ETV Bharat / state

'ಕೊರೊನಾಗಿಂತಲೂ ಬೆಳೆದ ಬೆಳೆಗೆ ಬೆಲೆ ಇಲ್ಲದೇ ನಾವೇ ಸಾಯೋವಂತಾಗಿದೆ ರೀ..' - ಬೆಳಗಾವಿ ರೈತರ ಸಮಸ್ಯೆ

ಜಮೀನು ಹದಗೊಳಿಸಿ, ಗೊಬ್ಬರ, ನೀರು ಹಾಕಿ ಕಷ್ಟಪಟ್ಟು ಪೋಷಿಸಿ ಬೆಳೆದ ಬೆಳೆಗೆ ಹಾಕಿದ ಬಂಡವಾಳವೂ ಸಿಗದೆ ಸಾಲದ ಸುಳಿಯಲ್ಲಿ ಸಿಲುಕುತ್ತಿದ್ದಾರೆ ರೈತರು. ಆದರೆ, ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಿಲ್ಲವೆಂಬುದು ರೈತರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.

Belagavi farmers facing difficulties due to corona
ಬೇಸಾಯ ಮಾಡಲು ಹಿಂದು-ಮುಂದು ನೋಡುತ್ತಿರೋ ರೈತರು
author img

By

Published : Apr 12, 2020, 5:29 PM IST

ಬೆಳಗಾವಿ: ರೈತರು ತಮ್ಮ ಜಮೀನಿನಲ್ಲಿ ವಿವಿಧ ತರಕಾರಿಗಳನ್ನು ಬೆಳೆದಿದ್ದರೂ ಸೂಕ್ತ ಬೆಲೆಯಿಲ್ಲದೆ ರಸ್ತೆಯಲ್ಲಿ ಎಸೆಯುತ್ತಿರುವ ಹಾಗೂ ಅವುಗಳನ್ನು ನಾಶ ಮಾಡುತ್ತಿರುವ ಮನಕಲುಕುವ ಘಟನೆ ಪದೇಪದೆ ನಡೆಯುತ್ತಿವೆ.

ಸರ್ಕಾರ ಕೂಡಾ ರೈತರ ಬೆಳೆಗಳಿಗೆ ಸೂಕ್ತ ಪರಿಹಾರ ಒದಗಿಸಲಾಗುವುದು, ಯಾವುದೇ ಕಾರಣಕ್ಕೂ ಬೆಳೆಗಳನ್ನು ನಾಶ ಮಾಡದಂತೆ ಮನವಿ ಮಾಡಿಕೊಳ್ತಿದೆದೆ. ಆದರೆ, ಇದು ಕೇವಲ ಆಸ್ವಾಸನೆಯಷ್ಟೇ.. ಮುಂದೇನು ಮಾಡಬೇಕೆಂದು ಗೊತ್ತಾಗದೆ ರೈತರು ಕಂಗಾಲಾಗಿದ್ದಾರೆ.

ಸದ್ಯಕ್ಕೆ ರೈತರ ಸಮಸ್ಯೆ ಬಗೆಹರಿಯುವ ಲಕ್ಷಣ ಕಾಣಿಸ್ತಿಲ್ಲ..

ಜಮೀನು ಹದಗೊಳಿಸಿ, ಗೊಬ್ಬರ, ನೀರು ಹಾಕಿ ಕಷ್ಟಪಟ್ಟು ಪೋಷಿಸಿ ಬೆಳೆದ ಬೆಳೆಗೆ ಹಾಕಿದ ಬಂಡವಾಳವೂ ಸಿಗದೆ ಸಾಲದ ಸುಳಿಯಲ್ಲಿ ಸಿಲುಕುತ್ತಿದ್ದಾರೆ ರೈತರು. ಆದರೆ, ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಿಲ್ಲವೆಂಬುದು ರೈತರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳು ಕೇವಲ ನಗರಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಅವರು ನಗರದ ಜನರಿಗಷ್ಟೇ ದಿನಸಿ, ತರಕಾರಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕುರಿತು ಅಧಿಕಾರಿಗಳೊಂದಿಗೆ ಯೋಜನೆಗಳನ್ನು ಮಾಡುತ್ತಿದ್ದಾರೆ ಹೊರತು ಗ್ರಾಮೀಣ ಪ್ರದೇಶದ ಜನರು ಹಾಗೂ ರೈತರ ಸ್ಥಿತಿಗತಿ, ಸಮಸ್ಯೆಗಳ ಕುರಿತು ಕಿಂಚಿತ್ತೂ ಸಹಾಯ, ಸಹಕಾರವನ್ನು ಮಾಡುತ್ತಿಲ್ಲ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.