ಅಥಣಿ: ಜನತಾ ಕರ್ಫ್ಯೂ ಕಾರಣದಿಂದ ವ್ಯಾಪಾರವಿಲ್ಲದೆ ಸಂಕಷ್ಟದಲ್ಲಿದ್ದ ಅಜ್ಜಿಯೊಬ್ಬರಿಗೆ ಅಥಣಿ ಪೊಲೀಸ್ ಸಿಬ್ಬಂದಿ ಧನ ಸಹಾಯ ಮಾಡಿದ್ದಾರೆ.
ಪಟ್ಟಣದ ಬೆಣ್ಣೆ ಬಜಾರಿನಲ್ಲಿ ಒಣ ಶುಂಠಿ ಮಾರುತ್ತಾ ಅಜ್ಜಿ ಜೀವನ ಸಾಗಿಸುತ್ತಿದ್ದರು. ಕೋವಿಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಅಥಣಿ ವ್ಯಾಪಾರಸ್ಥರ ಸಂಘ ಸ್ವಯಂಪ್ರೇರಿತವಾಗಿ ವ್ಯಾಪಾರ ವಹಿವಾಟು ಬಂದ್ ಮಾಡಿದೆ. ಇದರಿಂದ ವ್ಯಾಪಾರವಿಲ್ಲದೆ ಅಜ್ಜಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು.
ಇದನ್ನೂ ಓದಿ: ಬಡ ಜನರಿಗೆ ಆಹಾರ ವಿತರಿಸಿ ಯುವಕರ ಮಾನವೀಯ ಕಾರ್ಯ
ಜೀವನಕ್ಕೆ ಬೇರೆ ದಾರಿ ಕಾಣದೆ ಕರ್ಫ್ಯೂ ನಡುವೆ ವೃದ್ಧೆ ವ್ಯಾಪಾರಕ್ಕೆಂದು ಮಾರುಕಟ್ಟೆಗೆ ಬಂದಿದ್ದರು.