ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಸಿನಿಮೀಯ ಶೈಲಿಯಲ್ಲಿ ಎರಡು ವರ್ಷದ ಮಗುವನ್ನು ಅಪಹರಿಸಿ, ಆರೋಪಿಗಳು ಪರಾರಿಯಾಗಿರುವ ಘಟನೆ ನಡೆದಿದೆ.
ತಾಲೂಕಿನ ಸಂಕೋನಟ್ಟಿ ಗ್ರಾಮದ ಯಲ್ಲಪ್ಪ ಜಿನ್ನಪ್ಪ ಬಹುರೂಪಿ ಎಂಬ 2 ವರ್ಷದ ಮಗು, ಮನೆ ಮುಂದೆ ಆಟವಾಡುವಾಗ ಯಾರೋ ಅಪರಿಚಿತರು ಕಾರಿನಲ್ಲಿ ಬಂದು ಮಗುವನ್ನು ಅಪಹರಣ ಮಾಡಿದ್ದಾರೆ.
ಓದಿ:ಉದ್ಯೋಗ ಖಾತ್ರಿ ಯೋಜನೆಯಡಿ ಬಿಸಿಲಲ್ಲಿ ಕೆಲಸ.. ಮಹಿಳೆಯರ ಸಂಕಷ್ಟ ಆಲಿಸಿದ ಶಾಸಕಿ ಹೆಬ್ಬಾಳ್ಕರ್
ಘಟನೆ ವಿವರ: ಸಂಕೋನಟ್ಟಿ ಗ್ರಾಮದ ಹೊರವಲಯದಲ್ಲಿ ಜೋಪಡಿ ಹಾಕಿಕೊಂಡು ಹುಸೇನವ್ವ ಚಿನ್ನಪ್ಪ ಬಹುರೂಪಿ ಎಂಬುವವರು ಕೂಲಿ ಕೆಲಸ ಮಾಡಿಕೊಂಡು ವಾಸವಾಗಿದ್ದರು. ಮಗುವಿನ ತಾಯಿ ಪಕ್ಕದಲ್ಲಿ ನೀರು ತರಲು ಹೋಗಿದ್ದು, ಅಪರಿಚಿತ ವ್ಯಕ್ತಿಗಳು ಕಾರಿನಲ್ಲಿ ಬಂದು ಮಗುವನ್ನು ಹೊತ್ತುಕೊಂಡು ಹೋಗಿದ್ದಾರೆ ಎಂದು ಕುಟುಂಬದ ಸದಸ್ಯರು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.