ಬೆಳಗಾವಿ: ಮಾರ್ಚ್ ನಂತರ ಸಂಪುಟ ಪುನಾರಚನೆ ಆಗಲಿದೆ. ಆ ವೇಳೆ ಬೆಳಗಾವಿಗೆ ಮತ್ತೊಂದು ಸಚಿವ ಸ್ಥಾನ ಸಿಗಬಹುದು ಎಂದು ಸಚಿವ ರಮೇಶ್ ಜಾರಕಿಹೊಳಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಾ.ಪಂ, ಜಿ.ಪಂ. ಚುನಾವಣೆ ಬಳಿಕ ಸಂಪುಟ ಪುನಾರಚನೆ ಆಗಲಿದೆ. ಜಿಲ್ಲೆಗೆ ಮೊತ್ತೊಂದು ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಶಾಸಕ ಅಭಯ ಪಾಟೀಲ ಕೂಡ ಸಚಿವಾಕಾಂಕ್ಷಿ ಆಗಿದ್ದಾರೆ. ಪ್ರಯತ್ನ ಕೂಡ ಮಾಡ್ತಿದ್ದಾರೆ. ಜಿಲ್ಲೆಯಲ್ಲಿರುವ ಎಲ್ಲರೂ ನನ್ನ ಸ್ನೇಹಿತರೇ, ಮಂತ್ರಿಸ್ಥಾನ ಯಾರಿಗೆ ಸಿಕ್ಕರೂ ಖುಷಿ ಪಡ್ತಿನಿ ಎಂದರು.
ಚಿಕ್ಕಮಗಳೂರು ರೆಸಾರ್ಟ್ ವಾಸ್ತವ್ಯ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, "ಚಿಕ್ಕಮಗಳೂರು ಪ್ರವಾಸ ಒಂದು ವಾರದ ಮೊದಲೇ ನಿಗದಿಯಾಗಿತ್ತು. ನನ್ನ ಪ್ರವಾಸದ ಮಾಹಿತಿಯನ್ನು ಚಿಕ್ಕಮಗಳೂರು ಜಿಲ್ಲಾಡಳಿತಕ್ಕೆ ಮೊದಲೇ ಕಳುಹಿಸಲಾಗಿತ್ತು. ಆಗ ಸಂಪುಟ ವಿಸ್ತರಣೆ, ಖಾತೆ ಬದಲಾವಣೆ ಬಗ್ಗೆ ಮಾಹಿತಿಯೇ ನನಗಿರಲಿಲ್ಲ. ನಮಗೆ ಡ್ಯಾಮೇಜ್ ಆಗುವ ರೀತಿಯಲ್ಲಿ ಮಾಧ್ಯಮಗಳಲ್ಲಿ ವರದಿ ಬಂದವು. ಆದರೆ ಸಂಪುಟ ವಿಸ್ತರಣೆ ವಿಚಾರದಲ್ಲಿ ಸಿಎಂ ನಿರ್ಧಾರಕ್ಕೆ ಬದ್ಧನಾಗಿದ್ದೇನೆ" ಎಂದರು.
ಇದನ್ನು ಓದಿ: ರಾಜ ಮನೆತನದ ಡ್ರೆಸ್ನಲ್ಲಿ ಮಿರಮಿರ ಮಿಂಚಿದ ಪ್ರಧಾನಿ: ಅದು ಯಾವ ರಾಜ ಮನೆತನ ಗೊತ್ತೆ?
ನೂತನ ಕೃಷಿ ಮಸೂದೆ ಜಾರಿ ಖಂಡಿಸಿ ದೇಶಾದ್ಯಂತ ರೈತರ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಜಾರಕಿಹೊಳಿ, ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಪ್ರತಿಭಟನೆ ನಡೆಸುವ ಹಕ್ಕು ಎಲ್ಲರಿಗೂ ಇದೆ. ರೈತರ ಸಮಸ್ಯೆಗಳನ್ನು ಪ್ರಧಾನಿ, ಮುಖ್ಯಮಂತ್ರಿ ಬಗೆಹರಿಸುತ್ತಾರೆ. ಅಷ್ಟೇ ಅಲ್ಲದೆ, ಭಾರತದ ಕೋವಿಡ್ ವ್ಯಾಕ್ಸಿನ್ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಲಸಿಕೆ ಪಡೆಯಲು ಯಾರೂ ಹಿಂದೇಟು ಹಾಕಬಾರದು. ಕೆಲವರು ಕೊರೊನಾ ಲಸಿಕೆ ಬಗ್ಗೆ ಸುಳ್ಳು ವದಂತಿ ಹಬ್ಬಿಸುತ್ತಿದ್ದಾರೆ. ಭಾರತ ವ್ಯಾಕ್ಸಿನ್ ಬಗ್ಗೆ ಜಾಗತಿಕ ಮಟ್ಟದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವ್ಯಾಕ್ಸಿನ್ ಬಗ್ಗೆ ಭಯ ಬೇಡ, ವೈದ್ಯಕೀಯ ಸಿಬ್ಬಂದಿ ತ್ವರಿತವಾಗಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.