ETV Bharat / state

ಗಡಿ ವಿಚಾರದಲ್ಲಿ ಬೆಳಗಾವಿ ರಾಜಕಾರಣಿಗಳು ಯಾರೂ ಮೌನಕ್ಕೆ ಶರಣಾಗಿಲ್ಲ: ಸಚಿವೆ ಶಶಿಕಲಾ ಜೊಲ್ಲೆ

ಗಡಿ ವಿಚಾರದಲ್ಲಿ ಬೆಳಗಾವಿ ರಾಜಕಾರಣಿಗಳು ಯಾರು ಮೌನಕ್ಕೆ ಜಾರಿಲ್ಲ. ರಾಜ್ಯದ ಪರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚೆನ್ನಾಗಿ ಉತ್ತರ ನೀಡಿದ್ದಾರೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

ಸಚಿವೆ ಶಶಿಕಲಾ ಜೊಲ್ಲೆ
ಸಚಿವೆ ಶಶಿಕಲಾ ಜೊಲ್ಲೆ
author img

By

Published : Dec 11, 2022, 7:13 PM IST

ಗಡಿ ವಿಚಾರ ಕುರಿತು ಸಚಿವೆ ಶಶಿಕಲಾ ಜೊಲ್ಲೆ ಪ್ರತಿಕ್ರಿಯೆ

ಚಿಕ್ಕೋಡಿ(ಬೆಳಗಾವಿ): ಮಹಾರಾಷ್ಟ್ರ, ಕರ್ನಾಟಕ ಗಡಿ ವಿಚಾರದಲ್ಲಿ ನಾವು ಯಾರೂ ಮೌನವಾಗಿಲ್ಲ. ಈ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರಿಯಾಗಿಯೇ ಉತ್ತರ ನೀಡಿದ್ದಾರೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಪ್ರತಿಕ್ರಿಯೆ ನೀಡಿದ್ದಾರೆ.

ಅವರು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಭೋಜ ಗ್ರಾಮದಲ್ಲಿ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದರು. ಗಡಿ ವಿಚಾರದಲ್ಲಿ ಬೆಳಗಾವಿ ರಾಜಕಾರಣಿಗಳು ಯಾರು ಮೌನಕ್ಕೆ ಜಾರಿಲ್ಲ, ರಾಜ್ಯದ ಪರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚೆನ್ನಾಗಿ ಉತ್ತರ ನೀಡಿದ್ದಾರೆ ಎಂದರು.

ಹಿರಿಯರು ಉತ್ತರ ನೀಡಿದಾಗ ನಾವು ಮಾತನಾಡುವುದು ಸರಿಯಲ್ಲ. ಸಿಎಂ ಅವರ ಸಂಪರ್ಕದಲ್ಲಿ ಇದ್ದೇವೆ. ಗಡಿ ವಿಚಾರದಲ್ಲಿ ಯಾವುದೇ ಅನಾಹುತ ಆಗುವುದಕ್ಕೆ ಬಿಡುವುದಿಲ್ಲ. ಮುಖ್ಯಮಂತ್ರಿ ಅವರು ಮಾತನಾಡುತ್ತಿದ್ದು, ನಾವು ಸುಮ್ಮನಿದ್ದೇವೆ ಅಷ್ಟೇ ಎಂದು ಸಮರ್ಥನೆ ನೀಡಿದರು.

ಓದಿ: ಅಂಜನಾದ್ರಿ ಅಭಿವೃದ್ಧಿಗೆ ನಾವು ಬದ್ದ: ಸಚಿವೆ ಶಶಿಕಲಾ ಜೊಲ್ಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.