ಚಿಕ್ಕೋಡಿ: ಬಳ್ಳಾರಿ ವಿಭಜನೆ ಮಾಡಿ ವಿಜಯನಗರ ನೂತನ ಜಿಲ್ಲೆಯ ಅಧಿಕೃತ ಆದೇಶ ಹೊರಬಂದ ಬೆನ್ನಲ್ಲೇ ಜಿಲ್ಲಾ ಹೋರಾಟ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಬಿ. ಆರ್. ಸಂಗಪ್ಪಗೋಳ ಮಾಧ್ಯಮದವರೊಂದಿಗೆ ಮಾತನಾಡಿ, ಬಳ್ಳಾರಿ ವಿಭಜನೆಗೆ ವಿರೋಧ ಇದ್ದರೂ ಸರ್ಕಾರ ಆದೇಶ ಮಾಡಿದೆ. ಆದರೆ, ಚಿಕ್ಕೋಡಿ ಜಿಲ್ಲೆಗೆ ಕಳೆದ ಎರಡು ದಶಕದಿಂದಲೂ ಬೇಡಿಕೆ ಇದ್ದರೂ ಸರ್ಕಾರ ಮಾತ್ರ ಮೌನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಓದಿ: ಸಾರಿಗೆ ನೌಕರರ ಪ್ರತಿಭಟನೆ ಬಸ್ಗಳ ಸಂಚಾರಕ್ಕೆ ಕಂಟಕವಾಗಲಿದ್ಯಾ?
ಆನಂದ್ ಸಿಂಗ್ ಗ್ರೇಟ್ ವ್ಯಕ್ತಿ, ಜಿಲ್ಲೆಗಾಗಿ ಒಬ್ಬರೇ ಹೋರಾಟ ಮಾಡಿ ಯಶಸ್ವಿಯಾಗಿದ್ದಾರೆ. ಆದರೆ, ನಮ್ಮ ಜಿಲ್ಲೆಯ ನಾಯಕರಿಗೆ ದಮ್ ಇಲ್ಲ. ಬದಲಾಗಿ ಜಿಲ್ಲೆಗಾಗಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಯೇ ಅಡ್ಡಗಾಲು ಹಾಕುತ್ತಿದ್ದಾರೆ. ಉಳಿದ ನಾಯಕರಿಗೆ ಇಚ್ಛಾಶಕ್ತಿ ಇಲ್ಲದಂತಾಗಿದೆ. ಕೂಡಲೇ ಸರ್ಕಾರ ಚಿಕ್ಕೋಡಿ ಜಿಲ್ಲೆ ಕುರಿತು ನಿರ್ಧಾರಕ್ಕೆ ಬರಬೇಕು. ಇಲ್ಲವಾದಲ್ಲಿ ಹೋರಾಟಕ್ಕೆ ನಾವು ಸಿದ್ದರಿದ್ದೇವೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.