ETV Bharat / state

ಬೆಳ್ಳಂಬೆಳಗ್ಗೆ ವ್ಯಾಪಾರಸ್ಥರಿಗೆ ಅಥಣಿ ಡಿವೈಎಸ್​ಪಿ ಖಡಕ್ ಕ್ಲಾಸ್ - corona effect

ಸಾರ್ವಜನಿಕರ ಅನುಕೂಲಕ್ಕಾಗಿ ದಿನಸಿ ಅಂಗಡಿಗಳಿಗೆ ಪರವಾನಗಿ ಕೊಡಲು ಅಥಣಿ ಪುರಸಭೆ ಮುಂದಾಗಿದೆ. ತರಕಾರಿ ಮಾರಾಟಕ್ಕೆ ಸಂಬಂಧಿಸಿದಂತೆ ಪಟ್ಟಣದ ವ್ಯಾಪಾರಿಗಳಿಗೆ ಈ ಹಿಂದೆಯೇ ತಿಳಿಸಿತ್ತು. ಆದರೂ ಕೂಡ ತರಕಾರಿ ಮಾರುಕಟ್ಟೆಯಲ್ಲಿ ಜನರು ಗುಂಪುಗೂಡಿದ್ದು ಗಮನಕ್ಕೆ ಬರುತ್ತಿದ್ದಂತೆಯೇ ಅಲ್ಲಲ್ಲಿ ಪೊಲೀಸರು ಲಾಠಿ ರುಚಿ ತೋರಿಸಿದರು.

Athani DYSP Girish warned sellers in the market
ಬೆಳ್ಳಂ ಬೆಳಿಗ್ಗೆ ವ್ಯಾಪಾರಸ್ಥರಿಗೆ ಬಿಸಿ ಮುಟ್ಟಿಸಿದ ಅಥಣಿ ಡಿವೈಎಸ್​ಪಿ ​
author img

By

Published : Mar 27, 2020, 9:42 AM IST

ಅಥಣಿ(ಬೆಳಗಾವಿ): ದೇಶಾದ್ಯಂತ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಅಥಣಿ ಪಟ್ಟಣದ ಮಾರುಕಟ್ಟೆ ಪ್ರದೇಶದಲ್ಲಿ ಗುಂಪು ಗೂಡಿದ್ದ ಜನರಿಗೆ ಅಥಣಿ ಡಿವೈಎಸ್​ಪಿ ಎಸ್.ವಿ.ಗಿರೀಶ್​ ಖಡಕ್​ ವಾರ್ನಿಂಗ್​ ಮಾಡುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.

ಬೆಳ್ಳಂಬೆಳಗ್ಗೆ ವ್ಯಾಪಾರಸ್ಥರಿಗೆ ಬಿಸಿ ಮುಟ್ಟಿಸಿದ ಅಥಣಿ ಡಿವೈಎಸ್​ಪಿ ​

ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಜನರಿಗೆ ಎಷ್ಟು ಸಲ ಹೇಳಿದರೂ ಕೂಡ ಕೇಳದ ಹಿನ್ನೆಲೆಯಲ್ಲಿ ಲಾಠಿ ಬೀಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಲಾಠಿ ಏಟು ಬೀಳುತ್ತಿದ್ದಂತೆಯೇ ತರಕಾರಿ ವ್ಯಾಪಾರಿಗಳು, ಗ್ರಾಹಕರು ಸ್ಥಳದಲ್ಲೇ ತರಕಾರಿ ಬಿಟ್ಟು ಓಡಿದ್ದಾರೆ.

ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಮಹಂತೇಶ್ ಕೌಲಾಪೂರ, ಕಿರಿಯ ಆರೋಗ್ಯ ನಿರೀಕ್ಷಕ ಬಸವರಾಜ ಬೋಳಿಶೆಟ್ಟಿ ಮತ್ತು ಪುರಸಭೆ ಹಾಗೂ ಪೋಲಿಸ್ ಸಿಬ್ಬಂದಿ ಉಪಸ್ಥಿತರಿದ್ದರು.

ಅಥಣಿ ಪಟ್ಟಣದಲ್ಲಿ ಶಿಸ್ತು ಮತ್ತು ಶಾಂತಿ ಕಾಪಾಡಿಕೊಳ್ಳಲು ಹಾಗೂ ಕೊರೊನಾ ಜಾಗೃತಿ ಮೂಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಉಳಿದ ಇಲಾಖೆಯ ಹಾಗೂ ತಮ್ಮ ಇಲಾಖೆಯ ಗುತ್ತಿಗೆ ಕಾರ್ಮಿಕರು ಸೇರಿದಂತೆ ಸಾರ್ವಜನಿಕರು ಸಹಕರಿಸುತ್ತಿದ್ದಾರೆ ಎಂದು ಪುರಸಭೆ ಮುಖ್ಯಾಧಿಕಾರಿ ಮಹಂತೇಶ್ ಕೌಲಾಪೂರ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.