ETV Bharat / state

ಉತ್ತರ ಕರ್ನಾಟಕ ಸಮಸ್ಯೆಗಳ ಕುರಿತು ಪರಿಷತ್​ನಲ್ಲಿ ಚರ್ಚೆ: ಸಿಎಂ ಉತ್ತರ ಖಂಡಿಸಿ ಬಿಜೆಪಿ ಧರಣಿ

ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಸಿಎಂ ಸಿದ್ದರಾಮಯ್ಯ ನೀಡಿದ ಉತ್ತರವನ್ನು ಖಂಡಿಸಿ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು.

Protest by BJP over CM reply on the problems of North Karnataka
ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಪರಿಷತ್​ನಲ್ಲಿ ಚರ್ಚೆ: ಸಿಎಂ ಉತ್ತರ ಖಂಡಿಸಿ ಬಿಜೆಪಿಗರಿಂದ ಧರಣಿ
author img

By ETV Bharat Karnataka Team

Published : Dec 15, 2023, 6:57 PM IST

Updated : Dec 15, 2023, 9:10 PM IST

ಉತ್ತರ ಕರ್ನಾಟಕ ಸಮಸ್ಯೆಗಳ ಕುರಿತು ಪರಿಷತ್​ನಲ್ಲಿ ಚರ್ಚೆ: ಸಿಎಂ ಉತ್ತರ ಖಂಡಿಸಿ ಬಿಜೆಪಿ ಧರಣಿ

ಬೆಂಗಳೂರು/ಬೆಳಗಾವಿ: ಅಧಿವೇಶನದ ಕೊನೆಯ ದಿನ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು. ನೀರಾವರಿ ಯೋಜನೆ ಕಡೆಗಣಿಸಿದ್ದರಿಂದಲೇ ತೆಲಂಗಾಣ ರಾಜ್ಯ ರಚನೆಯಾಗಿದೆ ಎನ್ನುವ ಅಂಶದ ಪ್ರಸ್ತಾವನೆಯೂ ಆಯಿತು. ಅಂತಿಮವಾಗಿ ಚರ್ಚೆಗೆ ಸಿಎಂ ಸಿದ್ದರಾಮಯ್ಯ ನೀಡಿದ ಉತ್ತರ ಖಂಡಿಸಿ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ಕೈಗೊಂಡರು.

ಅಧಿವೇಶನದ ಕೊನೆ ಘಳಿಗೆಯಲ್ಲಿ ಉತ್ತರ ಕರ್ನಾಟಕ ಭಾಗದ ಚರ್ಚೆಗೆ ಅವಕಾಶ ನೀಡಲಾಯಿತು. ಉತ್ತರ ಕರ್ನಾಟಕದ ಮೇಲಿನ‌ ಸಮಸ್ಯೆ ಬಗ್ಗೆ ಪರಿಷತ್​ನಲ್ಲಿ ಚರ್ಚೆ ಶುರುವಾಗುತ್ತಿದ್ದಂತೆ ಚಳಿಗಾಲದ ಅಧಿವೇಶನ ಮುಕ್ತಾಯವಾಗುವ ಕೊನೆ ಹಂತದಲ್ಲಿ ಉತ್ತರ ಕರ್ನಾಟಕದ ಚರ್ಚೆ ಕೈಗೆತ್ತಿಕೊಂಡಿದ್ದಕ್ಕೆ ಹಲವು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ನಂತರ ಚರ್ಚೆ ಆರಂಭಿಸಿದ ಬಿಜೆಪಿ ಸದಸ್ಯ ಹನುಮಂತ ಲಮಾಣಿ ಬೇಸರದಿಂದಲೇ ಮಾತು ಶುರುಮಾಡಿದರು. ಉತ್ತರ ಕರ್ನಾಟಕ ಭಾಗದ 14 ಜಿಲ್ಲೆಗಳಲ್ಲಿ ನೂರಾರು ಸಮಸ್ಯೆಗಳಿವೆ. ಹಿಂದಿನಿಂದಲೂ ಈ ಭಾಗಕ್ಕೆ ಅನ್ಯಾಯ ಆಗುತ್ತಿದೆ. ನಮಗೆ ಕೊಟ್ಟಿರುವ ಕೊನೆ ಐದು ನಿಮಿಷದಲ್ಲಿ ಏನು ಚರ್ಚೆ ಮಾಡೋಣ ಎಂದು ಅಸಮಾಧಾನ ವ್ಯಕ್ತಪಡಿಸಿದರು. ತೆಲಂಗಾಣ ರಾಜ್ಯ ಪ್ರತ್ಯೇಕ ಆಗಿದ್ದು ಯಾಕೆ ಎಂಬುದು ಎಲ್ಲರಿಗೂ ಗೊತ್ತಿದೆ. ನೀರಾವರಿ ಯೋಜನೆಗಳ ಕಾರಣಕ್ಕೆ ಪ್ರತ್ಯೇಕ ರಾಜ್ಯ ಉದಯ ಆಯ್ತು ಎಂದು ಪರೋಕ್ಷವಾಗಿ ಉತ್ತರ ಕರ್ನಾಟಕ ಭಾಗಕ್ಕೆ ನೀರಾವರಿ ವಂಚನೆ ಕುರಿತು ಪ್ರಸ್ತಾಪ ಮಾಡಿದರು‌.

ನಿರಾಣಿ ಸೇರಿ ಇತರೆ ಸದಸ್ಯರು ಮಾತನಾಡಿದ ನಂತರ ಚರ್ಚೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಇವರು ನೀರಾವರಿಗಾಗಿ ಏನೂ ಮಾಡಿಯೇ ಇಲ್ಲ. ಅಪ್ಪರ್ ಭದ್ರಾ ಯೋಜನೆಗೆ 5,300 ಕೋಟಿ ರೂ. ಕೊಡ್ತೀವಿ ಅಂತ ಹೇಳಿ ಒಂದು ರೂಪಾಯಿಯೂ ಕೊಡಲಿಲ್ಲ. ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ರು, ಆದರೆ ಹಣ ಬರಲಿಲ್ಲ ಎಂದರು. ಸಿಎಂ ಮಾತಿಗೆ ಬಿಜೆಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಸದನದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಯಿತು.

ಗದ್ದಲದ ನಡುವೆಯೇ ಉತ್ತರ ಕರ್ನಾಟಕ ಭಾಗಕ್ಕೆ ಹೊಸ ಯೋಜನೆ ಘೋಷಣೆ ಮಾಡಿದ ಸಿಎಂ, ನಂಜುಂಡಪ್ಪ ವರದಿಯ ಅನುಷ್ಠಾನ ಹಾಗೂ ಅದರ ಫಲಶ್ರುತಿ ಅಧ್ಯಯನ ಮಾಡಲು ನುರಿತ ಅರ್ಥಶಾಸ್ತ್ರಜ್ಞರೊಬ್ಬರ ಅಧ್ಯಕ್ಷತೆಯಲ್ಲಿ ಉನ್ನತಾಧಿಕಾರ ಸಮಿತಿ ರಚನೆ ಮಾಡುವುದಾಗಿ ತಿಳಿಸಿದರು. ಸಹಕಾರ ಬ್ಯಾಂಕ್​ಗಳಲ್ಲಿರುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ಅಸಲನ್ನು ಕಟ್ಟಿದರೆ ಸಂಪೂರ್ಣ ಬಡ್ಡಿ ಮನ್ನಾ ಮಾಡಲಾಗುತ್ತದೆ. ಬೆಳಗಾವಿ ಸಮೀಪ ಸುಮಾರು 2,000 ಎಕರೆ ಪ್ರದೇಶದಲ್ಲಿ ಹೊಸ ಕೈಗಾರಿಕಾ ಪ್ರದೇಶ ಸ್ಥಾಪನೆ, 500 ಎಕರೆ ಪ್ರದೇಶದಲ್ಲಿ ಫೌಂಡ್ರಿ ಕ್ಲಸ್ಟರ್ ಸ್ಥಾಪನೆ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಏರೋಸ್ಪೇಸ್ ಆಧಾರಿತ ಕೈಗಾರಿಕೆಗಳ ಬೆಳವಣಿಗೆಗೆ ವಿಶೇಷ ಒತ್ತು ನೀಡಲಾಗುತ್ತದೆ ಎಂದು ಪ್ರಕಟಿಸಿದರು.

ಧಾರವಾಡ ಸಮೀಪ ಸುಮಾರು 3,000 ಎಕರೆ ಪ್ರದೇಶದಲ್ಲಿ ಹೊಸ ಕೈಗಾರಿಕಾ ಪ್ರದೇಶ ಸ್ಥಾಪನೆ, ರಾಯಚೂರಿನಲ್ಲಿ ಹತ್ತಿ ಆಧಾರಿತ ಕೈಗಾರಿಕೆಗಳ ಸ್ಥಾಪನೆಗೆ ವಿಶೇಷ ಒತ್ತು, ವಿಜಯಪುರದಲ್ಲಿ ಉತ್ಪಾದನಾ ಕ್ಲಸ್ಟರ್ ಅಂದಾಜು 1,500 ಎಕರೆ ಪ್ರದೇಶದಲ್ಲಿ ಸ್ಥಾಪನೆ, ಉತ್ತರ ಕರ್ನಾಟಕದ ಪ್ರವಾಸೋದ್ಯಮ ಅಭಿವೃದ್ಧಿಗೆ ಸಮಗ್ರ ಕ್ರಿಯಾ ಯೋಜನೆ ರೂಪಿಸಿ ಉದ್ಯೋಗಾವಕಾಶ ಸೃಷ್ಟಿಗೆ ಕ್ರಮ, ಧಾರವಾಡದಲ್ಲಿರುವ ವಾಲ್ಮಿ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ ಉನ್ನತೀಕರಣ, ನಾವು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಬದ್ಧ. ಇವರ ತರಹ ಸುಳ್ಳು ಹೇಳುವುದಿಲ್ಲ ಎಂದರು.

2014-17ರಲ್ಲಿ ಎರಡು ಬಾರಿ ಉತ್ತರ ಕರ್ನಾಟಕ ಭಾಗದ ಮೇಲೆ ಚರ್ಚೆ ನಡೆಯಿತು. ಮಾಧುಸ್ವಾಮಿ 2021ರಲ್ಲಿ ಚರ್ಚೆ ನಡೆದಾಗ 54 ಪದಗಳ ಉತ್ತರ ನೀಡಿದ್ದರು. ಅಷ್ಟೇ ಮಾಡಿದ್ದು ಬಿಟ್ಟರೆ ಇಲ್ಲಿ ತನಕ ಉತ್ತರ ಕರ್ನಾಟಕದ ಚರ್ಚೆಯೇ ನಡೆದಿಲ್ಲ. ಉತ್ತರ ಕರ್ನಾಟಕದ ಚರ್ಚೆ ಆಗಲೇಬೇಕು. ಹಿಂದುಳಿದ ತಾಲೂಕುಗಳು ಉತ್ತರ ಕರ್ನಾಟಕ ಭಾಗದ ಕಡೆ ಹೆಚ್ಚಿವೆ. 114 ತಾಲೂಕುಗಳು ಹಿಂದುಳಿದ ತಾಲೂಕುಗಳು ಅಂತ ನಂಜುಡಪ್ಪ ವರದಿಯಲ್ಲಿ ಗುರುತಿಸಿದ್ದಾರೆ.

ಅತ್ಯಂತ ಹಿಂದುಳಿದ ತಾಲೂಕುಗಳು, ಅತಿ ಹಿಂದುಳಿದ ತಾಲೂಕುಗಳು 26 ಹೈದರಾಬಾದ್​ ಕರ್ನಾಟಕ ಹಾಗೂ ಬೆಳಗಾವಿ ಭಾಗದಲ್ಲಿವೆ. ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಈ ಭಾಗದ ಬಗ್ಗೆ ಯಾಕಪ್ಪ ಉತ್ತರ ಕೊಡಲಿಲ್ಲ? ಮಾಧುಸ್ವಾಮಿ ಕ್ಯಾಬಿನೆಟ್ ಮೀಟಿಂಗ್ ಇದೆ ಅಂದು ಅವತ್ತು ಹೊರಟು ಹೋಗಿದ್ದು ಯಾಕೆ? ಕೇವಲ ಪ್ರಚಾರಕ್ಕೋಸ್ಕರ ಭಾಷಣ ಮಾಡುವುದಲ್ಲ. 32,433 ಕೋಟಿ ಮಾತ್ರ ಇದುವರೆಗೆ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಖರ್ಚಾಗಿದೆ. 114 ತಾಲೂಕುಗಳ ಪೈಕಿ 109 ತಾಲೂಕುಗಳು ಇನ್ನೂ ಹಿಂದೆ ಉಳಿದಿವೆ. ಎಕನಾಮಿಸ್ಟ್ ಒಬ್ಬರ ನೇತೃತ್ವದಲ್ಲಿ ಒಂದು ಕಮಿಟಿ ಫಾರ್ಮ್ ಮಾಡುತ್ತೇವೆ. ಇಷ್ಟು ಹೇಳಿ ಹೊಡಿರಿ ಚಪ್ಪಾಳೆ ಎಂದು ಸಿಎಂ ಸದನದ ಸದಸ್ಯರಿಗೆ ಹೇಳಿದರು.

ಚಪ್ಪಾಳೆ ತಟ್ಟದೆ ಸುಮ್ಮನೇ ಇದ್ದ ಬಿಜೆಪಿ ಸದಸ್ಯರನ್ನು ನೋಡುತ್ತಾ ಮಾತನಾಡಿದ ಸಿಎಂ, ಬೇಡ್ವಾ ನಿಮಗೆ ಇದೆಲ್ಲ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಸದಸ್ಯರು ಮೊದಲು ಹೇಳಿ ನೀವು ಆಮೇಲೆ ಮಾತಾಡುತ್ತೇವೆ ಎಂದರು.

ಸಿಎಂ ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೋಟ ಶ್ರೀನಿವಾಸ ಪೂಜಾರಿ, ಸಿಎಂ ಮಾತು ಕೇವಲ ಸುಳ್ಳು ಭರವಸೆ ನೀಡುತ್ತಿದೆ. ನೀವೆಲ್ಲ ಕೈ ತಟ್ಟಿ ಎನ್ನುವ ಹಾಗಿದೆ ಅವರ ಮಾತು. ಬರ ಪರಿಹಾರಕ್ಕೆ ನಿಮಗೆ ತಾಕತ್ತಿದ್ದರೆ 10 ಸಾವಿರ ಕೋಟಿ ಘೋಷಣೆ ಮಾಡಿ. ಸುದೀರ್ಘ ರಾಜಕೀಯ ಅನುಭವ ಇರುವವರು 2 ಲಕ್ಷ ಸಾಲ ಮನ್ನಾ ಮಾಡುತ್ತೇವೆ ಎಂದು ಸಿಎಂ ಘೋಷಣೆ ಮಾಡಲಿ. ಸರ್ಕಾರಕ್ಕೆ ತಾಕತ್ತಿದ್ದರೆ ಘೋಷಣೆ ಮಾಡಬೇಕಿತ್ತು ಎಂದರು.

ಇದಕ್ಕೆ ಟಕ್ಕರ್ ನೀಡಿದ ಸಿಎಂ ಸಿದ್ದರಾಮಯ್ಯ, ಮೋಸ್ಟ್ ಬ್ಯಾಕ್ ವರ್ಡ್ ಪಾರ್ಟಿ ಬಿಜೆಪಿ ಇದುವರೆಗೆ ಅಪೋಸಿಷನ್ ಲೀಡರ್ ಮಾಡಿಕೊಳ್ಳಲು ಆಗಿಲ್ಲ ಎಂದರು. ಈ ವೇಳೆ ಮತ್ತೆ ಮಾತನಾಡಿದ ಕೋಟ ಶ್ರೀನಿವಾಸ್ ಪೂಜಾರಿ, 1 ಹೆಕ್ಟೇರ್ ಪ್ರದೇಶಕ್ಕೆ 25 ಸಾವಿರ ಪರಿಹಾರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ನಂತರ ಸಿಎಂ ಉತ್ತರ ವಿರೋಧಿಸಿ ಬಿಜೆಪಿ ಸದಸ್ಯರು ಸದನದ ಬಾವಿಗೆ ಇಳಿದು ಧರಣಿ ಆರಂಭಿಸಿದರು. ಬಿಜೆಪಿ ಧರಣಿ ಟೀಕಿಸಿದ ಸಿಎಂ ಸಿದ್ದರಾಮಯ್ಯ, ಕೈಲಾಗದವರು ಮೈ ಪರಚಿಕೊಂಡರು ಎನ್ನೋ ಗಾದೆ ತರಹ ಆಗಿದೆ ಇವರ ಕಥೆ ಎಂದು ಕಿಚಾಯಿಸಿದರು. ಸದನದಲ್ಲಿ ಗದ್ದಲ ಹೆಚ್ಚಾದ ಹಿನ್ನಲೆಯಲ್ಲಿ ಪರಿಷತ್ ಕಲಾಪವನ್ನು ಅನಿರ್ಧಿಷ್ಠಾವಧಿಗೆ ಮುಂದೂಡಿಕೆ ಮಾಡಲಾಯಿತು.

ಬಿಜೆಪಿಯವರಿಗೆ ಇದೇ ಬೇಕಾಗಿತ್ತು ಎಂದು ಮರಿತಿಬ್ಬೇಗೌಡ ಕೆಣಕಿದರು. ಮರಿತಿಬ್ಬೇಗೌಡ ವಿರುದ್ದ ಬಿಜೆಪಿ ಸದಸ್ಯರು ಗರಂ ಆದರು. ಈ‌ ವೇಳೆ ರಾಷ್ಟ್ರಗೀತೆ ಮೊಳಗಿದ್ದರಿಂದ ಬಿಜೆಪಿ ಸದಸ್ಯರು ಸೈಲೆಂಟಾದರು. ಬಳಿಕ ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗಿದ ಬಿಜೆಪಿ ಸದಸ್ಯರಿಗೆ ಕೌಂಟರ್ ಕೊಟ್ಟಂತೆ ಭಾರತ್ ಮಾತಾಕಿ ಜೈ ಎಂದ ಸಿಎಂ ಸದನದಿಂದ ನಿರ್ಗಮಿಸಿದರು.

ಇದನ್ನೂ ಓದಿ: ಮಧ್ಯಮಾವಧಿ, ದೀರ್ಘಾವಧಿ ಸಾಲದ ಅಸಲು ಕಟ್ಟಿದರೆ ಸಂಪೂರ್ಣ ಬಡ್ಡಿ ಮನ್ನಾ: ಸಿಎಂ ಸಿದ್ದರಾಮಯ್ಯ

Last Updated : Dec 15, 2023, 9:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.