ಅಥಣಿ: ತಾಲೂಕಿನ ಹನಮಾಪುರ ಕ್ರಾಸ್ ಬಳಿ ಶುಕ್ರವಾರ ತಡರಾತ್ರಿ ಅಥಣಿ ಮತ್ತು ಬೆಳಗಾವಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಗಾಂಜಾ ಮಾರಾಟ ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ಇಬ್ಬರನ್ನು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆ ಜತ್ ತಾಲ್ಲೂಕಿನ ಜೀರಗ್ಯಾಳ ಗ್ರಾಮದ ಸಾಗರ ಭರಮಾ ಕಟ್ಟಿಕರ (27) ಮತ್ತು ಗುರುಲಿಂಗ ಹೊಳೆಪ್ಪ ಡೋಲೆ (42) ಬಂಧಿತರು. ಬಂಧಿತರಿಂದ ಅಂದಾಜು 39,920 ಬೆಲೆ ಬಾಳುವ 1ಕೆ.ಜಿ, 996 ಗ್ರಾಂ ಒಣ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಎಸ್ಪಿ ಲಕ್ಷ್ಮಣ್ ನಿಂಬರಗಿ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ವಿರೇಶ್ ದೊಡಮನಿ, ಅಥಣಿ ಪಿಎಸ್ಐ ಕುಮಾರ್ ಹಾಡಕಾರ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಈ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.