ETV Bharat / state

ಬ್ಯಾಂಕ್ ಅಧಿಕಾರಿಗಳ ಯಡವಟ್ಟು: 2.40 ಲಕ್ಷ ರೂ. ಬಡ್ಡಿ ಹಣ ಕಟ್ಟುವಂತೆ ನಿತ್ಯ ಕಿರುಕುಳ ಆರೋಪ - Bank officials forcing to give 2.40 lakhs Rs. interest

ಬೈಲಹೊಂಗಲ ತಾಲೂಕಿನ ಬಿದರಗಡ್ಡಿ ನಿವಾಸಿ ಆಗಿರುವ ಸುನೀತಾ ನಿಂಬಾಳ್ಕರ್ ಎಂಬುವರು 50 ಸಾವಿರ ರೂ. ಬೆಳೆ ಸಾಲಕ್ಕೆ 1.40 ಲಕ್ಷ ರೂ. ಬಡ್ಡಿ ಹಣ ಕಟ್ಟಿದರೂ ಸಂಬಂಧಿಸಿದ ಬ್ಯಾಂಕ್ ಅಧಿಕಾರಿಗಳು ಮಾತ್ರ ಇನ್ನೂ 2.40 ಲಕ್ಷ ಬಡ್ಡಿ ಹಣ ಕಟ್ಟುವಂತೆ ನಿತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಬಿದರಗಡ್ಡಿ ನಿವಾಸಿ ಸುನೀತಾ ನಿಂಬಾಳ್ಕರ್
ಬಿದರಗಡ್ಡಿ ನಿವಾಸಿ ಸುನೀತಾ ನಿಂಬಾಳ್ಕರ್
author img

By

Published : Jan 5, 2021, 3:21 PM IST

Updated : Jan 5, 2021, 3:49 PM IST

ಬೆಳಗಾವಿ: ಬ್ಯಾಂಕ್ ಅಧಿಕಾರಿಗಳ ಯಡವಟ್ಟಿನಿಂದಾಗಿ ಪತಿಯನ್ನು ಕಳೆದುಕೊಂಡೆ. 50 ಸಾವಿರ ರೂ. ಬೆಳೆ ಸಾಲಕ್ಕೆ 1.40 ಲಕ್ಷ ರೂ. ಬಡ್ಡಿ ಹಣ ಕಟ್ಟಿದರೂ ಸಂಬಂಧಿಸಿದ ಬ್ಯಾಂಕ್ ಅಧಿಕಾರಿಗಳು ಮಾತ್ರ ಇನ್ನೂ 2.40 ಲಕ್ಷ ಬಡ್ಡಿ ಹಣ ಕಟ್ಟುವಂತೆ ನಿತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಬಿದರಗಡ್ಡಿ ನಿವಾಸಿ ಸುನೀತಾ ನಿಂಬಾಳ್ಕರ್ ಎಂಬುವವವರು ನಗರದ ಯೂನಿಯನ್ ಬ್ಯಾಂಕ್ ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸಿದರು.

ಮೂಲತಃ ಬೈಲಹೊಂಗಲ ತಾಲೂಕಿನ ಬಿದರಗಡ್ಡಿ ನಿವಾಸಿ ಆಗಿರುವ ಸುನೀತಾ ನಿಂಬಾಳ್ಕರ್ ಎಂಬುವವರು ಈ ಆರೋಪ ಮಾಡುತ್ತಿದ್ದಾರೆ. ಸುನೀತಾ ಹಾಗೂ ರೈತ ಮುಖಂಡ ರವಿ ಪಾಟೀಲ್​ ಹೇಳುವಂತೆ, ಬೈಲಹೊಂಗಲ ತಾಲೂಕಿನ ಖೂದಾನಪೂರ ಗ್ರಾಮದ ಕಾರ್ಪೋರೇಷನ್ ಬ್ಯಾಂಕ್‍ನಲ್ಲಿ ನನ್ನ ಪತಿ ಬಾಲಕೃಷ್ಣ ಎಂಬುವವರು 2008ರಲ್ಲಿ 50 ಸಾವಿರ ರೂ. ಬೆಳೆ ಸಾಲ ತೆಗೆದುಕೊಂಡಿದ್ದರು. ಬೆಳೆ ಸಾಲ ತೆಗೆದುಕೊಂಡು 2013ರವರೆಗೆ ಅದರ ಬಡ್ಡಿ ಹಣ ಕಟ್ಟುತ್ತಾ ಬಂದಿದ್ದಾರೆ. ಇದಾದ ನಂತರ 2014ರಲ್ಲಿ ಮತ್ತೆ ಪೈಪ್​ಲೈನ್ ಲೋನ್‍ನಲ್ಲಿ 70 ಸಾವಿರ ಹಣ ಪಡೆದುಕೊಂಡಿದ್ದರು. ಆ ಪೈಪ್​ಲೈನ್ ಲೋನ್ ಹಣವನ್ನು 2015ರಲ್ಲಿ ಎಲ್ಲವನ್ನೂ ಕಟ್ಟಿ ಕ್ಲೀಯರ್ ಮಾಡಿದ್ದರು. ಆದ್ರೆ ಅನಿವಾರ್ಯ ಕಾರಣದಿಂದ ಕುಟುಂಬ ಸಮಸ್ಯೆ ಹಿನ್ನೆಲೆ 50 ಸಾವಿರ ರೂ. ಬೆಳೆ ಸಾಲಕ್ಕೆ 2014ರಿಂದ 2015ರವರೆಗೆ ಬಡ್ಡಿ ಕಟ್ಟಿರುವುದಿಲ್ಲ.

2.40 ಲಕ್ಷ ರೂ. ಬಡ್ಡಿ ಹಣ ಕಟ್ಟುವಂತೆ ನಿತ್ಯ ಕಿರುಕುಳ ಆರೋಪ

ನಂತರ ಬಾಕಿ ಉಳಿದ ಬಡ್ಡಿ ಕಟ್ಟಲು ಬ್ಯಾಂಕ್‍ನ ಅಧಿಕಾರಿಗಳ ಹತ್ರ ತೆರಳಿ ಸ್ಟೆಟ್​ಮೆಂಟ್​ ಕೇಳಿದ್ರೆ, ಸುಮಾರು ಎರಡು ವರ್ಷಗಳ ಕಾಲ ಎಲೆಕ್ಟ್ರಾನಿಕ್ ಮಷಿನ್ ಕೆಟ್ಟಿದೆ ಎನ್ನುವ ಮೂಲಕ ನಮ್ಮನ್ನು ಅಲೆದಾಡುವಂತೆ ಮಾಡಿದರು. ಎಷ್ಟೇ ಪ್ರಯತ್ನಿಸಿದರೂ ಬ್ಯಾಂಕ್ ಸ್ಟೆಟ್​ಮೆಂಟ್​ ಕೊಡಲಿಲ್ಲ. ನಂತರ ರೈತ‌ ಮುಖಂಡರ ನೇತೃತ್ವದಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಎಚ್ಚರಿಕೆ ನೀಡಿದ್ಮೇಲೆ ಇನ್ನೂ 2.40 ಲಕ್ಷ ಬಡ್ಡಿ ಹಣ ಬಾಕಿ ತುಂಬಬೇಕು ಎಂದು‌ ಹೇಳುತ್ತಿದ್ದಾರೆ. ಆದ್ರೆ ನಮ್ಮ ಖಾತೆ ಚೆಕ್ ಮಾಡಿ ನೋಡಿದಾಗ 2017ರಲ್ಲಿ ಅಂದಿನ ಸಿಎಂ ಕುಮಾರಸ್ವಾಮಿಯವರ ಸರ್ಕಾರದಲ್ಲಿ ಸಾಲ ಮನ್ನಾ ಆಗಿದೆ.

ಓದಿ:ಕಂಪನಿಗಳ ಮಧ್ಯೆ ವ್ಯಾಕ್ಸಿನ್ ವಾರ್ ಜತೆಗೆ ರಾಜಕೀಯ ಬೆರೆಸಬಾರದು: ಡಾ.ಅಮಿತ್ ಭಾತೆ

ಆದರೂ ಸಂಬಂಧಿಸಿದ ಬ್ಯಾಂಕ್ ಅಧಿಕಾರಿಗಳು ನಮಗೆ ಸರಿಯಾದ ಮಾಹಿತಿ ಕೊಡುತ್ತಿಲ್ಲ. ಬರೀ ಬಡ್ಡಿ ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದಾರೆ. ಇತ್ತ ಬ್ಯಾಂಕ್ ಅಧಿಕಾರಿಗಳ ಕಿರುಕುಳ, ಸಾಲದ ಚಿಂತೆಯಲ್ಲಿಯೇ ಪತಿ ಬಾಲಕೃಷ್ಣ ನಮ್ಮ ಹೊಲದಲ್ಲಿಯೇ ಜೀವ ಕಳೆದುಕೊಂಡಿದ್ದಾರೆ. ಇಷ್ಟೆಲ್ಲ ಆದರೂ ಸ್ಥಳೀಯ ಮ್ಯಾನೇಜರ್ ಅವರನ್ನು ಭೇಟಿ ಮಾಡಿ ಬಗೆ ಹರಿಸಲು ಯತ್ನಿಸಿದರೂ ಅವರು ಸರಿಯಾಗಿ ಸ್ಪಂದಿಸುತ್ತಿಲ್ಲ. ಉಡಾಫೆ ಉತ್ತರ ನೀಡಿ ನಮ್ಮನ್ನು ಕಳುಹಿಸುತ್ತಿದ್ದಾರೆ. ಸ್ಥಳೀಯ ಮ್ಯಾನೇಜರ್ ರೈತರಿಗೆ ಮತ್ತು ಸಾರ್ವಜನಿಕರಿಗೆ ಸ್ಪಂದಿಸುವ ಕೆಲಸವನ್ನ ಮಾಡುತ್ತಿಲ್ಲ ಎಂದು ಸುನೀತಾ ಅವರು ತಮ್ಮ ಅಳಲನ್ನು ತೋಡಿಕೊಂಡರು.

ಈಗಾಗಲೇ 50 ಸಾವಿರ ಬೆಳೆ ಸಾಲಕ್ಕೆ 1 ಲಕ್ಷ 40 ಸಾವಿರ ಹಣ ಕಟ್ಟಲಾಗಿದೆ. ಇದೀಗ ಮತ್ತೆ 2.40 ಬಡ್ಡಿ ಹಣ ಕಟ್ಟುವಂತೆ ಹೇಳುತ್ತಿದ್ದಾರೆ. ಇತ್ತ ನಮ್ಮ ಬ್ಯಾಂಕ್ ಖಾತೆಯಲ್ಲಿ 25 ಸಾವಿರ ಹಣ ಇದ್ದರೂ ಬ್ಯಾಂಕ್ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ. ಇನ್ನಾದರೂ ಬ್ಯಾಂಕ್ ಅಧಿಕಾರಿಗಳು ರೈತರ ರಕ್ತ ಹೀರುವುದನ್ನು ನಿಲ್ಲಿಸಬೇಕು. ನೋಂದ ಮಹಿಳೆಯ ಪತಿ ತೆಗೆದುಕೊಂಡಿದ್ದ ಸಾಲವನ್ನು ಮನ್ನಾ ಮಾಡಬೇಕೆಂದು ರೈತ ಮುಖಂಡರು ಆಗ್ರಹಿಸಿದ್ದಾರೆ.

Last Updated : Jan 5, 2021, 3:49 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.