ETV Bharat / state

ಕಿತ್ತೂರಿನಲ್ಲಿ ನಕಲಿ ರಸಗೊಬ್ಬರ ಮಾರಾಟ ಸ್ಥಳದ ಮೇಲೆ ದಾಳಿ - ಕಿತ್ತೂರಿನಲ್ಲಿ ನಕಲಿ ರಸಗೊಬ್ಬರ

ಹರಳು ರೂಪಕ್ಕೆ ಮಾರ್ಪಡಿಸಿರುವ ಜಿಪ್ಸಂನಂತಹ ಭೂ ಸುಧಾರಕಗಳು ನೋಡಲು ರಸಗೊಬ್ಬರಗಳಂತೆಯೇ ಇರುತ್ತವೆ. ಆದ್ದರಿಂದ ರೈತ ಬಾಂಧವರು ಈ ರೀತಿಯ ನಕಲಿ ರಸಗೊಬ್ಬರಗಳ ಬಗ್ಗೆ ಜಾಗೃತರಾಗಿರಬೇಕು.

fake Fertilizer
fake Fertilizer
author img

By

Published : May 13, 2021, 7:53 PM IST

ಬೆಳಗಾವಿ: ಚೆನ್ನಮ್ಮನ ಕಿತ್ತೂರಿನಲ್ಲಿ ನಕಲಿ ರಸಗೊಬ್ಬರ ಮಾರಾಟ ಮಾಡುತ್ತಿದ್ದ ಸಿದ್ಧಾರೂಡ ಅಸೋಸಿಯೇಟ್​ ಅಗ್ರಿಕಲ್ಚರ್ ಸರ್ವಿಸ್ ಸೆಂಟರ್​ಗಳ ಮೇಲೆ ದಾಳಿ‌ ನಡೆಸಿ, ರಸಗೊಬ್ಬರ ಜಪ್ತಿ‌ ಮಾಡಲಾಗಿದ್ದು, ಮಾರಾಟಗಾರರ ಮೇಲೆ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಜಾಗೃತ ಕೋಶದ ಜಂಟಿ ನಿರ್ದೇಶಕ ಜಿಲಾನಿ ಮೊಖಾಶಿ ತಿಳಿಸಿದ್ದಾರೆ.

ಕಿತ್ತೂರಿನ ಹೊಸ ಚನ್ನಾಪುರ, ಗಿರಿಯಾಲ ರಸ್ತೆಯಲ್ಲಿರುವ ಮಲ್ಲಯ್ಯಾ ಬಸವಣ್ಣಯ್ಯಾ ಚಿಕ್ಕಮಠ, ಸಾನಿ ಲಕ್ಕುಂಡಿಯವರ ಸಿದ್ಧಾರೂಡ ಅಸೋಸಿಯೇಟ್​ ಅಗ್ರಿಕಲ್ಚರ್ ಸರ್ವಿಸ್ ಸೆಂಟರ್​ನವರು ಬಯೋ ಡಿಎಪಿ ಮತ್ತು ಬಯೋ ಯೂರಿಯಾ ಹೆಸರುಗಳನ್ನು ಚೀಲಗಳ ಮೇಲೆ ಮುದ್ರಿಸಿ ಜಿಪ್ಸಂ ಒಳಗೊಂಡ ಭೂ ಸುಧಾರಕಗಳನ್ನು ರಸಗೊಬ್ಬರಗಳೆಂದು ಮಾರಾಟ ಮಾಡುತ್ತಿರುವ ಬಗ್ಗೆ ಕೃಷಿ ಅಧಿಕಾರಿಗಳ ಗಮನಕ್ಕೆ ಬಂದಿದೆ. ಈ ವೇಳೆ ದಾಳಿ ನಡೆಸಿದ ಕೃಷಿ ಅಧಿಕಾರಿಗಳು, ನಕಲಿ ಲಿಕ್ವಿಡ್ ಬಯೋ ಉತ್ಪನ್ನಗಳನ್ನು ಜಪ್ತಿ ಮಾಡಿ ಸ್ಥಳವನ್ನು ಸೀಲ್ ಮಾಡಿದ್ದಾರೆ.

ನಕಲಿ ರಸಗೊಬ್ಬರಗಳನ್ನು ಈ ಮಾರಾಟಗಾರರು ಎಎಸ್, ಗ್ರೂಪ್ ಧಾರವಾಡ ಇವರಿಂದ ಪಡೆದುಕೊಂಡು ಕಿತ್ತೂರಿನ ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ಮಾರಾಟ ಮಾಡುತ್ತಿರುವುದು ತಿಳಿದುಬಂದಿದೆ.

ನಕಲಿ ಉತ್ಪನ್ನಗಳ ವಶ:

ದಾಳಿ ಸಂದರ್ಭದಲ್ಲಿ ಬಯೋ ಡಿಎಪಿ 76 ಚೀಲ ಮತ್ತು ಬಯೋ ಯೂರಿಯಾ 3 ಚೀಲ ಜೊತೆಗೆ 14 ಬಯೋ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಧಿಕಾರಿಗಳು ವಶಪಡಿಸಿಕೊಂಡ ನಕಲಿ ಉತ್ಪನ್ನಗಳ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ. ಇದಲ್ಲದೆ ಕೃಷಿ ಇಲಾಖೆಯಿಂದ ಪರವಾನಿಗೆಯನ್ನು ಪಡೆಯದೆ ನಕಲಿ ರಸಗೊಬ್ಬರ ಮತ್ತು ಇತರ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಮಲ್ಲಯ್ಯಾ ಬಸವಣ್ಣಯ್ಯಾ ಚಿಕ್ಕಮಠ ಇವರ ಮೇಲೆ ರಸಗೊಬ್ಬರ ನಿಯಂತ್ರಣ ಆದೇಶದನ್ವಯ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜಿಲಾನಿ ಮೊಖಾಶಿ ಮಾಹಿತಿ ನೀಡಿದ್ದಾರೆ.

ರೈತರಲ್ಲಿ ಜಾಗೃತಿ ಅವಶ್ಯಕ :

ಹರಳು ರೂಪಕ್ಕೆ ಮಾರ್ಪಡಿಸಿರುವ ಜಿಪ್ಸಂನಂತಹ ಭೂ ಸುಧಾರಕಗಳು ನೋಡಲು ರಸಗೊಬ್ಬರಗಳಂತೆಯೇ ಇರುತ್ತವೆ. ಆದ್ದರಿಂದ ರೈತ ಬಾಂಧವರು ಈ ರೀತಿಯ ನಕಲಿ ರಸಗೊಬ್ಬರಗಳ ಬಗ್ಗೆ ಜಾಗೃತರಾಗಿರಬೇಕು. ಕಡಿಮೆ ದರಕ್ಕೆ ರಸಗೊಬ್ಬರಗಳನ್ನು ನೀಡುವುದಾಗಿ ಹೇಳುವ ಮಾತುಗಳಿಗೆ ಮರುಳಾಗಬಾರದು. ಅಧಿಕೃತ ಪರವಾನಿಗೆ ಹೊಂದಿರುವ ರಸಗೊಬ್ಬರಗಳ ಮಾರಾಟಗಾರಲ್ಲಿಯೇ ರಶೀದಿಯನ್ನು ಪಡೆದು ರಸಗೊಬ್ಬರಗಳನ್ನು ಖರೀದಿಸಬೇಕು ಎಂದು ಮೊಖಾಶಿ ತಿಳಿಸಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಸಣ್ಣ ವಾಹನಗಳು ಮತ್ತು ಲಾರಿಗಳಲ್ಲಿ ನಕಲಿ ರಸಗೊಬ್ಬರಗಳನ್ನು ತಂದು ಸ್ಥಳೀಯ ಏಜಂಟ್​ಗಳ ಮೂಲಕ ಮಾರಾಟ ಮಾಡುತ್ತಿರುವುದು ಅಲ್ಲಲ್ಲಿ ಕಂಡುಬರುತ್ತಿದೆ. ಆದುದರಿಂದ ರೈತ ಬಾಂಧವರು ತಮ್ಮ ಗ್ರಾಮಗಳಲ್ಲಿ ಈ ರೀತಿಯ ನಕಲಿ ರಸಗೊಬ್ಬರ ಮಾರಾಟ ಮಾಡುತ್ತಿರುವುದು ಕಂಡು ಬಂದರೆ ಕೂಡಲೇ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ, ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಅಥವಾ ಜಾಗೃತ ಕೋಶಕ್ಕೆ ಕೂಡಲೇ ಮಾಹಿತಿ ನೀಡಬೇಕೆಂದು ಅವರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.