ಬೆಳಗಾವಿ: ಪಾಲಿಕೆಯ ಮಹಿಳಾ ಅಧಿಕಾರಿ ಲಕ್ಷ್ಮಿ ನಿಪ್ಪಾಣಿಕರ ಉಗ್ರಾವತಾರಕ್ಕೆ ಇಲ್ಲಿನ ಎಂಇಎಸ್ ಕಾರ್ಯಕರ್ತರು ಬೆದರಿ, ಬೆಂಡಾದ ಘಟನೆ ತಡರಾತ್ರಿ ನಡೆದಿದೆ. ನಗರದ ಕಪಿಲೇಶ್ವರ ಹೊಂಡದಲ್ಲಿ ಗಣೇಶ ವಿಗ್ರಹಗಳ ನಿಮ್ಮಜ್ಜನಕ್ಕೆ ಪಾಲಿಕೆಯಿಂದ ವ್ಯವಸ್ಥೆ ಮಾಡಲಾಗಿತ್ತು. ಪಾಲಿಕೆಯಿಂದ ಸ್ಥಾಪಿಸಲಾದ ತಾತ್ಕಾಲಿಕ ವೇದಿಕೆಯಲ್ಲಿ ಮರಾಠಿ ಭಾಷೆಯ ನಾಮಫಲಕ ಅಳವಡಿಸಿಲ್ಲ ಎಂದು ಕೆಲ ಎಂಇಎಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು.
ಆಗ ಎಂಇಎಸ್ ಕಾರ್ಯಕರ್ತರನ್ನು ಬೆಳಗಾವಿ ಮಹಾನಗರ ಪಾಲಿಕೆ ಉಪ ಆಯುಕ್ತೆ ಲಕ್ಷ್ಮಿ ನಿಪ್ಪಾಣಿಕರ (ಅಭಿವೃದ್ಧಿ) ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡರು. ಮರಾಠಿ ಭಾಷೆಯ ಬ್ಯಾನರ್ ಹಾಕದಿದ್ದಕ್ಕೆ ನಿನ್ನ ನೋಡಿಕೊಳ್ಳುವೆ ಎಂದು ಪುಂಡರು ಕಿರುಚಾಡಿದ್ದಾರೆ. ಎಂಇಎಸ್ ಪುಂಡರಿಗೆ ಹಿಗ್ಗಾಮುಗ್ಗಾ ತರಾಟೆಗೆ ಮಹಿಳಾ ಅಧಿಕಾರಿ ಪುಂಡರ ನೀರಿಳಿಸಿದರು.
ಎಂಇಎಸ್ ಪುಂಡರ ಕೆನ್ನೆಗೆ ಬಾರಿಸಲು ಮುಂದಾದ ಲಕ್ಷ್ಮಿ ನಿಪ್ಪಾಣಿಕರ ಅವರನ್ನು ವೇದಿಕೆ ಮೇಲಿದ್ದ ಇತರ ಸಿಬ್ಬಂದಿ ತಡೆದರು. ಪಾಲಿಕೆ ಅಧಿಕಾರಿ ಉಗ್ರಾವತಾರಕ್ಕೆ ಬೆದರಿದ ಎಂಇಎಸ್ ಪುಂಡರು ಸ್ಥಳದಿಂದ ಕಾಲ್ಕಿತ್ತರು.