ಅಥಣಿ: ಬೆಳಗಾವಿಯ ಅಥಣಿ ಕ್ಷೇತ್ರದ ಉಪ ಚುನಾವಣೆಯು ರಾಜಕೀಯ ಪಕ್ಷಗಳ ಪ್ರತಿಷ್ಠೆಯ ಕಣವಾಗಿ ಪರಿವರ್ತನೆಯಾಗಿದೆ. ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ಹಾಗೂ ಪಕ್ಷೇತರ ಅಭ್ಯರ್ಥಿಗಳು ಅಥಣಿಯ ಅಧಿಕಾರ ಹಿಡಿಯಲು ತಮ್ಮದೇ ಶೈಲಿಯಲ್ಲಿ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಈಗಾಗಲೇ ನಾಮಪತ್ರ ಸಲ್ಲಿಕೆಗೆ ಕೊನೆಯ ಗಡುವು ಮುಗಿದಿದ್ದು, ಎಲ್ಲಾ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ಪ್ರಚಾರದಲ್ಲಿ ತೊಡಗಿದ್ದಾರೆ.
ಅಥಣಿಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗಜಾನನ ಮಂಗಸೂಳಿ ಮತ್ತು ಬಿಜೆಪಿ ಅಭ್ಯರ್ಥಿಯಾಗಿ ಮಹೇಶ್ ಕುಮಟಳ್ಳಿ ಸ್ಪರ್ಧಿಸಿದ್ದು, ಇಬ್ಬರು ನಾಮಪತ್ರ ಸಲ್ಲಿಸಿ ತಮ್ಮ ಆಸ್ತಿ ವಿವರವನ್ನು ಘೋಷಿಸಿಕೊಂಡಿದ್ದಾರೆ.
ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಆಸ್ತಿ ವಿವರ :
ಒಟ್ಟು ಚರಾಸ್ತಿ : 40 ಲಕ್ಷ 49 ಸಾವಿರ 137 ರೂ.
ಸ್ಥಿರಾಸ್ತಿ : ಪಿತ್ರಾರ್ಜಿತ ಸೇರಿ 4 ನಿವೇಶನ, ಸ್ವಯಾರ್ಜಿತ 6 ನಿವೇಶನ ಸೇರಿದಂತೆ 8 ಕೋಟಿ 94 ಲಕ್ಷ ರೂ., 2 ಲಕ್ಷ 50 ಸಾವಿರ ರೂ. ಮೌಲ್ಯದ 60 ಗ್ರಾಂ ಚಿನ್ನ, 5 ಸಾವಿರ ರೂ. ಮೌಲ್ಯದ 120 ಗ್ರಾಂ ಬೆಳ್ಳಿ, ಇವರ ಹೆಸರಿನಲ್ಲಿ ಯಾವುದೇ ವಾಹನಗಳು ಇಲ್ಲ.
ಸ್ಥಿರಾಸ್ತಿ ಮತ್ತು ಚರಾಸ್ತಿ ಸೇರಿ : 9 ಕೋಟಿ 37 ಲಕ್ಷ 4 ಸಾವಿರ 137 ರೂ.
ಸಾಲ : ಪಿಕೆಪಿಎಸ್ ತೆಲಸಂಗದಲ್ಲಿ 40 ಸಾವಿರ ರೂ. ಖಾಸಗಿ ವ್ಯಕ್ತಿಯಿಂದ 5 ಲಕ್ಷ ರೂ. ಸಾಲ
ಒಟ್ಟು ಸಾಲ: 5 ಲಕ್ಷ 40 ಸಾವಿರ ರೂ.
ಪತ್ನಿಯ ಆಸ್ತಿ ವಿವರ : ಚರಾಸ್ತಿ : 38 ಲಕ್ಷ 3 ಸಾವಿರ 611 ರೂ.
ಸ್ಥಿರಾಸ್ತಿ : 19 ಲಕ್ಷ 30 ಸಾವಿರ ರೂ ಮೌಲ್ಯದ 3 ಎಕರೆ 16 ಗುಂಟೆ ಜಮೀನು,
4 ಲಕ್ಷ ರೂ. ಮೌಲ್ಯದ 1 ನಿವೇಶನ.
ಚರಾಸ್ತಿ ಮತ್ತು ಸ್ಥಿರಾಸ್ತಿ ಮೌಲ್ಯ : 16 ಲಕ್ಷ 23 ಸಾವಿರ 611
ಒಟ್ಟು ಕುಟುಂಬದ ಆಸ್ತಿ : 9 ಕೋಟಿ 64 ಲಕ್ಷ 57 ಸಾವಿರ 738 ರೂ.
ಕುಟುಂಬದ ಒಟ್ಟು ಸಾಲ : 5 ಲಕ್ಷದ 40 ಸಾವಿರ ರೂ.
ಅಥಣಿ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಆಸ್ತಿ ವಿವರ :
ಒಟ್ಟು ಚರಾಸ್ತಿ: 37 ಲಕ್ಷ 342 ರೂ. ಸ್ಥಿರಾಸ್ತಿ: 55 ಲಕ್ಷ 20 ಸಾವಿರ ರೂ. ಮೌಲ್ಯದ 1 ಎಕರೆ 38 ಗುಂಟೆ ಕೃಷಿ ಭೂಮಿ, 5 ಕೋಟಿ 93 ಲಕ್ಷ ರೂ. ಮೌಲ್ಯದ 9 ನಿವೇಶನ, 40 ಲಕ್ಷ ರೂ. ಮೌಲ್ಯದ ಸಂಕೀರ್ಣ ಹಾಗೂ ವಸತಿ ಕಟ್ಟಡ.
ಸ್ಥಿರಾಸ್ತಿ ಒಟ್ಟು ಮೌಲ್ಯ: 6 ಕೋಟಿ 88 ಲಕ್ಷ 20 ಸಾವಿರ ರೂ.
ಸ್ಥಿರಾಸ್ತಿ ಮತ್ತು ಚರಾಸ್ತಿ ಸೇರಿ : 7 ಕೋಟಿ 25 ಲಕ್ಷ 20 ಸಾವಿರ 342 ರೂ.
ಸಾಲ: 3 ಲಕ್ಷ ಕೃಷಿ ಸಾಲ ಸೇರಿದಂತೆ ಒಟ್ಟು 6 ಲಕ್ಷ ರೂ.
ಪತ್ನಿಯ ಆಸ್ತಿಯ ವಿವರ :
ಚರಾಸ್ತಿ: 36 ಲಕ್ಷ ಮೌಲ್ಯದ 900 ಗ್ರಾಂ ಚಿನ್ನ, 4 ಲಕ್ಷ ರೂ. ಮೌಲ್ಯದ 10 ಕೆಜಿ ಬೆಳ್ಳಿ ಸೇರಿದಂತೆ 49 ಲಕ್ಷ 72 ಸಾವಿರ 648 ರೂ.
ಸ್ಥಿರಾಸ್ತಿ: 42 ಲಕ್ಷ ರೂ. ಮೌಲ್ಯದ 4 ನಿವೇಶನಗಳು, 50 ಲಕ್ಷ ರೂಪಾಯಿ ಮೌಲ್ಯದ ವಾಣಿಜ್ಯ ಕಟ್ಟಡ.
ಚರಾಸ್ತಿ ಮತ್ತು ಸ್ಥಿರಾಸ್ತಿ ಮೌಲ್ಯ : ೧ ಕೋಟಿ 41 ಲಕ್ಷ 72 ಸಾವಿರ 648 ರೂ.
ಇಬ್ಬರು ಪುತ್ರರ ಸ್ಥಿರಾಸ್ತಿ : 10 ಲಕ್ಷ 57 ಸಾವಿರ 216 ರೂ.
ಸಾಲ: ಖಾಸಗಿ ಬ್ಯಾಂಕ್ ನಲ್ಲಿ 2 ಲಕ್ಷ ರೂ.
ಒಟ್ಟು ಕುಟುಂಬದ ಆಸ್ತಿ: 8 ಕೋಟಿ 77 ಲಕ್ಷ 50 ಸಾವಿರ 206 ರೂ.
ಕುಟುಂಬದ ಒಟ್ಟು ಸಾಲ: 8 ಲಕ್ಷ ರೂ.