ETV Bharat / state

ಬೆಳಗಾವಿ ಪಾಲಿಕೆ ಮುಂದೆ ಸ್ಥಾಪಿಸಲಾದ ಧ್ವಜಸ್ತಂಭಕ್ಕೆ ರಕ್ಷಣೆ ನೀಡುವಂತೆ ಸಿಎಂಗೆ ಮನವಿ - ಮಹಾನಗರ ಪಾಲಿಕೆ ಎದುರಿಗೆ ಹಾಕಿದ ಧ್ವಜಸ್ತಂಭ ವಿವಾದ

ಬೆಳಗಾವಿಯ ಯಳ್ಳೂರ ಗ್ರಾಮ ಕರ್ನಾಟಕದಲ್ಲಿದ್ದರೂ ಅಲ್ಲಿನವರು ಮಾಹರಾಷ್ಟ್ರ ರಾಜ್ಯಕ್ಕೆ ಸೇರಿದ್ದು ಎಂಬ ನಾಮಫಲಕವನ್ನು ಕಾನೂನು ಬಾಹಿರವಾಗಿ ಹಾಕಿಕೊಂಡಿದ್ದರು. ಆ ಕಲ್ಲಿನ ನಾಮಫಲಕಕ್ಕೆ ನಮ್ಮ ಬೆಳಗಾವಿ ಪೊಲೀಸ್ ಇಲಾಖೆಯವರು 20 ವರ್ಷಗಳ ಕಾಲ ಕಾವಲು ಕಾದಿದ್ದರು ಎಂದು ಭೀಮಪ್ಪ ಗಡಾದ್​ ಹೇಳಿದರು.

Bhimappa Gadad
ಭೀಮಪ್ಪ ಗಡಾದ್
author img

By

Published : Dec 30, 2020, 8:02 PM IST

ಬೆಳಗಾವಿ: ಮಹಾನಗರ ಪಾಲಿಕೆ ಎದುರಿಗೆ ಕನ್ನಡಪರ ಹೋರಾಟಗಾರರು ಸ್ಥಾಪಿಸಿರುವ ಧ್ವಜಸ್ತಂಭಕ್ಕೆ ರಕ್ಷಣೆ ಒದಗಿಸುವಂತೆ ಒತ್ತಾಯಿಸಿ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಗೃಹ ಸಚಿವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

ಪಾಲಿಕೆ ಮುಂದೆ ಸ್ಥಾಪಿಸಲಾದ ಧ್ವಜಸ್ತಂಭಕ್ಕೆ ರಕ್ಷಣೆ ನೀಡುವಂತೆ ಸಿಎಂಗೆ ಮನವಿ

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕನ್ನಡ ಧ್ವಜವನ್ನು ರಾಷ್ಟ್ರ ಧ್ವಜಕ್ಕೆ ಚುತಿ ಬಾರದ ರೀತಿಯಲ್ಲಿ ಹಾರಿಸಲಿಕ್ಕೆ ಕಾನೂನಿನಲ್ಲಿ ಯಾವುದೇ ತೊಡುಕು ಇಲ್ಲವೆಂದು ಹೈಕೋರ್ಟ್ ಅಡ್ವಕೇಟ್ ಜನರಲ್ 2016ರಂದು ಲಿಖಿತ ಅಭಿಪ್ರಾಯ ಕೊಟ್ಟಿದ್ದಾರೆ. ಇದಾದ ನಂತರ ಅಡ್ವಕೇಟ್ ಜನರಲ್ ಅವರ ಅಭಿಪ್ರಾಯದಂತೆ ಅಂದು ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅನುಮೋದನೆ ಕೊಟ್ಟಿದ್ದರು. ಇದಕ್ಕೆ ಸರ್ಕಾರದ ಕಾರ್ಯದರ್ಶಿಗಳು ಕೂಡ ಒಪ್ಪಿಗೆ ಸೂಚಿಸಿದ್ದರು. ಹೀಗಾಗಿ ಕರ್ನಾಟಕ ಸರ್ಕಾರವೇ ಸಂಪೂರ್ಣವಾಗಿ ಒಪ್ಪಿಗೆ ಕೊಟ್ಟಿರುವ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ಪಾಲಿಕೆ ಎದುರು ಧ್ವಜಸ್ತಂಭವನ್ನು ಹಾಕುವ ಕೆಲಸವನ್ನು ಸರ್ಕಾರವೇ ಮಾಡಬೇಕಿತ್ತು. ಆದ್ರೆ ಸರ್ಕಾರ ಮಾಡದಿರುವುದನ್ನು ಕನ್ನಡಾಭಿಮಾನಿಗಳು ಮಾಡಿದ್ದಾರೆ. ಇದರಿಂದ ರಾಷ್ಟ್ರ ಧ್ವಜಕ್ಕೆ ಯಾವುದೇ ರೀತಿಯ ಅವಮಾನ ಆಗೋದಿಲ್ಲ ಎಂದರು.

ಬೆಳಗಾವಿಯ ಯಳ್ಳೂರ ಗ್ರಾಮ ಕರ್ನಾಟಕದಲ್ಲಿದ್ದರೂ ಅಲ್ಲಿನವರು ಮಾಹರಾಷ್ಟ್ರ ರಾಜ್ಯಕ್ಕೆ ಸೇರಿದ್ದು ಎಂಬ ನಾಮಫಲಕವನ್ನು ಕಾನೂನು ಬಾಹಿರವಾಗಿ ಹಾಕಿಕೊಂಡಿದ್ದರು. ಕಾನೂನು ಬಾಹಿರ, ಸರ್ಕಾರಿ ಆದೇಶ ಇಲ್ಲದೆಯೂ ಹಾಕಲಾಗಿದ್ದ ಕಲ್ಲಿನ ನಾಮಫಲಕಕ್ಕೆ ನಮ್ಮ ಬೆಳಗಾವಿ ಪೊಲೀಸ್ ಇಲಾಖೆಯವರು 20 ವರ್ಷಗಳ ಕಾಲ ಕಾವಲು ಕಾದಿದ್ದರು. ಇದರ ಜೊತೆಗೆ ಮಹಾನಗರ ಪಾಲಿಕೆ ಕಚೇರಿ ಮೇಲೆ ಭಗವಧ್ವಜವನ್ನು ಹಾಕಿಕೊಂಡಿದ್ದರು. ಕಾನೂನು ಬಾಹಿರವಾಗಿರುವ ಕಲ್ಲಿನ ನಾಮಫಲಕಕ್ಕೆ 20 ವರ್ಷಗಳ ಕಾಲ ರಕ್ಷಣೆ ನೀಡಿದ್ದಾರೆ. ಆದರೀಗ ನಮ್ಮ ನಾಡಿನ‌ ಹೆಮ್ಮೆಯ ಪ್ರತೀಕವಾಗಿರುವ ಕನ್ನಡ ಧ್ವಜವನ್ನು ಹಾರಿಸಿರೋದು ತಪ್ಪೇನಿಲ್ಲ. ನಾವೇನು ಬೇರೆ ರಾಜ್ಯದ ಧ್ವಜವನ್ನು ಹಾರಿಸಿಲ್ಲ. ಹೀಗಾಗಿ ಸರ್ಕಾರ ಧ್ವಜಸ್ತಂಭಕ್ಕೆ ಭದ್ರತೆ ನೀಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಗೃಹ ಸಚಿವರಿಗೆ ದಾಖಲೆಗಳ ಸಮೇತ ಪತ್ರ ಬರೆದು ಮನವಿ ಮಾಡಿಕೊಳ್ಳಲಾಗಿದೆ ಎಂದರು.

ಇದನ್ನೂ ಓದಿ: ಮೂರು ದಿನಗಳ ಹಿಂದಷ್ಟೇ ಮೃತಪಟ್ಟಿದ್ದ ಅಭ್ಯರ್ಥಿಗೆ ಭರ್ಜರಿ ಗೆಲುವು

ಎಂಇಎಸ್ ಮುಖಂಡರು ಡಿ. 31ರೊಳಗೆ ನಾಡ ಧ್ವಜವನ್ನು ತೆರವು ಮಾಡುವಂತೆ ಕಮಿಷನರ್​ಗೆ ಮನವಿ ಮಾಡಿಕೊಂಡಿದ್ದಾರೆ. ಆದ್ರೆ ಕನ್ನಡ ಧ್ವಜವನ್ನು ತೆಗೆಸಲು ಇವರ್ಯಾರು, ಇವರಿಗೇನು ಅಧಿಕಾರವಿದೆ. ಹೀಗಾಗಿ ಸರ್ಕಾರ ಇದನ್ನು ಗಂಭೀರವಾಗಿ ಪರಿಶೀಲಿಸಿ ಧ್ವಜವನ್ನು ಯಾವುದೇ ಕಾರಣಕ್ಕೂ ತೆರವುಗೊಳಿಸಬಾರದು. ಯಾರಾದರೂ ಧ್ವಜ ತೆರವು ಮಾಡಲಿಕ್ಕೆ ಬಂದ್ರೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಇದರ ಜೊತೆಗೆ ಸರ್ಕಾರ ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.