ETV Bharat / state

ಬೆಳಗಾವಿಯಲ್ಲಿ ಮಳೆ ಅವಾಂತರ ; ಗಾಳಿಗೆ ಮರಬಿದ್ದು ಓರ್ವ ಸಾವು,50 ಬೈಕ್ ಜಖಂ - A huge tree has fallen

ಬೆಳಗಾವಿಯಲ್ಲಿ ಬಂದ ಭಾರಿ ಬಿರುಗಾಳಿ ಸಹಿತ ಮಳೆಗೆ ಬೃಹತ್​ ಮರ ಧರೆಗುರುಳಿವೆ. 50ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಜಖಂಗೊಂಡಿವೆ. ಇಬ್ಬರಿಗೆ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ..

Belagavi heavy rain
ಬೆಳಗಾವಿಯಲ್ಲಿ ಮಳೆ ಅವಾಂತರ; ಗಾಳಿಗೆ ಮರಬಿದ್ದು 50 ಬೈಕ್ ಜಖಂ, ಇಬ್ಬರಿಗೆ ಗಾಯ
author img

By

Published : Apr 19, 2022, 7:32 PM IST

Updated : Apr 19, 2022, 8:17 PM IST

ಬೆಳಗಾವಿ : ಕುಂದಾನಗರಿ ಬೆಳಗಾವಿಯಲ್ಲಿ ಬಿರುಗಾಳಿ ಸಹಿತ ಸುರಿದ ಧಾರಾಕಾರ ಮಳೆಯಿಂದ‌ ಅವಾಂತರ ‌ಸೃಷ್ಟಿಯಾಗಿದೆ. ಭಾರಿ ಬಿರುಗಾಳಿ ಸಹಿತ ಮಳೆಗೆ ಬೃಹದಾಕಾರದ ಮರ ಧರೆಗುರುಳಿದೆ. ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯವಾಗಿದ್ದು, ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ 50ಕ್ಕೂ ಹೆಚ್ಚು ದ್ವಿಚಕ್ರವಾಹನಗಳು ಜಖಂಗೊಂಡಿವೆ.

ಜಿಲ್ಲಾಸ್ಪತ್ರೆ ಎದುರಿನ ರಸ್ತೆಯಲ್ಲೇ ಬೃಹತ್ ಮರ‌ ಧರೆಗುರುಳಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಮರ ತೆರವುಗೊಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಇಬ್ಬರನ್ನೂ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮಳೆಯಿಂದ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಹಲವೆಡೆ ರಸ್ತೆ ಮೇಲೆ ನೀರು ನಿಂತಿರುವ ಕಾರಣ ಸಂಚಾರ ಸಮಸ್ಯೆಯೂ ಕಾಣಿಸಿಕೊಂಡಿತು. ಬೆಳಗ್ಗೆಯಿಂದ ಬಿರುಬಿಸಿಲಿಗೆ ಕುಂದಾನಗರಿ ಜನ ಕಂಗೆಟ್ಟಿದ್ದರು. ದಿಢೀರ್ ಬಂದ ಮಳೆ ನಗರವಾಸಿಗಳಿಗೆ ತಂಪೆರೆಯಿತು‌.

ಗಾಳಿ ಮಳೆಗೆ ಧರೆಗುರರುಳಿದ ಮರ: 50ಕ್ಕೂ ಹೆಚ್ಚು ಬೈಕುಗಳಿಗೆ ಹಾನಿ, ಇಬ್ಬರಿಗೆ ಗಾಯ

ಓರ್ವ ಬಲಿ: ದ್ವಿಚಕ್ರ ವಾಹನದ ಮೇಲೆ ತೆರಳುತ್ತಿದ್ದವನ ಮೇಲೆ ಬೃಹದಾಕಾರದ ಮರ ಬಿದ್ದು ಸಾವಿಗೀಡಾಗಿದ್ದಾನೆ. ವಿಜಯ್ ಕೊಲ್ಲಾಪುರೆ (58) ಸಾವಿಗೀಡಾದವರು. ಬೆಳಗಾವಿಯ ಕ್ಲಬ್ ರಸ್ತೆಯಲ್ಲಿ ಈ ಘಟನೆ ಜರುಗಿದೆ.

ಇದನ್ನೂ ಓದಿ: ಶಿವಮೊಗ್ಗ: ಪ್ರಾಂಶುಪಾಲರಿಂದ ಪಿಯು ವಿದ್ಯಾರ್ಥಿಗಳಿಗೆ ಪರೀಕ್ಷಾ ಟಿಪ್ಸ್​

Last Updated : Apr 19, 2022, 8:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.