ETV Bharat / state

ಅಥಣಿ: ತಳವಾರ ಸಮಾಜಕ್ಕೆ ಎಸ್​ಟಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ಕರಾಳ ದಿನಾಚರಣೆ - Dark day celebrate to demand give ST certificate to Talavara samaj

ತಳವಾರ ಸಮಾಜಕ್ಕೆ ಪರಿಶಿಷ್ಟ ಪಂಗಡ ಪ್ರಮಾಣ ಪತ್ರವನ್ನು ಸರ್ಕಾರ ತಕ್ಷಣವೇ ವಿತರಣೆ ಮಾಡಬೇಕು ಎಂದು ಆಗ್ರಹಿಸಿ ತಳವಾರ ಸಮಾಜ ಎಸ್ ಟಿ ಹೋರಾಟ ಸಮಿತಿಯಿಂದ ಕರಾಳ ದಿನಾಚರಣೆ ಆಚರಿಸಲಾಯಿತು. ರಾಜ್ಯ ಸರ್ಕಾರ ಧೋರಣೆ ಖಂಡಿಸಿ ತಳವಾರ ಸಮಾಜಕ್ಕೆ ನ್ಯಾಯ ಒದಗಿಸುವಂತೆ ಅಥಣಿ ತಹಶೀಲ್ದಾರ್ ಮುಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.

ತಳವಾರ ಸಮಾಜಕ್ಕೆ ಎಸ್​ಟಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ಕರಾಳ ದಿನಾಚರಣೆ

author img

By

Published : Oct 8, 2020, 5:04 PM IST

Updated : Oct 8, 2020, 5:58 PM IST

ಅಥಣಿ (ಬೆಳಗಾವಿ): ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಎಂದು ಆಗ್ರಹಿಸಿ ಸರ್ಕಾರದ ವಿರುದ್ಧ ತಳವಾರ ಸಮಾಜ ಎಸ್ ಟಿ ಹೋರಾಟ ಸಮಿತಿಯಿಂದ ಅಥಣಿ ಚಲೋ ಎಂಬ ಬೃಹತ್ ಜಾಥಾ ಜೊತೆ, ಕಪ್ಪು ಬಟ್ಟೆ ಧ್ವಜ ಹಾರಾಟ ನಡೆಸಿ ಕರಾಳ ದಿನ ಆಚರಿಸಲಾಯಿತು.

ಪಟ್ಟಣದ ಶಿವಾಜಿ ವೃತ್ತದಲ್ಲಿ ವಿವಿಧ ಗ್ರಾಮಗಳ ನೂರಾರು ಜನರು ಜೊತೆಯಾಗಿ ಅಥಣಿ ತಹಶೀಲ್ದಾರ್ ಕಚೇರಿವರೆಗೆ ಪಾದಯಾತ್ರೆ ಮೂಲಕ ತೆರಳಿ ದಾರಿ ಉದ್ದಕ್ಕೂ, ತಳವಾರ ಸಮುದಾಯಕ್ಕೆ ಎಸ್ ಟಿ ಪ್ರಮಾಣ ಪತ್ರ ವಿತರಣೆ ಮಾಡುವಂತೆ ಘೋಷಣೆ ಕೂಗುತ್ತ ಸರ್ಕಾರವನ್ನು ಒತ್ತಾಯಿಸಿದರು. ರಾಜ್ಯ ಸರ್ಕಾರ ಧೋರಣೆ ಖಂಡಿಸಿ ತಳವಾರ ಸಮಾಜಕ್ಕೆ ನ್ಯಾಯ ಒದಗಿಸುವಂತೆ ಅಥಣಿ ತಹಶೀಲ್ದಾರ್ ಮುಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.

ತಳವಾರ ಸಮಾಜಕ್ಕೆ ಎಸ್​ಟಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ಕರಾಳ ದಿನಾಚರಣೆ

ಇದೇ ವೇಳೆ, ಅಶೋಕ್ ಗಳ್ಳಗಾಂವಿ ಮಾತನಾಡಿ ತಳವಾರ ಸಮಾಜಕ್ಕೆ ಪರಿಶಿಷ್ಟ ಪಂಗಡ ಪ್ರಮಾಣ ಪತ್ರವನ್ನು ಸರ್ಕಾರ ತಕ್ಷಣವೇ ವಿತರಣೆ ಮಾಡಬೇಕು. ದಿನಾಂಕ 20/03/2020 ರಂದು ಕೇಂದ್ರ ಸರ್ಕಾರ ತಳವಾರ ಜಾತಿಯನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಗೆಜೆಟ್ ಹೊರಡಿಸಿದೆ. ಅದರಂತೆ ಸುಮಾರು 6 ತಿಂಗಳ ಕಾಲಾವಧಿ ಗತಿಸಿದರೂ ಕೂಡ ನಮ್ಮ ಅಥಣಿ ತಾಲೂಕಿನ ತಳವಾರ ಸಮುದಾಯಕ್ಕೆ ಇದುವರೆಗೂ ಒಂದೇ ಒಂದು ಪರಿಶಿಷ್ಟ ಪಂಗಡ ಪ್ರಮಾಣಪತ್ರವನ್ನು ನೀಡಿಲ್ಲ. ಅಥಣಿ ತಾಲೂಕಿನ ತಳವಾರ ಸಮಾಜದವರು. ಸತತವಾಗಿ ತಹಶೀಲ್ದಾರರಿಗೆ, ಮಾನ್ಯ ಉಪ ಮುಖ್ಯಮಂತ್ರಿಗಳು, ಸಮಾಜ ಕಲ್ಯಾಣ ಇಲಾಖೆ ಸಚಿವರು, ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ನೀಡುವುದರ ಜೊತೆಗೆ ವಿಭಿನ್ನ ರೀತಿಯಲ್ಲಿ ಶಾಂತಿಯುತ ಪ್ರತಿಭಟನೆ ಮಾಡಿದ್ದಾರೆ. ಆದರೂ ಸಹ ಸರ್ಕಾರವಾಗಲಿ, ಸ್ಥಳೀಯ ಅಧಿಕಾರಿಗಳಾಗಲಿ ಯಾವುದೇ ರೀತಿಯ ಸಕಾರಾತ್ಮಕ ಸ್ಪಂದನೆ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Last Updated : Oct 8, 2020, 5:58 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.