‌ವೈ ಸರ್ಕಾರದಲ್ಲಿ ಕೃಷಿ ಸಚಿವರಾಗಿದ್ದ ಉಮೇಶ ಕತ್ತಿ ಚೊಚ್ಚಲ ಕೃಷಿ ಬಜೆಟ್ ಮಂಡಿಸಿ ಹೊಸ ಇತಿಹಾಸ ನಿರ್ಮಿಸಿದ್ದರು.

ಸಿಎಂ ಬೊಮ್ಮಾಯಿ ಸಂಪುಟದಲ್ಲಿ ಆಹಾರ ಸಚಿವರಾಗಿದ್ದ ಅವರು ಅನ್ನಭಾಗ್ಯ ಯೋಜನೆಯಲ್ಲಿ ಮಹತ್ವದ ಬದಲಾವಣೆ ತಂದಿದ್ದರು. ಅಕ್ಕಿ ಜೊತೆಗೆ ಜೋಳ ಹಾಗೂ ರಾಗಿ ವಿತರಣೆ ಮಾಡಿದ್ದರು. ಉತ್ತರ ಕರ್ನಾಟಕ ಭಾಗದ ರೈತರಿಂದ ಜೋಳ ಖರೀದಿಸಿ ಅಕ್ಕಿ ಜೊತೆಗೆ ಜೋಳ ಹಂಚಿಕೆಗೆ ಸೂಚಿಸಿದ್ದರು. ದಕ್ಷಿಣ ಕರ್ನಾಟಕ ಭಾಗದ ರೈತರಿಂದ ರಾಗಿ ಖರೀದಿಸಿ ಆ ಭಾಗದ ಪಡಿತರದಾರರಿಗೆ ಅಕ್ಕಿ ಜೊತೆಗೆ ಜೋಳ ವಿತರಣೆಗೆ ಕ್ರಮ ಕೈಗೊಂಡಿದ್ದರು. ಆ ಮೂಲಕ ರಾಜ್ಯದ ಜೋಳ-ರಾಗಿ ಬೆಳೆಯುವ ರೈತರಿಗೆ ನೆರವಾಗಿದ್ದರು. ಅಲ್ಲದೇ ಹುಕ್ಕೇರಿ ತಾಲೂಕಿನ ಹಿಡಕಲ್ ಗ್ರಾಮದಲ್ಲಿ 650 ಕೋಟಿ ರೂಪಾಯಿ ವೆಚ್ಚದ ಬೃಂದಾವನ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಈ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ಕೊಡುವ ಮೂಲಕ ಬಿಜೆಪಿ ಸರ್ಕಾರದ ವರ್ಚಸ್ಸು ವೃದ್ಧಿಗೆ ಪ್ರಮುಖ ಪಾತ್ರ ವಹಿಸಿದ್ದರು. ಸೆ. 16 ರಂದು ಉಮೇಶ್​ ಕತ್ತಿ ತೀವ್ರ ಹೃದಯಾಘಾತದಿಂದ ಮೃತರಾಗಿದ್ದರು.

ಸೋಲಿಲ್ಲದ ಸರದಾರ ಮಾಮನಿ: ಲಿಂಗಾಯತ ‌ಪಂಚಮಸಾಲಿ ಸಮಾಜದ ಆನಂದ ಮಾಮನಿ ಸವದತ್ತಿ ಕ್ಷೇತ್ರದಲ್ಲಿ ಬಿಜೆಪಿ ಹೆಮ್ಮರವಾಗಿ ಬೆಳೆಯುವಂತೆ ಮಾಡಿದ್ದರು. ಸವದತ್ತಿ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್.ವಿ. ಕೌಜಲಗಿ, ಎಸ್.ಬಿ. ಪದಕಿ, ವೆಂಕರಡ್ಡಿ ಎಸ್.ತಿಮ್ಮರಡ್ಡಿ, ಕೆ.ಎಚ್. ವೀರಭದ್ರಪ್ಪ, ಜಿ.ಕೆ. ಟಕ್ಕೇದ, ಆರ್.ವಿ. ಪಾಟೀಲ, ಸಿ.ಎಂ. ಮಾಮನಿ, ಎಸ್.ಎಸ್. ಕೌಜಲಗಿ, ವಿಶ್ವನಾಥ ಕೆ. ಮಾಮನಿ ಇವರೆಲ್ಲ ಆಯ್ಕೆಯಾದ ಘಟಾನುಘಟಿ ಶಾಸಕರು. ಒಬ್ಬರೇ ಸತತ ಎರಡು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿ ಜಯ ಗಳಿಸಿದವರಿರಲಿಲ್ಲ. ಆದ್ರೆ ಈ ಕ್ಷೇತ್ರದಲ್ಲಿ ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ ಐತಿಹಾಸಿಕ ಗೆಲವು ಸಾಧಿಸಿದ್ದರು ಆನಂದ ಮಾಮನಿ.

ಶಾಸಕರಾಗಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ, ಯಲ್ಲಮ್ಮ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಪ್ರಸಕ್ತ ವಿಧಾನಸಭೆ ಉಪಸಭಾಧ್ಯಕ್ಷರ ಹುದ್ದೆ ನಿಭಾಯಿಸಿ ಜನಪ್ರಿಯ ನಾಯಕಾರಗಿದ್ದರು. ಉತ್ತರ ಕರ್ನಾಟಕದ ಶ್ರದ್ಧಾಕೇಂದ್ರ ರೇಣುಕಾದೇವಿ ಮಂದಿರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದರು. ಲೀವರ್ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದ ಆನಂದ ಮಾಮನಿ ಚಿಕಿತ್ಸೆ ಫಲಿಸದೇ ವಿಧಿವಶರಾಗಿದ್ದಾರೆ. ಉಮೇಶ್​ ಕತ್ತಿ ನಾಲ್ಕು ದಶಕಗಳ ಜಿಲ್ಲಾ ರಾಜಕಾರಣದಲ್ಲಿ ಪ್ರಭಾವ ಹೊಂದಿದ್ರೆ, ಸುರೇಶ್​ ಅಂಗಡಿ ಹಾಗೂ ಆನಂದ ಮಾಮನಿ ಎರಡು ದಶಕಗಳಿಂದ ಜಿಲ್ಲೆಯಲ್ಲಿ ತಮ್ಮದೇ ವರ್ಚಸ್ಸು ಹೊಂದಿದ್ದರು. ಚುನಾವಣೆ ವರ್ಷದಲ್ಲಿ ಜಿಲ್ಲೆಯ ಮೂವರು ಪ್ರಬಲ ಲಿಂಗಾಯತ ಸಮುದಾಯದ ನಾಯಕರ ಕಳೆದುಕೊಂಡಿರುವ ಬಿಜೆಪಿಗೆ ತುಂಬಲಾಗದ ನಷ್ಟವಾಗಿರುವುದಂತೂ ಸುಳ್ಳಲ್ಲ.

(ಓದಿ: ತಂದೆ ಏರಿದ್ದ ಹುದ್ದೆಯನ್ನೇ ಅಲಂಕರಿಸಿದ್ದ ಆನಂದ ಮಾಮನಿ ಹ್ಯಾಟ್ರಿಕ್​ ಸಾಧಕ​)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.