ETV Bharat / state

ಶಾಸಕಿ ಅಷ್ಟೇ ಅಲ್ಲ, ಸ್ತ್ರೀರೋಗ ತಜ್ಞೆಯೂ ಹೌದು.. ಗರ್ಭಿಣಿಯರಿಗೆ ಕೋವಿಡ್ ಲಸಿಕೆ ನೀಡಿದ ಡಾ. ಅಂಜಲಿ ನಿಂಬಾಳ್ಕರ್.. - Belgavi latest news

ಸ್ತ್ರೀ ರೋಗ ತಜ್ಞೆಯೂ ಆಗಿರುವ ನಿಂಬಾಳ್ಕರ್, ಶಾಸಕಿ ಆದ ಬಳಿಕ ಅಭ್ಯಾಸ ನಿಲ್ಲಿಸಿದ್ದರು. ಮೂರು ವರ್ಷಗಳ ಬಳಿಕ ಸರ್ಕಾರಿ ಆಸ್ಪತ್ರೆಗೆ ತೆರಳಿ ಗರ್ಭಿಣಿಯರ ಆರೋಗ್ಯ ವಿಚಾರಿಸುವ ಜೊತೆಗೆ ಲಸಿಕೆಯನ್ನೂ ನೀಡಿದ್ದಾರೆ..

ಶಾಸಕಿ ಅಂಜಲಿ ನಿಂಬಾಳ್ಕರ್!
ಶಾಸಕಿ ಅಂಜಲಿ ನಿಂಬಾಳ್ಕರ್!
author img

By

Published : Jul 9, 2021, 1:02 PM IST

ಬೆಳಗಾವಿ : ವೈದ್ಯೆಯೂ ಆಗಿರುವ ಜಿಲ್ಲೆಯ ಖಾನಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಗರ್ಭಿಣಿಯರಿಗೆ ಕೊರೊನಾ ಲಸಿಕೆ ನೀಡಿದ್ದಾರೆ. ಖಾನಾಪುರ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕಿ ಅಂಜಲಿ ನಿಂಬಾಳ್ಕರ್, 20ಕ್ಕೂ ಅಧಿಕ ಗರ್ಭಿಣಿಯರ ಆರೋಗ್ಯ ತಪಾಸಣೆ ಮಾಡಿ ಗಮನ ಸೆಳೆದರು. ಅಲ್ಲದೆ ಕೋವಿಡ್ ಲಸಿಕೆ ಮಹತ್ವವನ್ನು ಗರ್ಭಿಣಿಯರಿಗೆ ತಿಳಿಸಿದರು.

ಗರ್ಭಿಣಿಯರಿಗೆ ಕೋವಿಡ್ ಲಸಿಕೆ ನೀಡಿದ ಶಾಸಕಿ ಅಂಜಲಿ ನಿಂಬಾಳ್ಕರ್!

ಸ್ತ್ರೀ ರೋಗ ತಜ್ಞೆಯೂ ಆಗಿರುವ ನಿಂಬಾಳ್ಕರ್, ಶಾಸಕಿ ಆದ ಬಳಿಕ ಅಭ್ಯಾಸ ನಿಲ್ಲಿಸಿದ್ದರು. ಮೂರು ವರ್ಷಗಳ ಬಳಿಕ ಸರ್ಕಾರಿ ಆಸ್ಪತ್ರೆಗೆ ತೆರಳಿ ಗರ್ಭಿಣಿಯರ ಆರೋಗ್ಯ ವಿಚಾರಿಸುವ ಜೊತೆಗೆ ಲಸಿಕೆಯನ್ನೂ ನೀಡಿದ್ದಾರೆ. ಹೆರಿಗೆ ಆಗುವ ತನಕ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆಯೂ ಅವರು ತಿಳಿ ಹೇಳಿದರು. ಶಾಸಕಿಯ ಸರಳತೆಗೆ ಮಹಿಳೆಯರು ಹರ್ಷ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಶಾಸಕರ ನಿಧಿಯಿಂದ ಖರೀದಿಸಿದ್ದ ಆ್ಯಂಬುಲೆನ್ಸ್ ಓಡಿಸಿ ಚಾಲನೆ ನೀಡುವ ಮೂಲಕ ಗಮನ ಸೆಳೆದಿದ್ದ ಶಾಸಕಿ ಇದೀಗ ಲಸಿಕೆ ನೀಡಿ ಹುಬ್ಬೇರಿಸುವಂತೆ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.