ಬೆಳಗಾವಿ : ನಗರದ ಗಣಪತಿ ಬೀದಿಯಲ್ಲಿ ಅಗತ್ಯವಸ್ತುಗಳ ಮಾರಾಟಕ್ಕೆ ಮಾತ್ರ ಅನುಮತಿ ಇದ್ದರೂ ಬಟ್ಟೆ ಸೇರಿ ಇತರ ಅಂಗಡಿಗಳು ಓಪನ್ ಇದ್ದವು. ಗಣಪತಿ ಗಲ್ಲಿಯಲ್ಲಿ ಬಟ್ಟೆ ಅಂಗಡಿ ಓಪನ್ ಮಾಡಿದ್ದ ಯುವತಿಯನ್ನು ಖಡೇಬಜಾರ್ ಎಎಸ್ಐ ಎಸ್.ಎಸ್.ಮುಸ್ಟಗಿ ತರಾಟೆಗೆ ತೆಗೆದುಕೊಂಡರು.
ಈ ವೇಳೆ ಮಾತಿಗಿಳಿದ ಬೇರೆ ಬಟ್ಟೆ ಅಂಗಡಿಗಳು ಓಪನ್ ಆಗಿವೆ, ಅವುಗಳನ್ನೂ ಬಂದ್ ಮಾಡಿಸಿ ಅಂತ ಯುವತಿ ವಾಗ್ವಾದ ನಡೆಸಿದರು. ಈ ವೇಳೆ ರೊಚ್ಚಿಗೆದ್ದ ಖಡೇಬಜಾರ್ ಎಎಸ್ಐ, ಯೂಸ್‌ಲೆಸ್ ಫೆಲೋ ಮನುಷ್ಯ ಇದಿಯಾ, ದನ ಇದಿಯಾ?'.. ನಾಲ್ಕು ಸಾರಿ ಬಂದು ಬಂದ್ ಮಾಡಿಸಿದರೂ ಅಂಗಡಿ ಓಪನ್ ಮಾಡಿದ್ದೀಯಾ?.. ನಾಳೆಯಿಂದ ಅಂಗಡಿ ಓಪನ್ ಮಾಡಿದ್ರೆ ಕಾಲು ಮುರಿತೀನಿ' ಎಂದು ಯುವತಿಗೆ ಎಚ್ಚರಿಕೆ ನೀಡಿದರು.
ಅಗತ್ಯವಸ್ತುಗಳ ಖರೀದಿಗೆ ಕಾಲಾವಕಾಶ ವಿಸ್ತರಿಸಿದರೂ, ನಗರದ ಪ್ರಮುಖ ಮಾರ್ಕೆಟ್ ಪ್ರದೇಶದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವ ಜನರು ಕೋವಿಡ್ ರೂಲ್ಸ್ ಬ್ರೇಕ್ ಮಾಡುತ್ತಿದ್ದಾರೆ.
ಅಗತ್ಯವಸ್ತುಗಳ ಖರೀದಿಗೆ ಮುಗಿಬೀಳುತ್ತಿದ್ದು, ಸರಿಯಾಗಿ ಮಾಸ್ಕ್ ಧರಿಸದೇ, ದೈಹಿಕ ಅಂತರ ಕಾಯ್ದುಕೊಳ್ಳದೇ ವ್ಯಾಪಾರ, ವಹಿವಾಟು ಮಾಡುತ್ತಿದ್ದಾರೆ.
ಬೆಳಗಾವಿಯಲ್ಲಿ ದಿನೇದಿನೆ ಕೊರೊನಾ ಸೋಂಕಿತರ ಸಂಖ್ಯೆ, ಮರಣ ಪ್ರಮಾಣ ಹೆಚ್ಚುತ್ತಿದ್ದರೂ ಜನರು ಮಾತ್ರ ತಲೆಕೆಡಿಸಿಕೊಳ್ಳುತ್ತಿಲ್ಲ.
ಇದನ್ನೂ ಓದಿ : ಚಾಮರಾಜನಗರದಲ್ಲಿ ಭೀಕರ ದುರಂತ: 24 ಸಾವು, ಆಕ್ಸಿಜನ್ ಸಿಗದೆ 12 ಮಂದಿ ಕೊನೆಯುಸಿರು