ETV Bharat / state

ಲಿಂಗಾಯತ ಮೀಸಲಾತಿ ಹಿಂಪಡೆಯುವ ಕಾಂಗ್ರೆಸ್​ ಹೇಳಿಕೆಗೆ ಶೆಟ್ಟರ್​​, ಸವದಿ ಉತ್ತರವೇನು?: ಯತ್ನಾಳ್​

author img

By

Published : Apr 19, 2023, 3:51 PM IST

Updated : Apr 19, 2023, 4:37 PM IST

ಕಾಂಗ್ರೆಸ್​ ಅಧ್ಯಕ್ಷರು ಮೀಸಲಾತಿ ವಾಪಸ್​ ಪಡೆಯುವ ಬಗ್ಗೆ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಬಿಜೆಪಿ ತೊರೆದು ಕಾಂಗ್ರೆಸ್​ ಸೇರಿರುವ ಲಕ್ಷ್ಮಣ್​ ಸವದಿ ಮತ್ತು ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಏನು ಉತ್ತರ ನೀಡುತ್ತಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದ್ದಾರೆ.

basanagowda-patil-yathnal-slams-laxman-savadi-and-jagadish-shettar
ಲಿಂಗಾಯತರ ಮೀಸಲಾತಿ ವಾಪಸ್​ ಪಡೆಯುವ ಬಗ್ಗೆ ಕಾಂಗ್ರೆಸ್​ ಹೇಳಿಕೆಗೆ ಶೆಟ್ಟರ್​​, ಸವದಿ ಉತ್ತರವೇನು ? : ಯತ್ನಾಳ್​
ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ

ಚಿಕ್ಕೋಡಿ (ಬೆಳಗಾವಿ) : ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ. ಕೆಲವರು ಪಕ್ಷ ತೊರೆದು ಹೋಗಿದ್ದಾರೆ. ಅವರು ಯಾಕೆ ಹೋಗಿದ್ದಾರೆ, ಯಾವ ಸಿದ್ದಾಂತದ ಮೇಲೆ ಹೋಗಿದ್ದಾರೆ ಮತ್ತು ಅವರ ಉದ್ದೇಶವೇನು ಎಂಬುದು ರಾಜ್ಯದ ಜನರಿಗೆ ಗೊತ್ತಾಗಿದೆ. ಪಕ್ಷದಿಂದ ಸಾಕಷ್ಟು ಅನುಭವಿಸಿದ್ದಾರೆ. ಪಕ್ಷದಿಂದಾಗಿ ಇಷ್ಟು ದೊಡ್ಡವರಾಗಿ ಪಕ್ಷ ತೊರೆದಿದ್ದಾರೆ ಎಂದು ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ತೊರೆದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹುಂದ್ರಿ ನಾಮಪತ್ರ ಸಲ್ಲಿಕೆ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಸಂಸ್ಕ್ರತಿ ಎಂದರೆ ಮೊದಲನೆಯದು ಲಿಂಗಾಯತ ವಿರೋಧಿ. ಎರಡನೇಯದ್ದು ನಮ್ಮ ಸರ್ಕಾರ ಮೀಸಲಾತಿ ಕೊಟ್ಟಿದೆ. ಇದನ್ನು ಕಾಂಗ್ರೆಸ್​​ನ ಅಧ್ಯಕ್ಷರು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ನಾವು ಎಲ್ಲ ಮೀಸಲಾತಿ ಮರಳಿ ಪಡೆಯುತ್ತೇವೆ ಎಂದಿದ್ದಾರೆ. ಇದಕ್ಕೆ ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ್ ಸವದಿ ಉತ್ತರ ಕೊಡಬೇಕು ಎಂದು ಹೇಳಿದರು.

ಲಿಂಗಾಯತ, ಮರಾಠ, ಜೈನ್, ಕ್ರಿಶ್ಚಿಯನ್​ ಸಮುದಾಯಗಳಿಗೆ 2ಡಿ ಅಡಿಯಲ್ಲಿ ಮೀಸಲಾತಿ ಕೊಟ್ಟಿದ್ದಾರೆ. ಎಸ್ಸಿ ಎಸ್ಟಿ ಸಮುದಾಯಗಳಿಗೆ ಶೇ. 17 ಪ್ರತಿಶತ ಮೀಸಲಾತಿ ನೀಡಲಾಗಿದೆ. ವಾಲ್ಮೀಕಿ ಸಮುದಾಯದ ಮೀಸಲಾತಿಯನ್ನು ಶೇ. 3 ರಿಂದ 7ಕ್ಕೆ ಹೆಚ್ಚಳ ಮಾಡಲಾಗಿದೆ. ಎಲ್ಲಾ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ನೀಡಲಾಗಿದೆ. ಇದನ್ನು ಕಾಂಗ್ರೆಸ್‌ನವರು ಇದನ್ನು ತೆಗೆದು ಹಾಕುತ್ತೇನೆ ಎಂದು ಹೇಳುತ್ತಾರೆ. ಇದಕ್ಕೆ ಬಿಜೆಪಿಯಿಂದ ಹೋದವರ ಉತ್ತರವೇನು ಎಂದು ಕೇಳಿದರು. ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಮಂತ್ರಿ ಅಮಿತ್​ ಶಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಲ್ಲಾ ವರ್ಗಕ್ಕೆ ನ್ಯಾಯ ಒದಗಿಸಿಕೊಟ್ಟಿದ್ದಾರೆ. ಕೇವಲ ತಮ್ಮ ಸ್ವಾರ್ಥಕ್ಕಾಗಿ ಮತ್ತು ಒಂದು ಶಾಸಕ ಸ್ಥಾನಕ್ಕಾಗಿ ಪಕ್ಷವನ್ನು ಬಿಟ್ಟು ಹೋಗಿದ್ದಾರಲ್ಲ, ಇದಕ್ಕೆ ಉತ್ತರ ಕೊಡಲಿ ಎಂದು ಯತ್ನಾಳ್​ ಹೇಳಿದರು.

ಕಾಂಗ್ರೆಸ್ ಮಾರಾಟಕ್ಕಿರುವ ಪಕ್ಷ- ಪಂಜಾಬ್ ಸಿಎಂ: ಕಾಂಗ್ರೆಸ್ ಮಾರಾಟಕ್ಕಿರುವ ಪಕ್ಷ. ಕಾಂಗ್ರೆಸ್​ನಿಂದ ಆಯ್ಕೆಯಾದ ಎಂಎಲ್‌ಎ, ಎಂಪಿಗಳು ಬಿಜೆಪಿಗೆ ಹೋಗುತ್ತಾರೆ. ಅವರಿಗೆ ಯಾರೂ ಮತ ನೀಡಬೇಡಿ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್​ ಹೇಳಿದ್ದಾರೆ.

ಅಥಣಿಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸಂಪತ್ ಕುಮಾರ್ ಶೆಟ್ಟಿ ಅವರ ನಾಮಪತ್ರ ಸಲ್ಲಿಸುವ ವೇಳೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಬೇಡಿ. ಬಿಜೆಪಿಗೆ ಮತ ಹಾಕುವುದೆಂದರೆ ಅದು ಸುಳ್ಳಿಗೆ, ಭ್ರಷ್ಟಾಚಾರಕ್ಕೆ ಮತ ಹಾಕಿದಂತೆ. ಮೋದಿಯವರು 15 ಲಕ್ಷ ರೂ ನೀಡುವುದಾಗಿ ಹೇಳಿದ್ದರು. ನಿಮಗೆ ಯಾರಿಗಾದರೂ ಹಣ ಬಂದಿದೆಯಾ?. ನಮ್ಮ ಪಕ್ಷದ ಚಿಹ್ನೆ ಪೊರಕೆ. ಕೇಜ್ರಿವಾಲ್ ನೇತೃತ್ವದಲ್ಲಿ ಭಾರತ ದೇಶವನ್ನೇ ಸ್ವಚ್ಚಗೊಳಿಸುತ್ತೇವೆ ಎಂದು ತಿಳಿಸಿದರು.

ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್​

ದೆಹಲಿಯಲ್ಲಿ ಸರ್ಕಾರಿ ಶಾಲೆಗಳನ್ನು ಹೈಟೆಕ್ ಮಾಡಲಾಗಿದೆ. ದೆಹಲಿ ಜನತೆ ತಮ್ಮ ಮಕ್ಕಳನ್ನು ಖಾಸಗಿ ಶಾಲೆಯಿಂದ ಸರ್ಕಾರಿ ಶಾಲೆಗೆ ಸೇರಿಸುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ದೆಹಲಿಯಲ್ಲಿ ಉಚಿತವಾಗಿ ವಿದ್ಯುತ್ ನೀಡುತ್ತಿದ್ದೇವೆ ಎಂದರು.

ಚುನಾವಣಾ ಸಂದರ್ಭದಲ್ಲಿ ನಾವು ಉಚಿತವಾಗಿ ವಿದ್ಯುತ್ ನೀಡುತ್ತೇವೆ ಎಂದು ಭರವಸೆ ನೀಡಿದ್ದೆವು. ಹಾಗೆಯೇ ನಾವು ನುಡಿದಂತೆ ನಡೆದಿದ್ದೇವೆ. ಅರವಿಂದ ಕೇಜ್ರಿವಾಲ್ 12 ಲಕ್ಷ ಉದ್ಯೋಗ ಸೃಷ್ಟಿ ಮಾಡಿದ್ದಾರೆ. ಯಾರು ಜನತೆಗೆ ನಿಯತ್ತಾಗಿರುತ್ತಾರೋ ಅವರು ಅಧಿಕಾರದಲ್ಲಿರುತ್ತಾರೆ. ಹೀಗಾಗಿ ಅಥಣಿಯ ಸರ್ವಾಂಗೀಣ ಅಭಿವೃದ್ದಿಗಾಗಿ ಆಪ್ ಅಭ್ಯರ್ಥಿ ಸಂಪತ್​ ಕುಮಾರ್​ಗೆ ನಿಮ್ಮ ಮತ ನೀಡಿ ಎಂದು ಮನವಿ ಮಾಡಿದರು.

ಇದನ್ನೂ ಓದಿ : ಶಿಗ್ಗಾಂವಿಯಲ್ಲಿ ಸಿಎಂ ಭರ್ಜರಿ ರೋಡ್​ ಶೋ: ನಟ ಸುದೀಪ್​, ನಡ್ಡಾ ಜತೆಗೆ ಬಂದು ನಾಮಪತ್ರ ಸಲ್ಲಿಕೆ​.. ಕಾಂಗ್ರೆಸ್​​ ಅಂದರೆ ಭ್ರಷ್ಟಾಚಾರ ಎಂದು ನಡ್ಡಾ ವಾಗ್ದಾಳಿ

Last Updated : Apr 19, 2023, 4:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.